Raksha Bandhan 2021: ರಕ್ಷಾ ಬಂಧನ ಉತ್ಸವದ ಮೇಲೆ ಭದ್ರಾಕಾಲದ ನೆರಳು, ಭದ್ರಾಕಾಲದಲ್ಲಿ ಏಕೆ ರಾಖಿ ಧರಿಸುವಂತಿಲ್ಲ?

Raksha Bandhan 2021 - ಶ್ರಾವಣ ಮಾಸದಲ್ಲಿ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬ ರಕ್ಷಾಬಂಧನ (Raksha Bandhan) ಆಚರಿಸಲಾಗುತ್ತದೆ. ಶ್ರಾವಣ ಮಾಸದ (Shravana Masa) ಹುಣ್ಣಿಮೆಯ ದಿನ ರಕ್ಷಾಬಂಧನ ಆಚರಿಸಲಾಗುವ ಕಾರಣ ಇದನ್ನು ನೂಲು ಹುಣ್ಣಿಮೆ ಎಂದೂ ಕೂಡ ಕರೆಯುತ್ತಾರೆ.

Written by - Nitin Tabib | Last Updated : Aug 17, 2021, 01:57 PM IST
  • ಈ ಬಾರಿಯ ರಕ್ಷಾ ಬಂಧನದ ಮೇಲೆ ಭದ್ರಾ ಕಾಲದ ಕರಿನೆರಳು.
  • ಈ ಮೂಹುರ್ತದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಾಬಾರದು.
  • ಭದ್ರಾ ಕಾಲ ಎಂದರೇನು? ಯಾಕೆ ಈ ಕಾಲದಲ್ಲಿ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ?
Raksha Bandhan 2021: ರಕ್ಷಾ ಬಂಧನ ಉತ್ಸವದ ಮೇಲೆ ಭದ್ರಾಕಾಲದ ನೆರಳು, ಭದ್ರಾಕಾಲದಲ್ಲಿ ಏಕೆ ರಾಖಿ ಧರಿಸುವಂತಿಲ್ಲ? title=
Raksha Bandhan 2021 (File Photo)

Raksha Bandhan 2021 - ಶ್ರಾವಣ ಮಾಸದಲ್ಲಿ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬ ರಕ್ಷಾಬಂಧನ (Raksha Bandhan) ಆಚರಿಸಲಾಗುತ್ತದೆ. ಶ್ರಾವಣ ಮಾಸದ (Shravana Masa) ಹುಣ್ಣಿಮೆಯ ದಿನ ರಕ್ಷಾಬಂಧನ ಆಚರಿಸಲಾಗುವ ಕಾರಣ ಇದನ್ನು ನೂಲು ಹುಣ್ಣಿಮೆ ಎಂದೂ ಕೂಡ ಕರೆಯುತ್ತಾರೆ. ಹಲವು ಗ್ರಹಗಳ ಪ್ರಭಾವದಿಂದ ಸಹೋದರ-ಸಹೋದರಿಯರ ಹಬ್ಬದ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ. ಹಿಂದೂ ಪಂಚಾಂಗದ (Hindu Panchanga) ಪ್ರಕಾರ, ಭದ್ರಾ ಕಾಲವನ್ನು ಅಶುಭ ಮುಹೂರ್ತ ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಶುಭಕಾರ್ಯಗಳು ನೆರವೇರುವುದಿಲ್ಲ.

ಈ ಬಾರಿ ಭದ್ರಾಕಾಲದ ನೆರಳು (Bhadra Kaal)
ಮಧ್ಯಾಹ್ನ ವೃಶ್ಚಿಕ ಲಗ್ನದಲ್ಲಿ 12ಗಂಟೆಯಿಂದ 2.12ರವರೆಗೆ ಹಾಗೂ ಕುಂಭ ಲಗ್ನದಲ್ಲಿ ಸಾಯಂಕಾಲ 6.06 ರಿಂದ 7.40ರವರೆಗೆ ರಕ್ಷಾಬಂಧನದ ಶುಭ ಮುಹೂರ್ತ (Rakshi Muhurat) ಇರಲಿದೆ. ಆಗಸ್ಟ್ 22ರ ಬೆಳಗಿನ ಜಾವ 6. 16ರವರೆಗೆ ಭದ್ರಾಕಾಲದ ಉಪಸ್ಥಿತಿ ಇರಲಿದೆ. ಈ ಕಾರಣದಿಂದ ಪ್ರಾತಃಕ್ಕಾಲದ 6.16ರವರೆಗೆ ರಕ್ಷಾ ಬಂಧನದ ಸೂತ್ರ ಧರಿಸುವ ಹಾಗಿಲ್ಲ. ಸಂಜೆ 04 .30ಕ್ಕೆ ರಾಹು ಕಾಲ ಆರಂಭಗೊಳ್ಳುವ ಮೊದಲು ರಕ್ಷಾ ಬಂಧನ ಉತ್ಸವವನ್ನು ಆಚರಿಸಬಹುದು. ಈ ಬಾರಿಯ ರಕ್ಷಾ ಬಂಧನದ ದಿನ ಚಂದ್ರ, ಮಂಗಳನ ನಕ್ಷತ್ರದಲ್ಲಿ ಹಾಗೂ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 

ಇದನ್ನೂ ಓದಿ-Palmistry: ಕೈಯಲ್ಲಿ ನಿರ್ಮಾಣಗೊಂಡ ಈ ಆಕೃತಿ, ಸ್ಥಿತಿವಂತ ಜೀವನ ಸಂಗಾತಿ ಸಿಗುವ ಸಂಕೇತ

ರಕ್ಷಾ ಬಂಧನ 2021 ಯಾವಾಗ ಆಚರಿಸಲಾಗುತ್ತಿದೆ (Rakhi Date And Time)
ಹಿಂದೂ ಪಂಚಾಂಗದ ಪ್ರಕಾರ, ರಕ್ಷಾ ಬಂಧನ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ವರ್ಷ ಹುಣ್ಣಿಮೆಯ ತಿಥಿ ಭಾನುವಾರ ಅಂದರೆ ಆಗಸ್ಟ್ 22, 2021ಕ್ಕೆ ಬೀಳುತ್ತಿದೆ.

ಇದನ್ನೂ ಓದಿ-Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು

ಭದ್ರಾಕಾಲದಲ್ಲಿ ರಾಖಿಯನ್ನು ಕಟ್ಟಬಾರದು
ಜ್ಯೋತಿಷ್ಯಾಚಾರ್ಯರ (Astrology) ಪ್ರಕಾರ ಭದ್ರಾಕಾಲದಲ್ಲಿ ರಾಖಿ ಕಟ್ಟುವುದು ಅಶುಭಕರ. ವಾಸ್ತವವಾಗಿ, ರಾಹುಕಾಲ ಮತ್ತು ಭದ್ರ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಭದ್ರಾಕಾಲದಲ್ಲಿ ರಾಖಿ ಕಟ್ಟದಿರುವುದರ ಹಿಂದಿನ ಕಾರಣವೆಂದರೆ ಲಂಕಾಧೀಶ ರಾವಣ ತನ್ನ ಸಹೋದರಿಗೆ ಭದ್ರಾದಲ್ಲಿ ರಾಖಿ ಕಟ್ಟಿದ್ದ ಮತ್ತು ಒಂದು ವರ್ಷದೊಳಗೆ ರಾವಣ ಸರ್ವನಾಶವಾದ. ಆದ್ದರಿಂದ, ಈ ಸಮಯವನ್ನು ಹೊರತುಪಡಿಸಿ, ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುತ್ತಾರೆ. ಇನ್ನೊಂದೆಡೆ ಭದ್ರಾ ಶನಿ ಮಹಾರಾಜರ ಸಹೋದರಿ ಎಂದೂ ಹೇಳಲಾಗುತ್ತದೆ.  ಆಕೆಗೆ ಪರಬ್ರಹ್ಮನ ಶಾಪಕ್ಕೆ ಗುರಿಯಾಗಿದ್ದಳು. ಬ್ರಹ್ಮನ ಶಾಪದ ಪ್ರಕಾರ, ಭದ್ರಾ ಕಾಲದಲ್ಲಿ ಯಾರು ಶುಭ ಕೆಲಸಗಳನ್ನು ನೆರವೆರಿಸುತ್ತಾರೆಯೋ ಅವರಿಗೆ ಶುಭ ಫಲಗಳು ಪ್ರಾಪ್ತಿಯಾಗುವುದಿಲ್ಲ ಮತ್ತು ಅವರಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಇದಲ್ಲದೆ ರಾಹುಕಾಲದಲ್ಲಿಯೂ ಕೂಡ ರಾಖಿ ಧರಿಸಬಾರದು ಅಥವಾ ಕಟ್ಟಬಾರದು.

ಇದನ್ನೂ ಓದಿ-Krishna Janmashtami 2021: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News