ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು

ರಾಶಿಚಕ್ರದ ಚಿಹ್ನೆಗಳ ಹೊರತಾಗಿ, ಹೆಸರಿನ ಮೊದಲ ಅಕ್ಷರದಿಂದ ಕೂಡಾ ವ್ಯಕ್ತಿಯ ಭವಿಷ್ಯವನ್ನು ಕಂಡುಹಿಡಿಯಲಾಗುತ್ತದೆ. ಕೆಲವು ವಿಶೇಷ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಜನರು ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

Written by - Zee Kannada News Desk | Last Updated : Mar 2, 2022, 08:47 AM IST
  • ಅದೃಷ್ಟದ ಬೆಂಬಲ ಇವರಿಗೆ ಸದಾ ಇರುತ್ತದೆ
  • ಕಿರಿಯ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ
  • ಧನ ಸಂಪತ್ತಿನ ಕೊರತೆ ಇರುವುದೇ ಇಲ್ಲ
ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದಿಂದ  ಹೆಸರು ಆರಂಭವಾಗುವವರು  title=
ಕಿರಿಯ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಇವರು (file photo)

ನವದೆಹಲಿ: ಜ್ಯೋತಿಷ್ಯದ ಪ್ರಕಾರ ರಾಶಿಚಕ್ರದ ಚಿಹ್ನೆಗಳ (Zodiac sign)ಸಹಾಯದಿಂದ  ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಅದೇ ರೀತಿ ಹೆಸರಿನ ಮೊದಲ ಅಕ್ಷರ ಕೂಡಾ ವು ವ್ಯಕ್ತಿಯ ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ (Astrology by name).  ಹೆಸರು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು,  ಸಣ್ಣ ವಯಸ್ಸಿನಲ್ಲಿಯೇ ಅಪಾರ ಸಂಪತ್ತನ್ನು ಹೊಂದುತ್ತಾರೆ. 

B ಅಕ್ಷರ :
'B' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಜೀವಿಗಳು ಮತ್ತು ಅದೃಷ್ಟವಂತರು.  ಮಾತ್ರವಲ್ಲ ಇವರು ಬಹಳ ಬುದ್ಧಿವಂತರು ಕೂಡಾ. ಅವರು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅಂತಹ ಜನರು ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ (Name astrology).  

ಇದನ್ನೂ ಓದಿ : Mercury Transit: ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ 5 ರಾಶಿಯವರಿಗೆ ಉತ್ತಮ ಲಾಭ !

ಅಕ್ಷರ D : 
ಈ ಹೆಸರಿನ ಜನರ ಜೊತೆ  ಪ್ರತಿ ಕ್ಷಣವೂ ಅದೃಷ್ಟವಿರುತ್ತದೆ. ಅಲ್ಲದೆ, ಅವರು ಯಾವುದೇ ಕೆಲಸದಲ್ಲಿಯೂ ಸಂಪೂರ್ಣ ಶ್ರಮ ವಹಿಸುತ್ತಾರೆ. ಅವರು ಕಠಿಣ ಪರಿಶ್ರಮದಿಂದಲೇ  ಜೀವನದಲ್ಲಿ ಎಲ್ಲವನ್ನೂ ಪಡೆಯುತ್ತಾರೆ (Astrology by name). ತಮ್ಮ ತೀಕ್ಷ್ಣ ಬುದ್ಧಿಶಕ್ತಿಯ ಸಹಾಯದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಸಾಧನೆ ಮಾಡುತ್ತಾರೆ. 

ಅಕ್ಷರ H :
ಈ ಅಕ್ಷರದಿಂದ ಆರ್ಮಭಾವಾಗುವ ಹೆಸರು ಇದ್ದರೆ, ಅವರನ್ನು ಬಹಳ  ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರು ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ (name astrology prediction). ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ಇವರು ಚಿಕ್ಕ ವಯಸ್ಸಿನಲ್ಲೇ ನಿರ್ಧರಿಸಿ ಅದರಲ್ಲಿ ಯಶಸ್ಸನ್ನೂ ಪಡೆಯುತ್ತಾರೆ. 

ಇದನ್ನೂ ಓದಿ : Shani Transit: 22 ವರ್ಷಗಳ ನಂತರ ಈ ರಾಶಿಯವರ ಮೇಲೆ ಸಾಡೇ ಸಾತಿ ಶನಿ ಪ್ರಭಾವ

ಅಕ್ಷರ L : 
ಈ ಅಕ್ಷರದಿಂದ ಹೆಸರು ಆರಂಭವಾಗುವವರು ತುಂಬಾ ಕಠಿಣ ಪರಿಶ್ರಮಪಡುತ್ತಾರೆ.  ಇವರು ಬಹಳ ಬುದ್ಧಿವಂತರು. ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗುತ್ತದೆ (astrology predictions). ಅದೇ ಸಮಯದಲ್ಲಿ, ಅವರು ತಮ್ಮ ಜೀವನದುದ್ದಕ್ಕೂ ಯಾವುದೇ ಸೌಕರ್ಯಗಳನ್ನು ಪಡೆಯುತ್ತಾರೆ.   ಇದಲ್ಲದೆ, ಅವರು ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News