Planetary Transits: ಸೂರ್ಯನ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರಿಗೆ ಭಾರೀ ನಷ್ಟ

Planetary Transits: ಜ್ಯೋತಿಷಿಗಳ ಪ್ರಕಾರ, ಸೂರ್ಯನು ಮಿಥುನ ರಾಶಿ ಪ್ರವೆಶಿಸಿದ್ದು, ಜುಲೈ 15ರ ವರೆಗೆ ಆ ರಾಶಿಯಲ್ಲೇ ಉಳಿಯಲಿದ್ದಾನೆ. ಅಂದರೆ ಈ ಸಂದರ್ಭದಲ್ಲಿ ಸೂರ್ಯ ಮತ್ತು ಶನಿ ಕ್ರಮವಾಗಿ ಆರು ಮತ್ತು ಎಂಟನೇ ರಾಶಿಯಲ್ಲಿರುತ್ತಾರೆ. 

Written by - Ranjitha R K | Last Updated : Jun 17, 2021, 04:53 PM IST
  • ಸೂರ್ಯನ ರಾಶಿ ಪರಿವರ್ತನೆಯಿಂದ ನಾಲ್ಕು ರಾಶಿಯವರಿಗೆ ಭಾರೀ ಲಾಭ
  • ಈ ಮೂರು ರಾಶಿಯವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು
  • ಯಾರಿಗೆ ಮಿಶ್ರಫಲ ತಿಳಿಯಿರಿ
Planetary Transits: ಸೂರ್ಯನ ರಾಶಿ ಪರಿವರ್ತನೆಯಿಂದ  ಈ ಮೂರು ರಾಶಿಯವರಿಗೆ ಭಾರೀ ನಷ್ಟ title=
ಸೂರ್ಯನ ರಾಶಿ ಪರಿವರ್ತನೆ (file photo zee news)

ನವದೆಹಲಿ : ಈ ತಿಂಗಳ ಜೂನ್ 15 ರಂದು ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿ ಪ್ರವೇಶಿಸಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯಿಂದ (sun transit 2021 ) ಕೆಲ ರಾಶಿಗಳಿಗೆ ಶುಭ ಫಲವಾದರೆ,  ಕೆಲವು ರಾಶಿಗಳ ಮೆಲೆ ಅಶುಭ ಫಲ ಬೀರಲಿದೆ. 

ಜುಲೈ 15 ರವರೆಗೆ ಶಡಾಷ್ಟಕ ಯೋಗ :
ಜ್ಯೋತಿಷಿಗಳ (Astrology) ಪ್ರಕಾರ, ಸೂರ್ಯನು ಮಿಥುನ ರಾಶಿ (Gemini)ಪ್ರವೆಶಿಸಿದ್ದು, ಜುಲೈ 15ರ ವರೆಗೆ ಆ ರಾಶಿಯಲ್ಲೇ ಉಳಿಯಲಿದ್ದಾನೆ. ಅಂದರೆ ಈ ಸಂದರ್ಭದಲ್ಲಿ ಸೂರ್ಯ ಮತ್ತು ಶನಿ ಕ್ರಮವಾಗಿ ಆರು ಮತ್ತು ಎಂಟನೇ ರಾಶಿಯಲ್ಲಿರುತ್ತಾರೆ. ಇದನ್ನು ಶಡಾಷ್ಟಕ ಯೋಗ ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಶನಿ (saturn) ಶತ್ರುಗಳಾಗಿರುವುದರಿಂದ, ಇದು ಕೆಲ ರಾಶಿಗಳ ಮೇಲೆ ಅಶುಭ ಫಲಗಳನ್ನು ಬೀರುತ್ತದೆ. 

ಇದನ್ನೂ ಓದಿ : Vastu : ಈ 5 ನೆರಳು ಮನೆಯ ಮೇಲೆ ಬೀಳಲೇ ಬಾರದು..?

ಈ 5 ರಾಶಿಚಕ್ರ ಚಿಹ್ನೆಗಳಿಗೆ ಮಿಶ್ರ ಫಲ :
ಮಿಥುನ ರಾಶಿಗೆ ಸೂರ್ಯ ಆಗಮಿಸುತ್ತಿದ್ದಂತೆ, (Planetary Transits) ವೃಷಭ ರಾಶಿ, ಮಿಥುನ, ತುಲಾ, ಧನು ಮತ್ತು ಕುಂಭ ರಾಶಿಯ ಮೇಲೆ ಮಿಶ್ರಫಲ ಸಿಗುತ್ತದೆ. ಈ 5 ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಜನರಿಗೆ ಧನಲಾಭವಾಗುತ್ತದೆ. ಆದರೆ ಖರ್ಚುಗಳೂ ಸಹ ಬರುತ್ತವೆ. ಆರೋಗ್ಯ ಸಮಸ್ಯೆಗಳೂ ಕಾಡಬಹುದು. 

ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು :
ಕಟಕ,  ವೃಶ್ಚಿಕ ಮತ್ತು ಮೀನ ರಾಶಿಯ ಜನರು ಈ ಒಂದು ತಿಂಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ 3 ರಾಶಿಚಕ್ರ ಚಿಹ್ನೆಗಳ ಜನರ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.  ವಿವಾದಗಳು ತಲೆದೋರಬಹುದು.   ಹಣಕಾಸಿನ ನಷ್ಟ ಸಂಭವಿಸಬಹುದು. ಆರೋಗ್ಯ ಸಮಸ್ಯೆಗಳೂ (health problems) ಕಾಡಬಹುದು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹೊಸ ಕೆಲಸಗಳಿಗೆ ಕೈ ಹಾಕುವುದು ಬೇಡ. ಸಾಲ ತೆಗೆದುಕೊಳ್ಳಬೇಡಿ. 
ಇದನ್ನೂ ಓದಿ : Zodiac Sign Combination : ಈ ರಾಶಿಗಳ ಜನರು ಒಬ್ಬರಿಗೊಬ್ಬರು ಹೊಂದುವುದೇ ಇಲ್ಲ..!

ಈ ರಾಶಿಯವರಿಗೆ ಉತ್ತಮ ಯೋಗ : 
ಮಿಥುನ ರಾಶಿಯಲ್ಲಿ ಸೂರ್ಯನ ಆಗಮನದೊಂದಿಗೆ, ಮೇಷ, ಸಿಂಹ, ಕನ್ಯಾರಾಶಿ ಮತ್ತು ಮಕರ ರಾಶಿಯವರಿಗೆ ಶುಭ ಫಲ ಸಿಗುತ್ತದೆ. ಈ 4 ರಾಶಿಯ (Zodiac sign) ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುತ್ತಾರೆ. ನಿಂತು ಹೋಗಿದ್ದ ಹಣ ಕೈಸೇರುವ ಸಾಧ್ಯತೆ ಇದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆಸ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಲಾಭವಾಗಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News