reason behind two whorls on head: ನಮ್ಮಲ್ಲಿ ಅನೇಕರಿಗೆ ತಲೆಯಲ್ಲಿ ಸುಳಿಗಳಿರುತ್ತವೆ. ಕೆಲವರಿಗೆ ಒಂದು, ಇನ್ನೂ ಕೆಲವರಿಗೆ ಎರಡು ಸುರುಳಿಗಳಿರುತ್ತವೆ. ಅದನ್ನು ಸಾಮಾನ್ಯವೆಂದು ಪರಿಗಣಿಸಿದರೂ ಸಹ ಇದರ ಹಿಂದೆ ಕೆಲ ರಹಸ್ಯಗಳಿವೆ. ಈ ಬಗ್ಗೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ತಲೆಯ ಮೇಲೆ ಸುಳಿ ಇರುವವರು ತುಂಬಾ ಕರುಣಾಮಯಿಗಳಾಗಿರುತ್ತಾರೆ. ಅಂತಹ ಜನರು ಮನಸ್ಸಿನಲ್ಲಿ ತುಂಬಾ ಶಾಂತವಾಗಿರುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಎಲ್ಲಿಗೆ ಪಯಣ ಯಾವುದೋ ದಾರಿ... ಬಿಡುಗಡೆಯಾಯ್ತು ಕುತೂಹಲಕಾರಿ ಟೀಸರ್!
ಈ ಜನರು ಯಾವುದಕ್ಕೂ ಕೋಪಗೊಳ್ಳುವುದಿಲ್ಲ. ಅಂತಹವರು ತಮ್ಮ ನಿರ್ಧಾರಗಳನ್ನು ಬಹಳ ಯೋಚಿಸಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅಂತಹ ಜನರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ. ಜೊತೆಗೆ ಅವರ ಜೀವನ ಸುಖಮಯವಾಗಿ ಕಳೆಯುತ್ತದೆ ಎಂದೂ ಹೇಳಲಾಗಿದೆ.
ಅಂದಹಾಗೆ ತಲೆಯ ಮೇಲೆ ಎರಡು ಸುಳಿಗಳಿರುವುದು ಒಳ್ಳೆಯದಲ್ಲ. ಇದರ ಪ್ರಕಾರ, ತುಂಬಾ ಹಠಮಾರಿ ಸ್ವಭಾವದವರಾಗಿರುತ್ತಾರೆ. ತುಂಬಾ ಕೋಪ ಬರುತ್ತೆ ಅಂತಾರೆ. ಇದರಿಂದಾಗಿ ಅವರ ಅನೇಕ ಸಂಬಂಧಗಳು ಹಾಳಾಗುತ್ತವೆ. ಇದೇ ಕಾರಣಕ್ಕೆ ಎರಡು ಸುಳಿ ಇದ್ದರೆ ಮದುವೆ ಎರಡಾಗುತ್ತದೆ ಎಂದು ಹೇಳುವುದು. ಇವರ ಕೋಪದಿಂದಲೇ ಸಂಬಂಧಗಳು ಕೆಡುತ್ತವೆ ಎಂದು ಹೇಳಲಾಗಿದೆ.
ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಎರಡು ಸುರುಳಿಗಳನ್ನು ಹೊಂದಿರುವುದಕ್ಕೆ ನಿಖರವಾದ ಕಾರಣವು ಹೆಚ್ಚಾಗಿ ಆನುವಂಶಿಕವಾಗಿರುತ್ತದೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಈ ರೀತಿ ಕೂದಲಿನ ಬೆಳವಣಿಗೆಯಾಗಿರುತ್ತದೆ.
ಇದನ್ನೂ ಓದಿ: ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಅಫ್ಘನ್ ಕ್ರಿಕೆಟ್ ಮಂಡಳಿ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.