Relationship Tips: ಹುಡುಗರೆ ಆಗಲಿ ಅಥವಾ ಹುಡುಗಿಯರೆ ಆಗಲಿ ವಿವಾಹದ ಬಳಿಕ ಇಬ್ಬರ ಜೀವನವೂ ಸಂಪೂರ್ಣ ಬದಲಾಗುತ್ತದೆ. ಇಬ್ಬರೂ ತಮ್ಮ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಬೇಕು, ಇಲ್ಲದಿದ್ದರೆ ಅವರು ತಮ್ಮ ಕೆಲ ಅಭ್ಯಾಸಗಳ ಕಾರಣ ಪರಸ್ಪರರನ್ನು ನೋಯಿಸಬಹುದು. ಪುರುಷರು ತಮ್ಮಲ್ಲಿ ಈ ಸುಧಾರಣೆಯನ್ನು ಮಾಡಿಕೊಳ್ಳಲು ತುಂಬಾ ಕಷ್ಟಪಡುತ್ತಾರೆ ಏಕೆಂದರೆ ಮದುವೆಯ ಮೊದಲು ಅವರು ತಮ್ಮ ಜೀವನವನ್ನು ಯಾವುದೇ ಅಡೆತಡೆಗಳಿಲ್ಲದೆ ಬದುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮದುವೆಯ ನಂತರ ಇದ್ದಕ್ಕಿದ್ದಂತೆ ಅವರ ಸ್ವಾತಂತ್ರ್ಯ ಹಾಳಾಯಿತು ಎಂಬ ಅನುಭವ ಅವರಿಗಾಗುತ್ತದೆ, ಅಷ್ಟೇ ಅಲ್ಲ ತಮ್ಮ ಹೆಂಡತಿಯೇ ಅದಕ್ಕೆ ಕಾರಣ ಎಂದು ಅವರು ಭಾವಿಸುತ್ತಾರೆ. ಈ ಕಾರಣದಿಂದಾಗಿ, ಅವರು ಇತರರ ಪತ್ನಿಯರತ್ತ ಕಡೆಗೆ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ ಮತ್ತು ತಮ್ಮ ಸ್ವಂತ ಹೆಂಡತಿಯರನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಇಂದು ನಾವು ನಿಮಗಾಗಿ ಕೆಲ ಕಾರಣಗಳನ್ನು ಹೇಳುತ್ತಿದ್ದು, ಈ ಕಾರಣಗಳು ಪತಿಯರು ತಮ್ಮ ಪತ್ನಿಗಿಂತ ಇನ್ನೊಬ್ಬರ ಪತ್ನಿಯನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ, ಹಾಗಾದರೆ ವಿವಾಹಿತ ಪುರುಷರು ಇತರರ ಹೆಂಡತಿಯನ್ನು ಏಕೆ ಹೆಚ್ಚು ಇಷ್ಟಪಡುತ್ತಾರೆ ತಿಳಿದುಕೊಳ್ಳೋಣ ಬನ್ನಿ
ಸಂಬಂಧವು ನೀರಸವಾದಾಗ
ಪ್ರತಿಯೊಬ್ಬ ಪುರುಷನ ಮನಸ್ಸು ತುಂಬಾ ಚಂಚಲವಾಗಿರುತ್ತದೆ, ಆದ್ದರಿಂದ ಅವನು ಏನನ್ನಾದರೂ ಆನಂದಿಸದಿದ್ದರೆ, ಅವನು ತಕ್ಷಣವೇ ಆ ವಿಷಯದಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ. ಆದರೆ ಮದುವೆಯಾಗಿದೆ ಎಂಬ ಒಂದೇ ಒಂದು ಕಾರಣ ಮತ್ತು ಹಿರಿಯರ ಒತ್ತಾಯದಿಂದಾಗಿ ಅವನಿಗೆ ತನ್ನ ಬಾಳಸಂಗಾತಿಯ ಜೊತೆಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ಪರಿಸ್ಥಿತಿಯಲ್ಲಿ, ಆತ ತನ್ನ ಸಂಗಾತಿಗೆ ಮದುವೆಯಿಂದ ತಾನು ಸಂತೃಪ್ತನಾಗಿಲ್ಲ ಎಂಬುದರ ಅರಿವು ಮೂಡಿಸುವಲ್ಲಿ ತೊಡಗುತ್ತಾರೆ ಮತ್ತು ಈ ಕಾರಣದಿಂದಾಗಿ, ಅವನು ತನ್ನ ಪತ್ನಿಗಿಂತ ಪರರ ಪತ್ನಿಯನ್ನು ಹೆಚ್ಚು ಇಷ್ಟಪಡುತ್ತಾನೆ.
ಹೆಂಡತಿಯೊಂದಿಗೆ ಜಗಳ
ಪ್ರತಿಯೊಬ್ಬರೂ ಪುರುಷ ತನ್ನ ಇಚ್ಛೆಗೆ ತಕ್ಕಂತೆ ಬದುಕಲು ಬಯಸುತ್ತಾನೆ. ಮತ್ತು ಇದೆ ಕಾರಣದಿಂದ ಆತ ತನ್ನ ಪತ್ನಿ ಮುಗ್ಧಳಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ಆಕೆ ಪ್ರಶ್ನಿಸಬಾರದು ಎಂದು ಬಯಸುತ್ತಾನೆ. ಒಂದು ವೇಳೆ ಆತನಿಗೆ ಚುರುಕು ಪತಿ ಸಿಕ್ಕರೆ, ಆತನ ಸಂತೋಷ ಮತ್ತು ಶಾಂತಿ ಎರಡೂ ಕಳೆದುಹೋಗುತ್ತವೆ. ಈ ಕಾರಣದಿಂದಾಗಿ, ಅವನು ತನ್ನ ಹೆಂಡತಿಯೊಂದಿಗೆ ಅಸಮಾಧಾನಗೊಳ್ಳಲು ಪ್ರಾರಂಭಿಸುತ್ತಾನೆ, ಇದರಿಂದಾಗಿ ಅವನು ಯಾವಾಗಲೂ ತನ್ನ ಪತಿಯ ನಿಯಂತ್ರಣದಲ್ಲಿ ಉಳಿಯುವ ಇತರ ಪತ್ನಿಯನ್ನು ಇಷ್ಟಪಡುತ್ತಾನೆ.
ಇದನ್ನೂ ಓದಿ-ಮದುವೆಯಾದ ಬಳಿಕ ಏಕೆ ಪತ್ನಿಯರು ತಮ್ಮ ಪತಿಗೆ ದ್ರೋಹ ಬಗೆಯುತ್ತಾರೆ? ಕಾರಣ ಇಲ್ಲಿದೆ!
ಹೆಂಡತಿ ಕಾಳಜಿ ವಹಿಸದಿದ್ದಾಗ
ಪ್ರಪಂಚದ ಪ್ರತಿಯೊಬ್ಬ ಪತಿಯೂ ತನ್ನ ಹೆಂಡತಿ ತನ್ನ ಬೇಕು-ಬೇಡ ಎಲ್ಲವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುತ್ತಾನೆ. ಆದರೆ ಇದು ಸಂಭವಿಸದಿದ್ದಾಗ, ಅವನು ತನ್ನ ಹೆಂಡತಿಯಿಂದ ಭಾವನಾತ್ಮಕ ಅಂತರ ಕಾಯ್ದುಕೊಳ್ಳುತ್ತಾನೆ . ನಂತರ ಅವನು ಇತರರ ಪತ್ನಿಯರಲ್ಲಿ ಆತ ಈ ಗುಣಗಳನ್ನು ನೋಡಿದಾಗ, ಅವನು ಅವಳ ಕಡೆಗೆ ಆಕರ್ಷಿತನಾಗಲು ಪ್ರಾರಂಭಿಸುತ್ತಾನೆ, ಇದರಿಂದಾಗಿ ಅವನು ಅವಳನ್ನು ಆಕೆಯನ್ನು ಹೊಗಳಲು ಪ್ರಾರಂಭಿಸುತ್ತಾನೆ.
ಇದನ್ನೂ ಓದಿ-ವಿವಾಹದ ಬಳಿಕ ಹುಡುಗಿಯರ ತೂಕ ಏಕೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ? ಇಲ್ಲಿದೆ ಉತ್ತರ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.