Shani Gochar 2022: ಸಾಡೇಸಾತಿ ಇಲ್ಲದಿದ್ದರೂ ಈ ಎರಡು ರಾಶಿಯವರು ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ

Shani Gochar 2022: ಶನಿಯ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ತೊಂದರೆಗಳನ್ನು ನೀಡುತ್ತದೆ. ಶನಿಯು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಮೀನ ರಾಶಿಯವರಿಗೆ  ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಿದೆ. ಇದರ ಹೊರತಾಗಿ 2 ರಾಶಿಯ ಜನರು ಶನಿಗ್ರಹದ ಕೋಪಕ್ಕೆ ಕಾರಣವಾಗಬೇಕಾಗುತ್ತದೆ.   

Written by - Ranjitha R K | Last Updated : May 6, 2022, 03:55 PM IST
  • ಶನಿ ಗ್ರಹ ಏಪ್ರಿಲ್ 29 ರಂದು ಕುಂಭ ರಾಶಿ ಪ್ರವೇಶ
  • ಮೀನ ರಾಶಿಯವರಿಗೆ ಸಾಡೇಸಾತಿ ಆರಂಭ
  • ಶನಿ ದೆಸೆಯಿಂದ ಮುಕ್ತಿ ಪಡೆದ ಧನು ರಾಶಿ
Shani Gochar 2022: ಸಾಡೇಸಾತಿ ಇಲ್ಲದಿದ್ದರೂ ಈ ಎರಡು ರಾಶಿಯವರು ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ  title=
Shani Gochar 2022 (file photo)

ಬೆಂಗಳೂರು : Shani Gochar 2022 : ಶನಿ ಗ್ರಹ ಏಪ್ರಿಲ್ 29 ರಂದು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಯವರ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಕೆಲವರಿಗೆ ಶನಿಯ ರಾಶಿ ಬದಲಾವಣೆ ಶುಭ ಫಲವನ್ನು ನೀಡಿದರೆ, ಇನ್ನು ಕೆಲವರಿಗೆ ತೊಂದರೆಯಾಗಲಿದೆ. ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಮೀನ ರಾಶಿಯವರಿಗೆ  ಸಾಡೇಸಾತಿ ಅಥವಾ ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಿದ್ದರೆ,  ಧನು ರಾಶಿಯವರು ಸಾಡೇ ಸಾತಿಯಿಂದ ಮುಕ್ತಿ ಪಡೆದಿದ್ದಾರೆ. ಆದರೆ ಇನ್ನೂ 2 ರಾಶಿಯವರಿಗೆ ಈ ಶನಿ ಸಂಕ್ರಮಣದಿಂದ ಕೆಟ್ಟ ದಿನಗಳು ಆರಂಭವಾಗಿದ್ದು, ದೀರ್ಘಕಾಲದವರೆಗೆ ಇವರು ಶನಿಯ ಪ್ರಕೋಪಕ್ಕೆ ಗುರಿಯಾಗಲಿದ್ದಾರೆ.  

ಎಚ್ಚರದಿಂದ ಇರಬೇಕು ಈ ಎರಡು ರಾಶಿಯವರು : 
ಕರ್ಕಾಟಕ- ಶನಿ ಸಂಕ್ರಮಿಸಿದ ತಕ್ಷಣ ಕರ್ಕಾಟಕ ರಾಶಿಯವರಿಗೆ ಶನಿಯ ಧೈಯಾ ಆರಂಭವಾಗಿದೆ.  ಇದು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಅಂದರೆ ಕರ್ಕಾಟಕ ರಾಶಿಯ ಜನರು ಎರಡೂವರೆ ವರ್ಷಗಳ ಕಾಲ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.  ಈ ರಾಶಿಯವರು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ವೃತ್ತಿ-ಶಿಕ್ಷಣದಲ್ಲಿ ತೊಂದರೆ ಎದುರಿಸಬೇಕಾಗಬಹುದು. ಹಣದ ನಷ್ಟ ಉಂಟಾಗಬಹುದು. ಖರ್ಚು ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು. 

ಇದನ್ನೂ ಓದಿ : Astro Tips: ಈ ರಾಶಿಯವರು ಮರೆತು ಕೂಡ ಕಪ್ಪು ದಾರವನ್ನು ಧರಿಸಬಾರದು, ಯಾಕೆ ಗೊತ್ತಾ?

ವೃಶ್ಚಿಕ : ಶನಿ ಸಂಕ್ರಮಣದಿಂದ ವೃಶ್ಚಿಕ ರಾಶಿಯವರಿಗೂ ಎರಡು ವರ್ಷಗಳ ಶನಿ ದೆಸೆ ಆರಂಭವಾಗಲಿದೆ. ಹೀಗಾಗಿ ಮುಂಬರುವ ಎರಡೂವರೆ ವರ್ಷ ಈ ರಾಶಿಯವರು ಕಷ್ಟ ಎದುರಿಸಬೇಕಾಗುತ್ತದೆ. ಶನಿಯ ಧೈಯ್ಯಾ ಸಾಡೇಸಾತಿ ಸಂಪತ್ತು, ಆರೋಗ್ಯ ಮತ್ತು ಪ್ರತಿಷ್ಠೆಯ ನಷ್ಟವನ್ನು ಉಂಟುಮಾಡುತ್ತದೆ. ಇದಲ್ಲದೆ, ಪ್ರಗತಿಯಲ್ಲಿ ಅಡೆತಡೆಗಳು ಎದುರಾಗುತ್ತದೆ. ಸಂಬಂಧಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ.  ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಬಹಲ್ ಮುಖ್ಯ . 

ಶನಿಯು ಕಾರ್ಯಗಳಿಗೆ ತಕ್ಕಂತೆ ಫಲವನ್ನು ಕೊಡುತ್ತಾನೆ :
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಅಂದರೆ ಶನಿಯು ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ. ಆದ್ದರಿಂದ, ಒಳ್ಳೆಯ ಕಾರ್ಯಗಳನ್ನು ಮಾಡಿರುವ  ಜನರು ಶುಭ ಫಲವನ್ನು ಪಡೆಯುತ್ತಾರೆ. ಸಾಡೇ ಸಾತಿ ಧೈಯ್ಯಾ ಕೂಡಾ ಇವರ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದಿಲ್ಲ. ಈ ಹೊತ್ತಿನಲ್ಲಿ ಅಸಹಾಯಕರು, ಮಹಿಳೆಯರು, ವೃದ್ಧರನ್ನು ಅವಮಾನಿಸಬಾರದು. ಈ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. 

ಇದನ್ನೂ ಓದಿ : Rahu Planet Transit 2022: ಪೂರ್ತಿ ಒಂದು ವರ್ಷದವರೆಗೆ ಈ ರಾಶಿಯವರ ಮೇಲಿರಲಿದೆ ರಾಹುವಿನ ಕೃಪೆ, ಎಲ್ಲಾ ಕೆಲಸಗಳಲ್ಲಿಯೂ ಸಿಗಲಿದೆ ಯಶಸ್ಸು

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News