Best Place to celebrate Holi 2023 : ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಈಗಾಗಲೇ ನಾಡಿನೆಲ್ಲೆಡೆ ಹೋಳಿ ಹಬ್ಬದ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಇದೇ ತಿಂಗಳ 8 ರಂದು ಬಣ್ಣದ ಹಬ್ಬವನ್ನು ಅಂತ್ಯಂತ ಅರ್ಥಪೂರ್ಣವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಅದರಂತೆ ನಮ್ಮ ದೇಶದಲ್ಲಿ ಹೋಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಸಂಪ್ರದಾಯ ಬದ್ದವಾಗಿ ಆಚರಿಸುವ ಸ್ಥಳಗಳಿವೆ. ಅವು ಯಾವುವು ಅಂತ ನಾವು ಹೇಳ್ತೀವಿ ನೋಡಿ.
ಮಥುರಾ : ಮಥುರಾ ಹೋಳಿಗೆ ಬಹಳ ಫೇಮಸ್. ಮಥುರಾವು ಭಗವಾನ್ ಕೃಷ್ಣನ ಜನ್ಮಸ್ಥಳ ಎಂದು ಎಲ್ಲರಿಗೂ ತಿಳಿದಿದೆ. ಪ್ರಪಂಚದಾದ್ಯಂತದ ಜನರು ಭವ್ಯ ಹೋಳಿ ಆಚರಣೆಯನ್ನು ವೀಕ್ಷಿಸಲು ಮಥುರಾಕ್ಕೆ ಭೇಟಿ ನೀಡುತ್ತಾರೆ. 9 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಜನರು ಹೂವು ಮತ್ತು ಬಣ್ಣಗಳೊಂದಿಗೆ ಆಟವಾಡುವುದನ್ನು ಆನಂದಿಸುತ್ತಾರೆ. ಅಲ್ಲಿ, ಹೋಳಿಯನ್ನು ಬಹಳಷ್ಟು ಒಣ ಬಣ್ಣಗಳು, ವಾಟರ್ ಬಲೂನ್‌ಗಳು ಮತ್ತು ವಾಟರ್ ಗನ್‌ಗಳೊಂದಿಗೆ ಆಚರಿಸಲಾಗುತ್ತದೆ. ಮಥುರಾದಲ್ಲಿರುವ 'ಬಂಕೆ ಬಿಹಾರಿ ದೇವಾಲಯ'ದ ಸುತ್ತ ನಡೆಯುವ ಭವ್ಯ ಆಚರಣೆಗಳ ಭಾಗವಾಗಲು ನೀವು ಮಥುರಾಗೆ ಹೋಗಬೇಕು.
ಇದನ್ನೂ ಓದಿ: ʼಹೋಳಿʼ ಆಚರಣೆ ಮಹತ್ವ, ಅದರ ಹಿಂದಿನ ರೋಚಕ ಕಥೆ ನಿಮ್ಗೆ ಗೊತ್ತಾ.! ಇಲ್ಲಿದೆ ನೋಡಿ
ಬರ್ಸಾನಾ : ಹೋಳಿಯ ಭವ್ಯ ಆಚರಣೆಗಳನ್ನು ವೀಕ್ಷಿಸಲು ಬರ್ಸಾನಾ ಅತ್ಯಂತ ಉತ್ತಮ ಸ್ಥಳ. ಬರ್ಸಾನಾ ಪಟ್ಟಣದಲ್ಲಿ 'ಲಾತ್ ಮಾರ್ ಹೋಳಿ'ಯನ್ನು ಆಚರಿಸಲಾಗುತ್ತದೆ. ವಿಶೇಷ ಅಂದ್ರೆ, ಅಲ್ಲಿನ ಮಹಿಳೆಯರು ಪುರುಷರನ್ನು ಕೋಲಿನಿಂದ ಹೊಡೆಯುವ ವಿಶಿಷ್ಟ ಸಂಪ್ರದಾಯವನ್ನು ಹೊಂದಿದ್ದಾರೆ. ಪುರುಷರು ಗುರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಇದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.
ಉದಯಪುರ: ಉದಯಪುರದಲ್ಲಿ ಹೋಳಿ ಆಚರಣೆ ನಗರವನ್ನು ರಾಜಮಯವಾಗಿ ಕಾಣುವಂತೆ ಮಾಡುತ್ತವೆ. ರಾಜಮನೆತನದ ಸದಸ್ಯರು ಸೇರಿದಂತೆ ಜನರು ಸಾಂಪ್ರದಾಯಿಕ ರಾಜಸ್ಥಾನಿ ಉಡುಪುಗಳನ್ನು ಧರಿಸುತ್ತಾರೆ. ದೀಪೋತ್ಸವದ ಸುತ್ತಲೂ ತಿರುಗುತ್ತಾರೆ. ಇದು 'ಕತ್ತಲಿನಿಂದ ಬೆಳಕಿನೆಡೆಗೆ' ಎಂಬ ಅರ್ಥವನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ಜಾನಪದ ನೃತ್ಯಗಳು, ಅದ್ದೂರಿ ಭೋಜನ, ಅದ್ಭುತ ಪಟಾಕಿ ಶೋಗಳನ್ನು ನೋಡ್ಬೇಕು ಅಂದ್ರೆ ಉದಯಪುರಕ್ಕೆ ಹೋಗಿ.
ಇದನ್ನೂ ಓದಿ: Holi 2023 ದಿನ ನಿಮ್ಮ ರಾಶಿಗೆ ಅನುಗುಣವಾಗಿ ಈ ಉಪಾಯ ಮಾಡಿ, ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!
ಪಂಜಾಬ್: ಇಲ್ಲಿ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಸಿಖ್ಖರು ತಮ್ಮದೇ ಶೈಲಿಯಲ್ಲಿ ಬಣ್ಣದ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಹಬ್ಬಕ್ಕೆ ಪಂಜಾಬ್‌ನಲ್ಲಿ ‘ಹೊಲ ಮೊಹಲ್ಲಾ’ ಎನ್ನುತ್ತಾರೆ. ಅಂದಿನ ದಿನ, ಅಲ್ಲಿನ ನಿವಾಸಿಗಳು ತಮ್ಮ ಸಮರ ಕಲೆಗಳನ್ನು ಅದರಲ್ಲೂ ವಿಶೇಷವಾಗಿ 'ಕುಸ್ತಿ'ಯನ್ನು ಪ್ರದರ್ಶಿಸುತ್ತಾರೆ. ರುಚಿಕರವಾದ ಹಲ್ವಾ, ಪೂರಿ, ಗುಜಿ ಮತ್ತು ಮಾಲ್ಪುವಾಗಳನ್ನು ತಯಾರಿಸಿ ಇತರರಿಗೆ ಬಡಿಸಲಾಗುತ್ತದೆ. ಹೋಳಿ ಸಮಯದಲ್ಲಿ ಭೇಟಿ ನೀಡಲು ಇದು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ.
ಇತರೆ ಸ್ಥಳಗಳು : ಪಶ್ಚಿಮ ಬಂಗಾಳದಲ್ಲಿ ಹೋಳಿಯನ್ನು ಹಾಡುಗಾರಿಕೆ ಮತ್ತು ನೃತ್ಯದೊಂದಿಗೆ 'ಡೋಲ್ ಜಾತ್ರೆ' ಎಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಜನರು ಹೋಳಿ ಹಬ್ಬದಂದು ಪ್ರೀತಿಯ ದೇವರಾದ ಕಾಮದೇವನನ್ನು ಪೂಜಿಸುತ್ತಾರೆ. ಉತ್ತರಾಖಂಡದಲ್ಲಿ, ಕುಮಾವೋನಿ ಹೋಳಿಯನ್ನು ಶಾಸ್ತ್ರೀಯ ರಾಗಗಳ ಗಾಯನದೊಂದಿಗೆ ಆಚರಿಸಲಾಗುತ್ತದೆ. ಏತನ್ಮಧ್ಯೆ, ಬಿಹಾರದಲ್ಲಿ ಜನರು ಸಾಂಪ್ರದಾಯಿಕವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ನಂತರ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಹೋಳಿಯು ಭಾರತೀಯ ಮನೆಗಳು ಥಂಡೈ, ಗುಜಿಯಾ, ಮಲ್ಪುವಾ ಮತ್ತು ದಹಿ ವಡಾದಂತಹ ವಿಶೇಷ ಸಿಹಿತಿಂಡಿಗಳನ್ನು ತಯಾರಿಸುವ ಸಮಯವಾಗಿದೆ. ಆದ್ದರಿಂದ, ಸಿಹಿತಿಂಡಿಗಳು ಈ ಹಬ್ಬದ ಪ್ರಮುಖ ಭಾಗವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.