ಶ್ರೀಫಲ ತಾಯಿ ಲಕ್ಷ್ಮಿ ಸ್ವರೂಪಿ, ಮನೆಯ ವಾಸ್ತು ದೋಷ ನಿವಾರಣೆಗೆ ಈ ರೀತಿ ಬಳಸಿ!

Shrifal Vastu Tips: ತೆಂಗಿನ ಮರ ಇರುವ ಮನೆಯಲ್ಲಿ ಯಾವಾಗಲು ಸುಖ-ಶಾಂತಿ ನೆಲೆಸಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತೆಂಗಿನ ಮರಕ್ಕೆ ಸಂಬಂಧಿಸಿದ ಕೆಲ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)  

Written by - Nitin Tabib | Last Updated : Dec 1, 2023, 10:53 PM IST
  • ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ತೆಂಗಿನಕಾಯಿಗೆ ಸಂಬಂಧಿಸಿದ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದು ಸಾಕಷ್ಟು ಪ್ರಯೋಜನವನ್ನು ನೀಡಲಿದೆ.
  • ನೀರು ಇರುವ ತೆಂಗಿನಕಾಯಿಯನ್ನು ಅಡಿಯಿಂದ ಮುಡಿಯವರೆಗೆ 21 ಬಾರಿ ಇಳಿಸಿ,
  • ನಂತರ ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕಿ.
ಶ್ರೀಫಲ ತಾಯಿ ಲಕ್ಷ್ಮಿ ಸ್ವರೂಪಿ, ಮನೆಯ ವಾಸ್ತು ದೋಷ ನಿವಾರಣೆಗೆ ಈ ರೀತಿ ಬಳಸಿ! title=

ಬೆಂಗಳೂರು: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವ ನೀಡಲಾಗಿದೆ, ಇದೇ ಕಾರಣದಿಂದ ಅದನ್ನು ವಿವಿಧ ರೀತಿಯ ಪೋಜೆಗಳಲ್ಲಿ ಬಳಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತೆಂಗಿನ ಮರದಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎನ್ನಲಾಗುತ್ತದೆ. ವಾಸ್ತು ಪ್ರಕಾರ ತೆಂಗಿನ ಮರ ಇರುವ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ತೆಂಗಿನ ಮರಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಲಾಗಿದೆ. ಹಾಗಾದರೆ ಬನ್ನಿ ಮನೆಯಲ್ಲಿ ತೆಂಗಿನ ಮರವನ್ನು ನೆಡುವುದರಿಂದ ಆಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ. (Spiritual News In Kannada)

ವಾಸ್ತು ಪ್ರಕಾರ ತೆಂಗಿನ ಮರವನ್ನು ನೆಡುವುದರಿಂದ ಆಗುವ ಪ್ರಯೋಜನಗಳು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಆಗಾಗ್ಗೆ ಸಮಸ್ಯೆಗಳಿದ್ದರೆ, ನೀವು ಮನೆಯ ಅಂಗಳದಲ್ಲಿ ತೆಂಗಿನ ಮರವನ್ನು ನೆಡಬೇಕು. ತೆಂಗಿನ ಮರವನ್ನು ನೆಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೂ ಮನೆಯ ಸದಸ್ಯರಿಗೆ ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ. ಸುಖ, ಸಮೃದ್ಧಿಗಾಗಿ ಮನೆಯಲ್ಲಿ ತೆಂಗಿನ ಮರವನ್ನು ನೆಡಬೇಕು. ತೆಂಗಿನಕಾಯಿಯನ್ನು ಅನೇಕ ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಮರವನ್ನು ನೆಡುವುದು ಶುಭಕರ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-ಶತಮಾನಗಳ ಬಳಿಕ ಡಿಸೆಂಬರ್ ತಿಂಗಳಿನಲ್ಲಿ 7 ಅಪರೂಪದ ರಾಜಯೋಗಗಳು, ವರ್ಷ 2024ರಲ್ಲಿ ಈ ಜನರ ಗೋಲ್ಡನ್ ಟೈಮ್ ಆರಂಭ!

ತೆಂಗಿನಕಾಯಿಗೆ ಸಂಬಂಧಿಸಿದ ನಂಬಿಕೆ
ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ, ತೆಂಗಿನಕಾಯಿಗೆ ಸಂಬಂಧಿಸಿದ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದು ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ನೀರು ಇರುವ ತೆಂಗಿನಕಾಯಿಯನ್ನು ಅಡಿಯಿಂದ ಮುಡಿಯವರೆಗೆ 21 ಬಾರಿ ಇಳಿಸಿ, ನಂತರ ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕಿ. ಪ್ರತಿ ಮಂಗಳವಾರ ಅಥವಾ ಶನಿವಾರದಂದು ಈ ಕೆಲಸ ಮಾಡಿದರೆ, ಕೆಲ ದಿನಗಳ ಬಳಿಕ ನಿಮ್ಮ ಜೀವನದ ಸಮಸ್ಯೆಗಳು ಶಾಶ್ವತವಾಗಿ ನಿವಾರಣೆಯಾಗುತ್ತವೆ. ತೆಂಗಿನಕಾಯಿ ಮತ್ತು ಅದರ ನೀರು ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-ದೇವಗುರು ಬೃಹಸ್ಪತಿ ಮತ್ತು ಶುಕ್ರರಿಂದ 'ಕಾಮ ರಾಜಯೋಗ' ರಚನೆ, ಧನ ಕುಬೇರ ಕೃಪೆಯಿಂದ ಈ ರಾಶಿಗಳ ಭಾಗ್ಯೋದಯ-ಉನ್ನತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News