Zodiac Sign Combination : ಈ ರಾಶಿಗಳ ಜನರು ಒಬ್ಬರಿಗೊಬ್ಬರು ಹೊಂದುವುದೇ ಇಲ್ಲ..!

ನಾವು ನಮ್ಮ ಜೀವನದಲ್ಲಿ ಅನೇಕರನ್ನು ಭೇಟಿಯಾಗುತ್ತೇವೆ. ಕೆಲವರು ನಮಗೆ ನೋಡಿದ ಕೂಡಲೇ ಇಷ್ಟವಾಗುತ್ತಾರೆ, ನಮ್ಮೊಂದಿಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಇನ್ನು ಕೆಲವು ಏನೂ ಕಾರಣವಿಲ್ಲದೆಯೇ ಇಷ್ಟವಾಗುವುದೇ ಇಲ್ಲ. ಯಾವತ್ತೂ ನೋಡಿದರೂ ಅವರೊಂದಿಗೆ ಇರುಸುಮುರುಸು ಕಂಡು ಬರುತ್ತದೆ.

Written by - Ranjitha R K | Last Updated : Jun 16, 2021, 03:12 PM IST
  • ರಾಶಿಯ ಮೂಲಕ Compatibility ಚೆಕ್ ಮಾಡಿಕೊಳ್ಳಿ
  • ಶತ್ರು ಗ್ರಹಗಳು ವಿವಾದಕ್ಕೆ ಕಾರಣವಾಗುತ್ತವೆ
  • ಕೆಲವು ರಾಶಿಚಕ್ರ ಚಿಹ್ನೆಗಳು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ
Zodiac Sign Combination : ಈ ರಾಶಿಗಳ ಜನರು ಒಬ್ಬರಿಗೊಬ್ಬರು ಹೊಂದುವುದೇ ಇಲ್ಲ..!

ನವದೆಹಲಿ : ನಾವು ನಮ್ಮ ಜೀವನದಲ್ಲಿ ಅನೇಕರನ್ನು ಭೇಟಿಯಾಗುತ್ತೇವೆ. ಕೆಲವರು ನಮಗೆ ನೋಡಿದ ಕೂಡಲೇ ಇಷ್ಟವಾಗುತ್ತಾರೆ, ನಮ್ಮೊಂದಿಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಇನ್ನು ಕೆಲವು ಏನೂ ಕಾರಣವಿಲ್ಲದೆಯೇ ಇಷ್ಟವಾಗುವುದೇ ಇಲ್ಲ. ಯಾವತ್ತೂ ನೋಡಿದರೂ ಅವರೊಂದಿಗೆ ಇರುಸುಮುರುಸು ಕಂಡು ಬರುತ್ತದೆ.  ಜ್ಯೋತಿಷ್ಯದ (Astrology) ಪ್ರಕಾರ, ಇದಕ್ಕೆ ಜನರ ಗ್ರಹಗತಿಗಳು ಕಾರಣವಂತೆ. ಸ್ನೇಹಪರ ಗ್ರಹಗಳು ಭೇಟಿಯಾದರೆ, ಪರಸ್ಪರ ಸಂಬಂಧ ಚೆನ್ನಾಗಿರುತ್ತದೆ. ಶತ್ರು ಗ್ರಹಗಳಾದರೆ ಸಂಬಂಧ ಹೊಂದಿಕೊಳ್ಳುವುದೇ (Compatibility Issues) ಇಲ್ಲ. 

ಹಾಗಿದ್ದರೆ ಯಾವೆಲ್ಲಾ ರಾಶಿಗಳು ಒಂದಕ್ಕೊಂದು ಹೊಂದುವುದೇ ಇಲ್ಲ (Zodiac sign combination) ಎನ್ನುವುದನ್ನು ನೋಡೋಣ.. 

ಮೇಷ ಮತ್ತು ಕಟಕ :
ಮೇಷ ಮತ್ತು ಕಟಕ ರಾಶಿಯ ಜನರು ಯಾವತ್ತೂ ಹೊಂದಿಕೊಳ್ಳುವುದೇ ಇಲ್ಲವಂತೆ. ಮೇಷ ರಾಶಿಯ (Zodiac Sign) ಜನರು ಮೊದಲು ತಮ್ಮ ಬಗ್ಗೆ ಯೋಚಿಸುತ್ತಾರೆ. ಆದರೆ ಕಟಕ ರಾಶಿಯವರು, ಇತರರ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಇತರರ ಬಗ್ಗೆ ಯೋಚಿಸುವುದು ಮಾತ್ರವಲ್ಲ, ಬೇರೆಯವರು ಕೂಡಾ ತಮ್ಮ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಹೀಗಿರುವಾಗ ಸಂಬಂಧ ಹದಗೆಡುವುದರಲ್ಲಿ ಅನುಮಾನವೇ ಇಲ್ಲ.  ಇಬ್ಬರ ನಡುವೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಬರುವುದಿಲ್ಲ. 

ಇದನ್ನೂ ಓದಿ : Swapna Shastra: ಬೆಳಗಿನ ಜಾವ ಈ 10 ಕನಸುಗಳು ಬಿದ್ದರೆ, ಅಪಾರ ಸಂಪತ್ತು ನಿಮ್ಮದಾಗುತ್ತೆ

ಕುಂಭ ಮತ್ತು ವೃಷಭ ರಾಶಿ: 
ಕುಂಭ ಮತ್ತು ವೃಷಭ ರಾಶಿಯ ಜನರು ಸಹ ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ಈ ಎರಡು ರಾಶಿಗಳ ಜನರು ಸಹಭಾಗಿತ್ವದಲ್ಲಿ ವ್ಯವಹಾರ ನಡೆಸಿದರೆ ಅಥವಾ ಮದುವೆಯಾದರೆ ಬಹಳ ಕಷ್ಟಕರವಾಗುತ್ತದೆ. ವೃಷಭ ರಾಶಿ (Vrushabha rashi) ಜನರು ತುಂಬಾ ಹಠಮಾರಿಗಳಾಗಿರುತ್ತಾರೆ. ಮತ್ತು ಕುಂಭರಾಶಿಯವರು ಸ್ವತಂತ್ರ ಮನೋಭಾವವನ್ನು ಹೊಂದಿರುತ್ತಾರೆ. ಹೀಗಿರುವಾಗ ಸಣ್ಣ ಸಣ್ಣ ವಿಚಾರಗಳಿಗೂ ಇಬ್ಬರ ನಡುವೆ ಮನಸ್ತಾಪ ಬರುತ್ತದೆ. ವಿವಾದಗಳು ಹುಟ್ಟಿಕೊಳ್ಳುತ್ತವೆ. ಪ್ರತಿ ದಿನ ಸಮಸ್ಯೆಗಳೇ ಎದುರಾಗುತ್ತಿರುತ್ತವೆ. 

ಮೀನ ಮತ್ತು ಮಿಥುನ :  
ಮೀನ ಮತ್ತು ಮಿಥುನ (Gemini) ರಾಶಿಯವರು ಕೂಡಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಇವರ ಮಧ್ಯೆ ಜಗಳಗಳೇ ಹೆಚ್ಚಾಗಿರುತ್ತದೆ. ಮಿಥುನ ರಾಶಿಯ ಜನರು ಹೇಳುವುದು ಒಂದು ಮಾಡುವುದು ಒಂದು ಎಂಬಂಥ ಗುಣವನ್ನು ಹೊಂದಿರುತ್ತಾರೆ. ಮೀನರಾಶಿಯವರು ನೇರ ನುಡಿಯ ಸ್ವಭಾವದವರು ಮತ್ತು ಅತ್ಯಂತ ಭಾವುಕರು. ಮೀನ (Meena rashi) ರಾಶಿಯವರಿಗೆ ಹೇಳಿದ ಕೆಲಸ ಮಾಡದೆ ಹೋದರೆ ಅತಿಯಾಗಿ ನೊಂದುಕೊಳ್ಳುತ್ತಾರೆ. ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಈ ಎರಡೂ ರಾಶಿಗಳ ಜನರ ಮಧ್ಯೆ ಜಗಳಗಳು ಆಗುತ್ತಲೇ ಇರುತ್ತವೆ.  

ಇದನ್ನೂ ಓದಿ : Vastu Tips : ಕರ್ಪೂರದಿಂದ ನಿವಾರಣೆ ಮಾಡಿ ನಿಮ್ಮ ಮನೆಯ ವಾಸ್ತು ದೋಷ : ಹೇಗೆ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News