Raksha Bandhan 2021: 474 ವರ್ಷಗಳ ನಂತರ ನಿರ್ಮಾಣವಾಗಲಿದೆ ಈ ಅದ್ಭುತ ಮಹಾ ಯೋಗ..! ಈಡೇರಲಿದೆ ಎಲ್ಲಾ ಇಚ್ಛೆಗಳು

ಜ್ಯೋತಿಷ್ಯದ  ಪ್ರಕಾರ, ರಕ್ಷಾ ಬಂಧನವನ್ನು ಸಾಮಾನ್ಯವಾಗಿ ಶ್ರಾವಣ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಆದರೆ ಈ ಬಾರಿ, ಶ್ರಾವಣ ಹುಣ್ಣಿಮೆಯಂದು ಧನಿಷ್ಟ ನಕ್ಷತ್ರದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. 

Written by - Ranjitha R K | Last Updated : Aug 17, 2021, 05:27 PM IST
  • ಧನಿಷ್ಟ ನಕ್ಷತ್ರದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ
  • ರಕ್ಷೆ ಕಟ್ಟಲು ಶುಭ ಮುಹೂರ್ತ ಯಾವುದು ತಿಳಿಯಿರಿ
  • 474 ವರ್ಷಗಳ ನಂತರ ನಿರ್ಮಾಣವಾಗುತ್ತಿದೆ ಮಹಾ ಸಂಯೋಗ
Raksha Bandhan 2021: 474 ವರ್ಷಗಳ ನಂತರ ನಿರ್ಮಾಣವಾಗಲಿದೆ ಈ ಅದ್ಭುತ ಮಹಾ ಯೋಗ..! ಈಡೇರಲಿದೆ ಎಲ್ಲಾ ಇಚ್ಛೆಗಳು  title=
ಧನಿಷ್ಟ ನಕ್ಷತ್ರದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆ (photo zee news)

ನವದೆಹಲಿ : ರಕ್ಷಾ ಬಂಧನಕ್ಕೆ (Raksha Bandhan 2021) ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಆಗಸ್ಟ್ 22 ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ವಿಶೇಷವಾದ ಮಹಾ ಸಂಯೋಗ ನಿರ್ಮಾಣವಾಗಲಿದೆ. 

 ಧನಿಷ್ಟ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ  ರಕ್ಷಾ ಬಂಧನ : 
ಜ್ಯೋತಿಷ್ಯದ  ಪ್ರಕಾರ, ರಕ್ಷಾ ಬಂಧನವನ್ನು (Raksha Bandhan 2021) ಸಾಮಾನ್ಯವಾಗಿ ಶ್ರಾವಣ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಆದರೆ ಈ ಬಾರಿ, ಶ್ರಾವಣ ಹುಣ್ಣಿಮೆಯಂದು ಧನಿಷ್ಟ ನಕ್ಷತ್ರದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ಬಾರಿ ಸಹೋದರಿಯರು ದಿನವಿಡೀ ತಮ್ಮ ಸಹೋದರನಿಗೆ ರಾಖಿ ಕಟ್ಟಬಹುದು. ರಕ್ಷಾ ಬಂಧನ (Raksha Bandhan) ಹಬ್ಬ ಆಚರಿಸಲು ಅಂದರೆ ಸಹೋದರರಿಗೆ ರಕ್ಷೆ ಕಟ್ಟಲು ಬೆಳಿಗ್ಗೆ 5.50 ರಿಂದ ಸಂಜೆ 6.03 ರವರೆಗೆ ಶುಭ ಮುಹೂರ್ತವಿರಲಿದೆ. ಅಲ್ಲದೆ, ಈ ಸಮಯದಲ್ಲಿ, ಕುಂಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆಯಿರುತ್ತದೆ.  

ಇದನ್ನೂ ಓದಿ : Raksha Bandhan 2021: ರಕ್ಷಾ ಬಂಧನ ಉತ್ಸವದ ಮೇಲೆ ಭದ್ರಾಕಾಲದ ನೆರಳು, ಭದ್ರಾಕಾಲದಲ್ಲಿ ಏಕೆ ರಾಖಿ ಧರಿಸುವಂತಿಲ್ಲ?

474 ವರ್ಷಗಳ ನಂತರ ಮಹಾ ಸಂಯೋಗ : 
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ಬಾರಿ ರಕ್ಷಾ ಬಂಧನದಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸಿಂಹ ರಾಶಿಯಲ್ಲಿ ಒಟ್ಟಿಗೆ ವಿರಾಜಮಾನರಾಗಲಿದ್ದಾರೆ. ಸೂರ್ಯನು ಸಿಂಹ ರಾಶಿಯ ಅಧಿಪತಿ. ಈ ರಾಶಿಯಲ್ಲಿ ಮಂಗಳ ಕೂಡ ಜೊತೆಯಲ್ಲಿರುತ್ತಾನೆ. ಶುಕ್ರನು ಕನ್ಯಾರಾಶಿಯಲ್ಲಿರುತ್ತಾನೆ. ಗ್ರಹಗಳ ಇಂತಹ ಯೋಗವು ತುಂಬಾ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಇಂತಹ ಅಪರೂಪದ ಗ್ರಹಗಳ ಸಂಯೋಜನೆಯು 474 ವರ್ಷಗಳ ನಂತರ ರಕ್ಷಾ ಬಂಧನವೇ ನಿರ್ಮಾಣವಾಗುತ್ತಿದೆ.  ಈ ಮೊದಲು ಈ ರೀತಿಯ ಸಂಯೋಗ ಆಗಸ್ಟ್ 11, 1547 ರಂದು, ನಿರ್ಮಾಣವಾಗಿತ್ತು. 

ಜ್ಯೋತಿಷಿಗಳ ಪ್ರಕಾರ  ಈ ವರ್ಷ ಶುಕ್ರ ಕನ್ಯಾರಾಶಿಯಲ್ಲಿರುತ್ತಾನೆ. ಕನ್ಯಾ ರಾಶಿಯ ಅಧಿಪತಿ ಬುಧ. ರಕ್ಷಾ ಬಂಧನದ  ದಿನವೇ ಈ ಸಂಯೋಗ ನಿರ್ಮಾಣವಾಗುತ್ತಿರುವುದು ಸಹೋದರ ಸಹೋದರಿಯರಿಗೆ ಅತ್ಯಂತ ಪ್ರಯೋಜನಕಾರಿ ಎನ್ನಲಾಗಿದೆ.   ಖರೀದಿಗೆ ರಾಜಯೋಗ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ : Palmistry: ಕೈಯಲ್ಲಿ ನಿರ್ಮಾಣಗೊಂಡ ಈ ಆಕೃತಿ, ಸ್ಥಿತಿವಂತ ಜೀವನ ಸಂಗಾತಿ ಸಿಗುವ ಸಂಕೇತ

ಅದೃಷ್ಟಶಾಲಿಯನ್ನಾಗಿಸುತ್ತದೆ ಈ ಯೋಗ : 
ಗುರು ಮತ್ತು ಚಂದ್ರನ ಈ ಸಂಯೋಗದಿಂದಾಗಿ, ಗಜಕೇಸರಿ ಯೋಗವು (Gaja kesari yoga) ರಕ್ಷಾ ಬಂಧನದಂದು ರೂಪುಗೊಳ್ಳುತ್ತಿದೆ. ಚಂದ್ರ ಮತ್ತು ಗುರು ಕೇಂದ್ರದಲ್ಲಿ  ಪರಸ್ಪರ ಮುಖಾಮುಖಿಯಾಗಿ ಕುಳಿತಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಜನರನ್ನು ಅದೃಷ್ಟವಂತರನ್ನಾಗಿಸುತ್ತದೆ. ಇದರಿಂದಾಗಿ ಜನರು ಹಣ, ಆಸ್ತಿ, ಮನೆ, ವಾಹನದಂತಹ ಸುಖಗಳನ್ನು ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News