ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ. ಸತ್ಕರ್ಮ ಮಾಡಿದವರಿಗೆ ಒಳ್ಳೆಯ ಫಲ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಕೆಟ್ಟ ಫಲವನ್ನು ನೀಡುತ್ತಾನೆ.
ಇಂದು ಶನಿದೇವನು ಮಕರ ರಾಶಿಯಲ್ಲಿದ್ದಾನೆ ಮತ್ತು ಅವನ ಸ್ಥಿತಿಯು ಹಿಮ್ಮುಖವಾಗಿದೆ. ಸದ್ಯ ಕುಂಭ, ಧನು, ಮಕರ ರಾಶಿಯವರಿಗೆ ಶನಿಯ ಸಾಡೇ ಸಾಥಿ ನಡೆಯುತ್ತಿದೆ. ಇದಲ್ಲದೆ, ಮಿಥುನ ಮತ್ತು ತುಲಾ ರಾಶಿಯ ಜನರು ಶನಿಯ ಧೈಯಾದಿಂದ ಪ್ರಭಾವಿತರಾಗುತ್ತಾರೆ.
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯ ಪ್ರಭಾವ ಹೆಚ್ಚಾಗಿ ಬೀರುತ್ತಿದೆ. ಇನ್ನೊಂದೆಡೆ ಮಕರ, ಕುಂಭ, ಮೀನ ರಾಶಿಯವರಿಗೆ ಶನಿ ಸಾಡೇ ಸಾತಿ ಹಂತ ನಡೆಯುತ್ತಿದೆ. ಜೂನ್ 5 ರಿಂದ ಶನಿಯು ಹಿಮ್ಮುಖವಾಗಿ ಚಲಿಸಲಿದ್ದು, ಈ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದರಿಂದ ಶನಿಯ ದುಷ್ಪರಿಣಾಮಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಇಂದು ಶನಿ ಜಯಂತಿಯ ದಿನವು ಶನಿಯ ಸಾಡೇ ಸಾತಿ ಮತ್ತು ಧೈಯಾದಿಂದ ಬಳಲುತ್ತಿರುವ ಜನರಿಗೆ ಬಹಳ ವಿಶೇಷವಾಗಿದೆ. ಇದಲ್ಲದೇ ಯಾರ ಜಾತಕದಲ್ಲಿ ಶನಿ ಬಲಹೀನನಾಗಿರುತ್ತಾನೋ ಅಂತಹವರು ಇಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.
Shani jayanti 2021 : ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪುಗಳಿಗೆ ಸರಿಯಾದ ಫಲ ನೀಡುತ್ತಾನೆ ಶನಿದೇವ ಹಾಗಾಗಿ ಶಾಸ್ತ್ರಗಳಲ್ಲಿ ಶನಿದೇವರ ಪೂಜೆಗೆ ವಿಶೇಷ ಮಹತ್ವ ಇದೆ. ಸರಿಯಾದ ರೀತಿಯಲ್ಲಿ ಶನಿದೇವರ ಪೂಜೆ ಮಾಡಿದರೆ ನಮ್ಮ ಗ್ರಹಗತಿಗಳು ಬದಲಾಗಲಿವೆ.
ಶನಿ ಅಮವಾಸ್ಯೆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವುದರಿಂದ ಉತ್ತಮ ಫಲ ಸಿಗುತ್ತದೆ. ಅಶ್ವತ್ಥ ಮರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ. ಆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಮಾಡಿ ದೀಪ ಬೆಳಗುವುದರಿಂದ ಶನಿದೋಷದಿಂದ ಮುಕ್ತರಾಗಬಹುದಂತೆ.
ಶನಿದೇವ ಶೀಘ್ರವೆ ಕೋಪಿಸಿಕೊಳ್ಳುವ ಹಾಗೂ ದಂಡ ನೀಡುವ ದೇವನಾಗಿದ್ದಾನೆ ಎಂಬುದು ಬಹುತೇಕ ಜನರ ನಂಬಿಕೆಯಾಗಿದೆ. ಆದರೆ, ಇದು ಸತ್ಯವಲ್ಲ. ಮಂದಗತಿಯಲ್ಲಿ ಸಾಗುವ ಶನಿದೇವ ನಿಮ್ಮ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ, ಅದನ್ನು ಕೂಡ ಅಷ್ಟೇ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.