Ramadan 2023 Wishes: ನಿಮ್ಮ ಪ್ರೀತಿಪಾತ್ರರಿಗೆ ರಂಜಾನ್ ವಿಶ್‌ ಮಾಡಲು ಇಲ್ಲಿವೆ ವಿಶೇಷ ಸಂದೇಶಗಳು

Eid-ul-Fitr 2023 Wishes: ಭಾರತದಲ್ಲಿ ಏಪ್ರಿಲ್ 22 ರಂದು ರಂಜಾನ್ ಆಚರಿಸಲಾಗುತ್ತದೆ. ರಂಜಾನ್ ಹಬ್ಬವನ್ನು ಚಂದ್ರನ ಪ್ರಕಾರ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮ ಪವಿತ್ರ ಹಬ್ಬ. ಮುಸ್ಲಿಂ ಬಾಂಧವರು ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.   

Written by - Chetana Devarmani | Last Updated : Apr 22, 2023, 07:17 AM IST
  • ಭಾರತದಲ್ಲಿ ಏಪ್ರಿಲ್ 22 ರಂದು ರಂಜಾನ್ ಹಬ್ಬ
  • ಪ್ರವಾದಿ ಮುಹಮ್ಮದ್ ಅವರ ಜನ್ಮದಿನ
  • ರಂಜಾನ್ ವಿಶ್‌ ಮಾಡಲು ಇಲ್ಲಿವೆ ಸಂದೇಶಗಳು
Ramadan 2023 Wishes: ನಿಮ್ಮ ಪ್ರೀತಿಪಾತ್ರರಿಗೆ ರಂಜಾನ್ ವಿಶ್‌ ಮಾಡಲು ಇಲ್ಲಿವೆ ವಿಶೇಷ ಸಂದೇಶಗಳು  title=
Eid-ul-Fitr 2023 Wishes

Happy Eid Mubarak : ಪ್ರಪಂಚದಾದ್ಯಂತದ ಮುಸ್ಲಿಮರು ಈದ್-ಮಿಲಾದ್-ಉನ್-ನಬಿ ಅಥವಾ ಈದ್-ಇ ಮಿಲಾದ್ ಅನ್ನು ಆಚರಿಸುತ್ತಾರೆ. ಈ ದಿನ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಮುಸ್ಲಿಮರಿಗೆ ಇದು ಅತ್ಯಂತ ಮಹತ್ವದ ಪವಿತ್ರ ದಿನವಾಗಿದೆ. ಪ್ರವಾದಿಯವರ ಬೋಧನೆಗಳು ಮತ್ತು ದಯೆಯ ಕಾರ್ಯಗಳನ್ನು ಸ್ಮರಿಸುವ ಈ ದಿನವು ಮುಸ್ಲಿಮರಿಗೆ ಬಹಳ ಮುಖ್ಯವಾದ ಹಬ್ಬವಾಗಿದೆ. ಪ್ರವಾದಿ ಮುಹಮ್ಮದ್ ಅವರ ಬೋಧನೆಗಳಿಂದ ಸಮಾಜವು ಹೆಚ್ಚು ಪ್ರಯೋಜನ ಪಡೆದಿದೆ. ಈದ್-ಮಿಲಾದ್-ಉನ್-ನಬಿ, ಪ್ರವಾದಿಗಳ ದಿನ, ಮೌಲಿದ್, ಮುಹಮ್ಮದ್ ಅವರ ಜನ್ಮದಿನ ಅಥವಾ ಪ್ರವಾದಿಯವರ ಜನ್ಮದಿನ ಎಂದೂ ಕರೆಯುತ್ತಾರೆ. 

ಪ್ರವಾದಿಯವರು ಕ್ರಿ.ಶ 570 ರಲ್ಲಿ 'ರಬಿ-ಉಲ್-ಅವಲ್' ತಿಂಗಳ 12 ನೇ ದಿನದಂದು ಜನಿಸಿದರು ಎಂದು ನಂಬಲಾಗಿದೆ. ಈ ದಿನವನ್ನು ಆಚರಿಸಲು, ಜನರು ತಮ್ಮ ಮನೆಗಳಲ್ಲಿ ಔತಣ ಕೂಟಗಳನ್ನು ಏರ್ಪಡಿಸುತ್ತಾರೆ, ಮಸೀದಿಗಳು ಮತ್ತು ದರ್ಗಾಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಇದನ್ನೂ ಓದಿ: Akshaya Tritiya 2023: ದಿನಾಂಕ, ಶುಭ ಮುಹೂರ್ತ ಮತ್ತು ಸಮಯ ತಿಳಿಯಿರಿ

ಆಕಾಶದಲ್ಲಿ ಕಾಣಿಸಿಕೊಳ್ಳುವ ಚಂದ್ರನ ಮೂಲಕ ಈ ದಿನವನ್ನು ನಿರ್ಧರಿಸಲಾಗುತ್ತದೆ, ಈದ್ ಮಿಲಾದ್ ಉನ್ ನಬಿ ಹಬ್ಬವನ್ನು ಪ್ರಪಂಚದಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಈದ್ ಮಿಲಾದ್ ಉನ್ ನಬಿ ಈ ವರ್ಷ (2023) ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಈದ್ ಮಿಲಾದ್ ಸಂದರ್ಭದಲ್ಲಿ ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಇಲ್ಲಿವೆ.

1) ಅಲ್ಲಾಹನು ನಮ್ಮೆಲ್ಲರ ಹೃದಯಗಳನ್ನು ಕರುಣೆ, ಪ್ರೀತಿ ಮತ್ತು ತಾಳ್ಮೆಯಿಂದ ತುಂಬಲಿ. ರಂಜಾನ್ ಶುಭಾಶಯಗಳು.

2) ಅಲ್ಲಾಹನು ನಿಮ್ಮ ಕಷ್ಟಗಳನ್ನು ನಿವಾರಿಸಲಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಲಿ. ರಂಜಾನ್ ಶುಭಾಶಯಗಳು.

3) ಈದ್-ಮಿಲಾದ್-ಉನ್-ನಬಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಒಂದು ಪವಿತ್ರ ದಿನ, ಅವರು ಹಾಕಿಕೊಟ್ಟ ಮೌಲ್ಯಗಳ ಕಡೆ ಸಾಗೋಣ, ರಂಜಾನ್ ಶುಭಾಶಯಗಳು.

4) ಈದ್ ಹಬ್ಬದಂದು ನಾವೆಲ್ಲರೂ ಒಳ್ಳೆಯದನ್ನು ಮಾಡೋಣ ಮತ್ತು ಪ್ರತಿಯಾಗಿ ಒಳ್ಳೆಯದನ್ನು ಸ್ವೀಕರಿಸೋಣ. ಈದ್-ಮಿಲಾದ್-ಉನ್-ನಬಿ ಶುಭಾಶಯಗಳು!

ಇದನ್ನೂ ಓದಿ: ಚಂದ್ರ ಗ್ರಹಣ ಹೊತ್ತು ತರುವುದು ಈ ರಾಶಿಯವರಿಗೆ ಅದೃಷ್ಟ! ಒಳ್ಳೆಯ ದಿನಗಳು ಅಂದಿನಿಂದಲೇ ಆರಂಭ

5) ಪ್ರವಾದಿ ಮುಹಮ್ಮದ್ ಹೇಳಿದರು: "ಅಲ್ಲಾಹನು ಇತರರಿಗೆ ಒಳ್ಳೆಯದನ್ನು ಮಾಡುವವರಿಗೆ ಹತ್ತು ಪಟ್ಟು ಆಶೀರ್ವಾದಗಳನ್ನು ಕಳುಹಿಸುತ್ತಾನೆ." ರಂಜಾನ್ ಶುಭಾಶಯಗಳು.

6) ಈ ಮಂಗಳಕರ ದಿನದ ಬೆಳಕು ನಮ್ಮ ಹೃದಯವನ್ನು ಬೆಳಗಿಸಲಿ ಮತ್ತು ನಮ್ಮ ಮನಸ್ಸನ್ನು ಶಾಂತಗೊಳಿಸಲಿ. ರಂಜಾನ್ ಶುಭಾಶಯಗಳು!

7) ಅಲ್ಲಾಹನು ನಿಮ್ಮ ಪ್ರಾರ್ಥನೆಯನ್ನು ಆಲಿಸಲಿ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. ರಂಜಾನ್ ಶುಭಾಶಯಗಳು.

8) ಈದ್-ಎ-ಮಿಲಾದ್-ಉನ್-ನಬಿಯ ಈ ಮಂಗಳಕರ ಸಂದರ್ಭದಲ್ಲಿ, ಅಲ್ಲಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ಮತ್ತು ಆಶೀರ್ವಾದ ನೀಡಲಿ. ರಂಜಾನ್ ಶುಭಾಶಯಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News