ದಿನಭವಿಷ್ಯ 18-06-2024: ನಿರ್ಜಲ ಏಕಾದಶಿ ಈ ದಿನ ಯಾರ ಮೇಲೆ ಕೃಪೆ ತೋರಲಿದ್ದಾರೆ ಭಗವಾನ್ ವಿಷ್ಣು!

Today Horoscope 18th June 2024: ನಿರ್ಜಲ ಏಕಾದಶಿಯ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 18, 2024, 07:42 AM IST
  • ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಲಾಭದಾಯಕವಾಗುತ್ತವೆ.
  • ಕರ್ಕಾಟಕ ರಾಶಿಯ ಆಹಾರ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ.
  • ಮಕರ ರಾಶಿಯವರು ಇಂದು ತಮ್ಮ ನೆಟ್‌ವರ್ಕ್ ವಿಸ್ತರಿಸಲು ಯೋಚಿಸಬಹುದು.
ದಿನಭವಿಷ್ಯ 18-06-2024:  ನಿರ್ಜಲ ಏಕಾದಶಿ ಈ ದಿನ ಯಾರ ಮೇಲೆ ಕೃಪೆ ತೋರಲಿದ್ದಾರೆ ಭಗವಾನ್ ವಿಷ್ಣು!  title=

Mangalvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ ನಿರ್ಜಲ ಏಕಾದಶಿಯ ಈ ದಿನ ಮಂಗಳವಾರ ಸ್ವಾತಿ ನಕ್ಷತ್ರ, ಶಿವ ಯೋಗ ಇರಲಿದೆ. ಈ ದಿನ ಯಾವೆಲ್ಲಾ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯವರು ಇಂದು ಬೇರೆಯವರೊಂದಿಗೆ ಅನವಶ್ಯಕ ಘರ್ಷಣೆಯನ್ನು ತಪ್ಪಿಸಿ. ಸೋಮಾರಿತನ ಬಿಟ್ಟು ಕೆಲಸ ಮಾಡಿದರಷ್ಟೇ ಶುಭ ಫಲ. ವ್ಯಾಪಾರಸ್ಥರು ಸರ್ಕಾರಿ ಅಧಿಕಾರಿಯೊಂದಿಗೆ ಸೌಮ್ಯವಾಗಿ ವರ್ತಿಸಿ. ಅಸಿಡಿಟಿ ಸಮಸ್ಯೆ ಇರುವವರು ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರು ಇಂದು ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ನಿಮ್ಮವರೇ ನಿಮಗೆ ಮೋಸ ಮಾಡಬಹುದು. ಕೆಲಸವು ನಿರೀಕ್ಷೆಯಂತೆ ಪೂರ್ಣಗೊಳ್ಳುವುದರಿಂದ ಮನಸ್ಸಿಗೆ ಸಂತೋಷ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಲಾಭದಾಯಕವಾಗುತ್ತವೆ.

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರು ಇಂದು ಕಾನೂನಿಗೆ ವಿರುದ್ಧವಾಗಿ ನಡೆಯುವ ಸಾಹಸ ಮಾಡಬೇಡಿ. ಕಚೇರಿಯಲ್ಲಿ ಸಭ್ಯತೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ. ವ್ಯಾಪಾರದಲ್ಲಿ ಆಸಕ್ತಿ ಇರುವ ಮಹಿಳೆಯರು ವ್ಯಾಪಾರಕ್ಕೆ ಸಂಬಂಧಿಸಿದ ಆನ್‌ಲೈನ್ ಶಿಕ್ಷಣವನ್ನು ಪಡೆಯಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರು ಕಚೇರಿಯಲ್ಲಿ ಮಾತನಾಡುವಾಗ ನಿಮ್ಮ ಮಾತಿನ ಬಗ್ಗೆ ನಿಗಾವಹಿಸಿ. ಇಲ್ಲದಿದ್ದರೆ, ಬಾಸ್ ನಿಮ್ಮ ಬಗ್ಗೆ ಕೋಪಗೊಳ್ಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿವಾದಗಳನ್ನು ತಪ್ಪಿಸಿ. ಆಹಾರ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ.

ಇದನ್ನೂ ಓದಿ- Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರು ಸ್ಥಗಿತಗೊಂಡಿರುವ ಕೆಲಸಗಳನ್ನು ಪುನರಾರಂಭಿಸಲು ಇದು ಉತ್ತಮ ದಿನ. ಖಾಸಗಿ ವಲಯಕ್ಕೆ ಸಂಬಂಧಿಸಿದ ಜನರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂವಹನವನ್ನು ಹೆಚ್ಚಿಸಿ. ಧನಾತ್ಮಕವಾಗಿರುವುದರಿಂದ ಶುಭ ಫಲಗಳನ್ನೇ ಪಡೆಯಬಹುದು. ಮನೆಯಿಂದ ಕೆಲಸ ಮಾಡುವ ಜನರು ಸಹೋದ್ಯೋಗಿಗಳೊಂದಿಗೆ ಸಂಪರ್ಕ ಹೊಂದಿರುವುದು ಮುಖ್ಯ. ವ್ಯವಹಾರದಲ್ಲಿ ಹೊಸ ಪ್ರಾರಂಭಕ್ಕೆ ಹಣಕಾಸಿನ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರೇ ಇತರರ ಕಡೆಗೆ ನಿಮ್ಮ ವಿನಮ್ರ ಸ್ವಭಾವವು ಸಂಬಂಧಗಳನ್ನು ಬಲಪಡಿಸುತ್ತದೆ. ಒತ್ತಡದ ಕಾರಣದಿಂದ ಕೆಲಸ ಬಿಡುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಯಾವುದೇ ಪ್ರಮುಖ ವಿಚಾರಗಳ ಬಗ್ಗೆ ನಿರ್ಧರಿಸುವಾಗ ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯವರೇ ಇಂದು ಬೇರೆಯವರ ವಿರುದ್ಧ ಕೋಪದ ಭಾವನೆ ಬೆಳೆಯಲು ಬಿಡಬೇಡಿ. ಸಾರ್ವಜನಿಕ ಸಂಬಂಧಗಳು ಸುಧಾರಿಸುತ್ತವೆ. ಇದರಿಂದ ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. ನಿಮ್ಮ ಬಾಸ್ ನಿಮ್ಮ ವಿರುದ್ಧ ಕೋಪಗೊಂಡಿದ್ದರೆ ಅವರೊಂದಿಗೆ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. 

ಇದನ್ನೂ ಓದಿ- Shukra Gochar: ಶುಕ್ರ ನಕ್ಷತ್ರ ಪರಿವರ್ತನೆ, 4 ರಾಶಿಯವರಿಗೆ ಬಂಪರ್ ಲಾಭ, ಭಾರೀ ಯಶಸ್ಸು

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರು ಇಂದು ಕೆಲಸದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆದರೆ, ಭಗವಂತನನ್ನು ನೆನೆದು ಕೆಲಸ ಮಾಡುವುದರಿಂದ ಕಾರ್ಯಸಿದ್ಧಿಯಾಗುತ್ತದೆ. ಆಸಕ್ತಿ ಕೊರತೆಯಿಂದಾಗಿ ಅಧಿಕೃತ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳದೇ ಇರಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರು ಇಂದು ತಮ್ಮ ನೆಟ್‌ವರ್ಕ್ ವಿಸ್ತರಿಸಲು ಯೋಚಿಸಬಹುದು. ಕಚೇರಿ ಕೆಲಸಗಳಿಗೆ ಸಂಬಂಧಿಸಿದಂತೆ ಇಷ್ಟು ದಿನಗಳು ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ದೈನಂದಿನ ವ್ಯವಹಾರದಲ್ಲಿ ತೃಪ್ತಿದಾಯಕ ಲಾಭವನ್ನು ಗಳಿಸುವಿರಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರಿಗೆ ಜ್ಞಾನಾರ್ಜನೆಗೆ ಇಂದು ಶುಭ ದಿನ. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದಕ್ಕೆ ಸಿದ್ಧರಾಗಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಇಂದು ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸುವುದರಿಂದ ಸಂತೋಷವನ್ನು ಅನುಭವಿಸುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರೇ ಇತರರೊಂದಿಗೆ ಸೌಮ್ಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಜೀವನೋಪಾಯಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಹಾರ್ಡ್‌ವೇರ್ ವ್ಯಾಪಾರ ಮಾಡುವವರು ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News