Shakuna Shastra: ಈ ಸಮಯದಲ್ಲಿ ಗೂಬೆ ನೋಡಿದ್ರೆ ದಿಢೀರ್ ಧನಲಾಭ..!

What Does it Mean When You See an Owl: ನೈಋತ್ಯ ದಿಕ್ಕಿನಲ್ಲಿ ಗೂಬೆ ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಬಿಕ್ಕಟ್ಟಿನ ಸೂಚಕವೆಂದು ಹೇಳಲಾಗಿದೆ. ಪೂರ್ವದಲ್ಲಿ ಗೂಬೆಯನ್ನು ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಲಾಭಗಳ ಸೂಚಕವೆಂದು ಪರಿಗಣಿಸಲಾಗುತ್ತದೆ.

Written by - Puttaraj K Alur | Last Updated : Jun 23, 2023, 09:54 AM IST
  • ಪ್ರಯಾಣದ ವೇಳೆ ನೀವು ಗೂಬೆ ನೋಡಿದ್ರೆ ಧನಪ್ರಾಪ್ತಿಯ ಸಂಕೇತವಂತೆ
  • ಗೂಬೆಯು ನಿಮ್ಮ ಮನೆಗೆ ಬಂದರೆ ಅಶುಭವೆಂದು ಹೇಳಲಾಗುತ್ತದೆ
  • ಬಿಳಿ ಗೂಬೆಯನ್ನು ನೋಡುವುದರಿಂದ ನಿಮಗೆ ಶುಭಸುದ್ದಿಗಳೇ ಸಿಗುತ್ತವೆ
Shakuna Shastra: ಈ ಸಮಯದಲ್ಲಿ ಗೂಬೆ ನೋಡಿದ್ರೆ ದಿಢೀರ್ ಧನಲಾಭ..!   title=
ರಾತ್ರಿಯ ರಾಜ ಗೂಬೆ

ನವದೆಹಲಿ: ಹಿಂದೂ ಧರ್ಮದಲ್ಲಿ ಹಲವಾರು ನಂಬಿಕೆಗಳು ಹಾಸುಹೊಕ್ಕಾಗಿವೆ. ಅದೇ ರೀತಿ ಗೂಬೆಗಳ ಬಗ್ಗೆಯೂ ಅನೇಕ ನಂಬಿಕೆಗಳಿವೆ. ರಾತ್ರಿಯ ರಾಜನೆಂದು ಕರೆಸಿಕೊಳ್ಳುವ ಗೂಬೆ ತಾಯಿ ಲಕ್ಷ್ಮಿದೇವಿಯ ವಾಹನ. ಶಕುನ ಶಾಸ್ತ್ರದ ಪ್ರಕಾರ ಗೂಬೆಯನ್ನು ಕೆಲವು ಸ್ಥಳಗಳಲ್ಲಿ ನೋಡುವುದು ಮಂಗಳಕರ ಮತ್ತು ಇನ್ನು ಕೆಲವು ಸ್ಥಳಗಳಲ್ಲಿ ನೋಡುವುದು ಅಶುಭವೆಂಬ ನಂಬಿಕೆಯಿದೆ.

ಪ್ರಯಾಣದ ವೇಳೆ ನೀವು ಗೂಬೆ ನೋಡಿದ್ರೆ ಧನಪ್ರಾಪ್ತಿಯ ಸಂಕೇತವಂತೆ. ಅದೇ ರೀತಿ ಗೂಬೆ ನಿಮ್ಮ ಮನೆಗೆ ಬಂದರೆ ಅಶುಭವೆಂದು ಹೇಳಲಾಗುತ್ತದೆ. ಬಿಳಿ ಗೂಬೆ ಕಾಣಿಸಿಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬಿಳಿ ಗೂಬೆ ಕಾಣಸಿಗುವುದು ವಿರಳವಾದರೂ ಅದನ್ನು ನೋಡುವುದರಿಂದ ನಿಮಗೆ ಶುಭಸುದ್ದಿಗಳೇ ಸಿಗುತ್ತವೆ.   

ಇದನ್ನೂ ಓದಿ: Shravana Masa 2022: ಶ್ರಾವಣ ಸೋಮವಾರದ ವ್ರತ ಆಚರಿಸುವ ಮೊದಲು ನಿಯಮ ತಿಳಿಯಿರಿ

ಶಕುನಶಾಸ್ತ್ರದ ಪ್ರಕಾರ ನೀವು ಪದೇ ಪದೇ ಗೂಬೆಯನ್ನು ನೋಡುವುದರಿಂದ ನಿಮ್ಮ ಜೀವನದಲ್ಲಿ ಸುಖ-ಸಂತೋಷ ಸಿಗುತ್ತದಂತೆ. ನಿಮಗೆ ಧನಲಾಭ ಪ್ರಾಪ್ತಿಯಾಗುತ್ತದೆ. ಎಡಭಾಗದಲ್ಲಿ ಗೂಬೆ ಕಂಡರೆ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ. ಅದೇರೀತಿ ಬಲಭಾಗದಲ್ಲಿ ಗೂಬೆ ಕಂಡರೆ ಅಶುಭವೆಂದು ಹೇಳಲಾಗುತ್ತದೆ. ನೀವು ಹಗಲಿನಲ್ಲಿ ಗೂಬೆ ಕಂಡರೆ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಕೈ ಹಾಕುವ ಕೆಲಸ ಯಶಸ್ವಿಯಾಗುತ್ತದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿ ಶೀಘ್ರವೇ ಶುಭ ಸುದ್ದಿಗಳು ಸಿಗುತ್ತವೆ.   

ನೈಋತ್ಯ ದಿಕ್ಕಿನಲ್ಲಿ ಗೂಬೆ ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಬಿಕ್ಕಟ್ಟಿನ ಸೂಚಕವೆಂದು ಹೇಳಲಾಗಿದೆ. ಪೂರ್ವದಲ್ಲಿ ಗೂಬೆಯನ್ನು ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ಆರ್ಥಿಕ ಲಾಭಗಳ ಸೂಚಕವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಗೂಬೆಯನ್ನು ನೋಡಿದ್ರೆ ಅಥವಾ ಅದರ ಕೂಗು ಕೇಳಿದ್ರೆ ನೀವು ನಿಮ್ಮ ಶತ್ರುಗಳ ವಿರುದ್ಧ ಗೆಲುವು ಸಾಧಿಸುವಿರಿ ಎಂದರ್ಥವಂತೆ.   

ಇದನ್ನೂ ಓದಿ: Dream Interpretation: ಘನತೆ, ಗೌರವ ಹೆಚ್ಚಿಸಿ ಪ್ರಮೋಷನ್ಗೆ ಕಾರಣ ಈ ರೀತಿಯ ಕನಸುಗಳು!

​ರಾತ್ರಿಯ ರಾಜನೆಂದು ಕರೆಯಲಾಗುವ ಗೂಬೆಯನ್ನು ರಾತ್ರಿ ಹೊತ್ತು ನೋಡಿದ್ರೆ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಅದೃಷ್ಟ ದೊರೆತು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ನಿಮ್ಮ ಕನಸಿನಲ್ಲಿ ಗೂಬೆಯನ್ನು ನೋಡಿದ್ರೆ ಶೀಘ್ರವೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ  ಪಡೆಯುತ್ತೀರಿ ಎಂದರ್ಥ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News