ನವದೆಹಲಿ: ಶ್ರಾವಣ ಮಾಸ ಆರಂಭವಾಗಿದೆ. ಈ ಮಾಸದಲ್ಲಿ ಭಗವಾನ್ ಶಿವನನ್ನು ಪೂರ್ಣ ಭಕ್ತಿಯಿಂದ ಪೂಜಿಸಲಾಗುತ್ತದೆ, ಇದರಿಂದ ಅವನು ಸಂತುಷ್ಟನಾಗಿ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆಯಿದೆ. ಶ್ರಾವಣ ಮಾಸದ ಸೋಮವಾರವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಸೋಮವಾರದ ಜೊತೆಗೆ ಶನಿವಾರವೂ ಶ್ರಾವಣ ಮಾಸದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಶನಿವಾರ ಶನಿ ದೇವರಿಗೆ ಮೀಸಲಾಗಿದೆ.
ಧಾರ್ಮಿಕ ಗ್ರಂಥಗಳ ಪ್ರಕಾರ ಶನಿ ದೇವನು ಶಿವನ ಶಿಷ್ಯ ಮತ್ತು ಶನಿ ದೇವನನ್ನು ಶ್ರಾವಣದಲ್ಲಿ ಪೂಜಿಸುವುದರಿಂದ, ಶಿವನ ಆಶೀರ್ವಾದವೂ ಸಿಗುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಶನಿದೇವನನ್ನು ಪೂಜಿಸುವುದರಿಂದ ಶನಿದೇವನ ದೈಯ್ಯಾ, ಸಾಡೇಸಾತಿ ಮತ್ತು ಮಹಾದಶಾ ಸಮಯದಲ್ಲಿ ಹೆಚ್ಚು ತೊಂದರೆಯಾಗುವುದಿಲ್ಲವೆಂದು ಹೇಳಲಾಗುತ್ತದೆ. ಶನಿವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನೀವು ಶನಿದೇವರ ಆಶೀರ್ವಾದವನ್ನು ಪಡೆಯುತ್ತೀರಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
ಇದನ್ನೂ ಓದಿ: ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಮತ್ತೆ ನಿದ್ದೆಯೇ ಬರುವುದಿಲ್ಲವೇ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ
ಶನಿವಾರದಂದು ಈ ಪರಿಹಾರ ಮಾಡಿ
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಶನಿಯ ಸಾಡೇಸಾತಿ, ಧೈಯ್ಯಾ ಅಥವಾ ಮಹಾದಶಾ ಹೊಂದಿದ್ದರೆ, ಶನಿಯ ದುಷ್ಪರಿಣಾಮಗಳಿಂದ ವ್ಯಕ್ತಿಯು ತೊಂದರೆಗೊಳಗಾಗಿದ್ದರೆ, ಶ್ರಾವಣ ಶನಿವಾರದಂದು ಈ ಪರಿಹಾರವನ್ನು ಮಾಡಿದರೆ ಪ್ರಯೋಜನವಾಗುತ್ತದೆ. ಇದಕ್ಕಾಗಿ ಶ್ರಾವಣ ಶನಿವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಇದರೊಂದಿಗೆ ಶ್ರಾವಣದ ಪ್ರತಿ ಶನಿವಾರ ಉಪವಾಸವನ್ನು ಆಚರಿಸಿ.
- ಶಾಸ್ತ್ರಗಳ ಪ್ರಕಾರ ವ್ಯಕ್ತಿಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ, ಹಲವು ಪ್ರಯತ್ನಗಳ ನಂತರವೂ ಶ್ರಮಕ್ಕೆ ತಕ್ಕ ಫಲ ಸಿಗದಿದ್ರೆ, ಶ್ರಾವಣ ಶನಿವಾರದಂದು ಬೇವಿನ ಮರದಿಂದ ಹವನ ಮಾಡಿ. ಅದರಲ್ಲಿ 108 ಕಪ್ಪು ಎಳ್ಳನ್ನು ನೈವೇದ್ಯ ಮಾಡಬೇಕು. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಹಾಗೂ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಇದನ್ನೂ ಓದಿ: Astro Tips: ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಈ ಕೆಟ್ಟ ದೆಸೆ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತವೆ!
- ಧಾರ್ಮಿಕ ಗ್ರಂಥಗಳ ಪ್ರಕಾರ ವ್ಯಕ್ತಿಯ ಹಣವು ಹಲವು ದಿನಗಳವರೆಗೆ ಸಿಕ್ಕಿಕೊಂಡಿದ್ದರೆ, ಅದನ್ನು ಮರಳಿ ಪಡೆಯಲು ನೀವು ಈ ಪರಿಹಾರವನ್ನು ಮಾಡಬಹುದು. ಇದಕ್ಕಾಗಿ ಕಬ್ಬಿಣದ ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಮಧ್ಯದ ಬೆರಳನ್ನು ಇಟ್ಟು ಶನಿದೇವನ ಮಂತ್ರವಾದ 'ಓಂ ಪ್ರಾಣ್ ಪ್ರಿಂ ಪ್ರೌನ್ ಸ: ಶನೈಶ್ಚರಾಯ ನಮಃ' ಎಂದು 11 ಬಾರಿ ಜಪಿಸಬೇಕು. ಇದರ ನಂತರ ಈ ಬಟ್ಟಲನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಆ ಹಣವು ಮರಳಿ ಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.