ಹುಟ್ಟಿನಿಂದಲೇ ಬಹಳ ಬುದ್ಧಿವಂತರಾಗಿರುತ್ತಾರೆ ಈ ಮೂರೂ ರಾಶಿಚಕ್ರದ ಜನರು, ಇವರ ಮೇಲಿರುತ್ತದೆ ಗಣಪತಿಯ ವಿಶೇಷ ಅನುಗ್ರಹ

ಮೊದಲು ಪೂಜಿಸಲ್ಪಡುವ ಗಣೇಶ ಬುದ್ಧಿವಂತಿಕೆಯ ದೇವರು. ಗಣಪತಿ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ  ಆ ವ್ಯಕ್ತಿಯು ತನ್ನ ಬುದ್ಧಿವಂತಿಕೆಯಿಂದ ಜಗತ್ತನ್ನು ಗೆಲ್ಲುತ್ತಾನೆ.

Written by - Ranjitha R K | Last Updated : Sep 13, 2021, 06:39 PM IST
  • ಇವು ಗಣಪತಿಯ ನೆಚ್ಚಿನ ರಾಶಿಚಕ್ರ ಚಿಹ್ನೆಗಳು
  • ಗಣಪತಿಯ ವಿಶೇಷ ಅನುಗ್ರಹವು ಜೀವನದುದ್ದಕ್ಕೂ ಇವರ ಮೇಲಿರುತ್ತದೆ
  • ಈ ರಾಶಿಯವರು ಬುದ್ಧಿವಂತರು ಮತ್ತು ಧೈರ್ಯಶಾಲಿಗಳು
ಹುಟ್ಟಿನಿಂದಲೇ ಬಹಳ ಬುದ್ಧಿವಂತರಾಗಿರುತ್ತಾರೆ ಈ ಮೂರೂ ರಾಶಿಚಕ್ರದ ಜನರು, ಇವರ ಮೇಲಿರುತ್ತದೆ ಗಣಪತಿಯ ವಿಶೇಷ ಅನುಗ್ರಹ title=
ಇವು ಗಣಪತಿಯ ನೆಚ್ಚಿನ ರಾಶಿಚಕ್ರ ಚಿಹ್ನೆಗಳು (file photo)

ನವದೆಹಲಿ : ಮೊದಲು ಪೂಜಿಸಲ್ಪಡುವ ಗಣೇಶ (Lord Ganesh) ಬುದ್ಧಿವಂತಿಕೆಯ ದೇವರು. ಗಣಪತಿ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ  ಆ ವ್ಯಕ್ತಿಯು ತನ್ನ ಬುದ್ಧಿವಂತಿಕೆಯಿಂದ ಜಗತ್ತನ್ನು ಗೆಲ್ಲುತ್ತಾನೆ. ಗಣಪತಿ ಸ್ಥಾಪನೆಯ (Ganpati Sthapana) ಸಮಯದಲ್ಲಿ, ಭಕ್ತಿಯಿಂದ ಗಣೇಶನ ಮುಂದೆ ಇಡುವ ಬಯಕೆಗಳು ಮತ್ತು ಬೇಡಿಕೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಅವನ ಆರಾಧನೆಯಿಂದಾಗಿ ಮನೆಯಲ್ಲಿ ಸಂತೋಷ,   ಸಮೃದ್ಧಿ ನೆಲೆಯಾಗುತ್ತದೆ. ಗಣೇಶನನ್ನು ಪೂಜಿಸಿದರೆ ಎಂದಿಗೂ, ಹಣದ ಸಮಸ್ಯೆ ಎದುರಾಗುವುದಿಲ್ಲವಂತೆ. ಆದರೂ, ಜ್ಯೋತಿಷ್ಯದ ಪ್ರಕಾರ, ಈ ಮೂರು  ರಾಶಿಗಳ  (Zodiac Sign) ಮೇಲೆ ಗಣೇಶನ ವಿಶೇಷ ಅನುಗ್ರಹವಿದೆ. ಗಣಪತಿಗೆ ಪ್ರಿಯವಾದ ಆ ರಾಶಿಚಕ್ರ ಚಿಹ್ನೆಗಳು ಯಾವುವು ನೋಡೋಣ. 

ಮೇಷ: 
ಮೇಷ ರಾಶಿಯ ಜನರು ಯಾವಾಗಲೂ ಗಣಪತಿಯಿಂದ (Lord Ganesha) ಆಶೀರ್ವದಿಸಲ್ಪಡುತ್ತಾರೆ. ಆದ್ದರಿಂದ ಈ ಜನರು ತುಂಬಾ ಧೈರ್ಯಶಾಲಿ ಮತ್ತು ಬುದ್ಧಿವಂತರಾಗಿರುತ್ತಾರೆ. ಅವರ ಈ ಗುಣಗಳು ಅವರ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತದೆ. ಈ ಜನರು ಅಪಾಯಗಳನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಈ ರಾಶಿಯವರು ಯಾವಾಗಲೂ ಗಣೇಶನನ್ನು ತಮ್ಮ ಪ್ರಧಾನ ದೇವತೆಯಂತೆ ಪೂಜಿಸಬೇಕು.

ಇದನ್ನೂ ಓದಿ: ಶನಿ-ಗುರು ಒಟ್ಟಾಗಿ ಏರ್ಪಡಲಿದೆ 'ನೀಚ ಭಂಗ ರಾಜ ಯೋಗ ' ಈ ನಾಲ್ಕು ರಾಶಿಯವರಿಗೆ ಭಾರೀ ಶುಭ

ಮಿಥುನ: 
ಈ ರಾಶಿಯ (Zodiac sign) ಜನರ ಮೇಲೆ ಗಣಪತಿಯ ಅನುಗ್ರಹವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಅವರನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ. ಸಾಮಾನ್ಯವಾಗಿ, ಈ ರಾಶಿಚಕ್ರದ ಜನರಿಗೆ ಓದುವುದು ಮತ್ತು ಬರೆಯುವುದರಲ್ಲಿ ಬಹಳ ಮುಂದಿರುತ್ತಾರೆ. ಆದ್ದರಿಂದ ಅವರು ಶಾಲಾ ದಿನಗಳಿಂದ ಎಲ್ಲರಿಂದಲೂ ಗುರುತಿಸಲ್ಪಡುತ್ತಾರೆ. ಈ ಜನರು ತುಂಬಾ ಕರುಣಾಮಯಿಗಳು ಕೂಡಾ. 

ಮಕರ: 
ಈ ರಾಶಿಚಕ್ರದ ಜನರು ಬುದ್ಧಿವಂತರು ಹಾಗೂ ಗಣಪತಿಯ ಅನುಗ್ರಹದಿಂದ (lord ganesga blesings) ಶ್ರಮಜೀವಿಗಳು. ಈ ಕಾರಣಕ್ಕಾಗಿ, ಕೆಲಸ ಮಾಡುವ ದಕ್ಷತೆ, ಸರಿಯಾದ ಯೋಜನೆ ಮತ್ತು ಕಠಿಣ ಪರಿಶ್ರಮವು ಅವರಿಗೆ ಪ್ರತಿ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ. ಸಾಮಾನ್ಯವಾಗಿ ಈ ರಾಶಿಚಕ್ರದ ಜನರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. 

ಇದನ್ನೂ ಓದಿ: Sun Transit September 2021 :ಸೆಪ್ಟೆಂಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಇದಕ್ಕೂ ಮುನ್ನ ಈ ರಾಶಿಯವರಿಗೆ ಸಿಗಲಿದೆ ಶುಭ ಫಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News