Raja Yoga In Kundali: ಜನ್ಮಜಾತಕದಲ್ಲಿ ರಾಜಯೋಗ ಹೇಗೆ ನಿರ್ಮಾಣಗೋಳ್ಳುತ್ತೆ ಗೊತ್ತಾ? ಜೀವನದಲ್ಲಿ ಸಿಗುತ್ತೆ ದೇವಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಸಾಥ್

Raja Yoga In Horoscope - ಜಾತಕದ ಒಂಬತ್ತನೇ ಮನೆಯ ಅಧಿಪತಿ, ಸೂರ್ಯ, ಚಂದ್ರ ಅಥವಾ ಗುರು ಇದ್ದರೆ, ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ರಾಜಯೋಗದ ಆನಂದವನ್ನು ಪಡೆಯುತ್ತಾನೆ. ಇಂತಹ ಕುಂಡಲಿ ಇರುವವರು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. 

Written by - Nitin Tabib | Last Updated : Dec 17, 2021, 08:00 PM IST
  • ಇಂತಹ ಕುಂಡಲಿಯವರಿಗೆ ಸಿಗುತ್ತದೆ ರಾಜಯೋಗ
  • ಜನ್ಮ ಜಾತಕದ 9ನೇ ಸ್ಥಾನ ತುಂಬಾ ವಿಶೇಷವಾಗಿದೆ.
  • ಇವರು ತಮ್ಮ ಜೀವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ.
Raja Yoga In Kundali: ಜನ್ಮಜಾತಕದಲ್ಲಿ ರಾಜಯೋಗ ಹೇಗೆ ನಿರ್ಮಾಣಗೋಳ್ಳುತ್ತೆ ಗೊತ್ತಾ? ಜೀವನದಲ್ಲಿ ಸಿಗುತ್ತೆ ದೇವಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಸಾಥ್ title=
Raja Yoga In Horoscope(Representational Imaga)

ನವದೆಹಲಿ: Horoscope Raja Yoga - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ವ್ಯಕ್ತಿಯ ಭವಿಷ್ಯವು (Future) ಆತನ ಜಾತಕದಿಂದ ತಿಳಿಯುತ್ತದೆ. ಯಾವುದೇ ವ್ಯಕ್ತಿಯ ಜಾತಕದ ಒಂಬತ್ತನೇ ಮನೆ ಆತನ ಅದೃಷ್ಟದ ಬಗ್ಗೆ ಹೇಳುತ್ತದೆ. ಯಾರ ಜಾತಕವು ಒಂಬತ್ತನೇ ಮನೆಯಲ್ಲಿದೆಯೋ ಅವರು ಅದೃಷ್ಟವಂತರು ಎಂದು ಜ್ಯೋತಿಷಿಗಳು ನಂಬುತ್ತಾರೆ. ಇದಲ್ಲದೆ, ಜಾತಕದ ಒಂಬತ್ತನೇ ಮನೆಯು ಧರ್ಮ ಮತ್ತು ಕರ್ಮದ ಬಗ್ಗೆಯೂ ಹೇಳುತ್ತದೆ. ಅಲ್ಲದೆ, ಅದರ ಒಳ್ಳೆಯತನದಿಂದಾಗಿ, ಒಬ್ಬ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಒಂಬತ್ತನೇ ಮನೆಯ ಅಧಿಪತಿಯು ಜಾತಕದಲ್ಲಿ ರಾಜಯೋಗವನ್ನು ಸೃಷ್ಟಿಸುತ್ತಾನೆ (Raja Yoga Kundali). 9ನೇ ಮನೆಯಿಂದ ಜಾತಕದಲ್ಲಿ ರಾಜಯೋಗ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಜಾತಕದ ಒಂಬತ್ತನೇ ಮನೆ (Ninth House of Horoscope)
ಜಾತಕದ ಒಂಬತ್ತನೇ ಮನೆಯ ಅಧಿಪತಿ, ಸೂರ್ಯ, ಚಂದ್ರ ಅಥವಾ ಗುರು ಇದ್ದರೆ, ಒಬ್ಬ ವ್ಯಕ್ತಿಯು ತನ್ನ ಜೀವನದಲಿ ರಾಜಯೋಗದ ಆನಂದವನ್ನು ಪಡೆಯುತ್ತಾನೆ.  ಇಂತಹ ಜಾತಕದ ವ್ಯಕ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಇದರೊಂದಿಗೆ ಇವರಿಗೆ ಜೀವನದಲ್ಲಿ ಘನತೆ ಗೌರವ ಸಿಗುತ್ತದೆ.  ಅದೇ ರೀತಿ ಒಂಬತ್ತನೇ ಮನೆಯು ಅತ್ಯಂತ ಬಲಿಷ್ಠ ಮನೆಯಾಗಿದೆ. ಇದರೊಂದಿಗೆ ಇದನ್ನು ಲಕ್ಷ್ಮಿ ಸ್ಥಳವೆಂದು ಕೂಡ  ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಂಬತ್ತನೇ ಮನೆಯು ಹತ್ತನೇ ಮನೆಗೆ ಸಂಬಂಧಿಸಿದ್ದರೆ ಧರ್ಮ ಕರ್ಮಾಧಿಪತಿ ರಾಜಯೋಗವು ರೂಪುಗೊಳ್ಳುತ್ತದೆ.

ಇದನ್ನೂ ಓದಿ-ಮಕರ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆ ಈ ರಾಶಿಯವರಿಗೆ ಆಗಲಿದೆ ಧನಲಾಭ

ಜಾತಕ ಒಂಬತ್ತನೇ ಮನೆ ಮಂಗಳಕರವಾಗಿದೆ (Horoscope Ninth House is Auspicious)
ಪರಾಶರ ಋಷಿಗಳ ಪ್ರಕಾರ, ಜಾತಕದ ಒಂಬತ್ತನೇ ಮನೆಯು ಅತ್ಯಂತ ಮಂಗಳಕರವಾಗಿದೆ. ಈ ಮನೆಯ ಅಧಿಪತಿಯು ಹತ್ತನೇ ಮನೆಗೆ ಸಂಬಂಧಿಸಿದ್ದರೆ, ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಇದಲ್ಲದೆ, ಮನುಷ್ಯನು ತುಂಬಾ ಶ್ರೀಮಂತನಾಗಿರುತ್ತಾನೆ. ಇದಲ್ಲದೆ, ಒಬ್ಬ ವ್ಯಕ್ತಿಯು ರಾಜಯೋಗದ ಆನಂದವನ್ನು ಪಡೆಯುತ್ತಾನೆ. ಈ ರಾಜಯೋಗದ ಹಿಂದೆ ಹತ್ತನೇ ಮನೆಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯದಲ್ಲಿ, ಹತ್ತನೇ ಸ್ಥಾನ ಅಂದರೆ ಮನೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಮನೆ ಅತ್ಯಂತ ಶಕ್ತಿಶಾಲಿಯಾಗಿದೆ. ಈ ಮನೆಯು ವಿಷ್ಣುವಿನ ಸ್ಥಳ ಎಂದೂ ಕೂಡ ಹೇಳಲಾಗುತ್ತದೆ. 

ಇದನ್ನೂ ಓದಿ-ಈ ಐದು ವಸ್ತುಗಳನ್ನು ಚೆಲ್ಲಿದರೆ ಶನಿದೇವರು ಜೀವನವೆಲ್ಲಾ ನೀಡುತ್ತಾರೆ ಸಂಕಷ್ಟ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು  ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-Hibiscus Flower: ಈ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ ದಾಸವಾಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News