Special Coincidence: ಶನಿ ದೇವನ ಎಲ್ಲಾ ದೋಷಗಳಿಂದ ಮುಕ್ತಿ, ಈ ವಿಶೇಷ ಯೋಗದಂದು ಅನುಸರಿಸಿ ವಿಶೇಷ ಉಪಾಯ

Special Yoga On Shani Pradosh - ಜನವರಿ 14 ರಂದು, ಸೂರ್ಯ ತನ್ನ ಪುತ್ರ ಶನಿಯ ರಾಶಿಯಾಗಿರುವ ಮಕರರಾಶಿಗೆ ಪ್ರವೇಶಿಸಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿಯ ಬೀಜಗಳು ಶತ್ರುತ್ವಕ್ಕೆ ಸಂಬಂಧಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಗ್ರಹಗಳಿಂದ ಉಂಟಾಗುವ ಅಶುಭ ಯೋಗದ ದುಷ್ಪರಿಣಾಮಗಳನ್ನು ತಪ್ಪಿಸಲು ಶನಿ ಪ್ರದೋಷದಂದು ಶಿವನ ಆರಾಧನೆಯು (Shiva Worship) ಮಂಗಳಕರವಾಗಿದೆ.

Written by - Nitin Tabib | Last Updated : Jan 14, 2022, 07:45 PM IST
  • ಶನಿಯ ಸಾಡೆಸಾತಿಯಿಂದ ಮುಕ್ತಿಗೆ ವಿಶೇಷ ಉಪಾಯ
  • ಶನಿ ಪ್ರದೋಷದಂದು ನಿರ್ಮಾಣಗೊಳ್ಳುತ್ತಿದೆ ವಿಶೇಷ ಯೋಗ.
  • ಶಿವನ ಪೂಜೆ ವಿಶೇಷ ಫಲ ನೀಡುತ್ತದೆ.
Special Coincidence: ಶನಿ ದೇವನ ಎಲ್ಲಾ ದೋಷಗಳಿಂದ ಮುಕ್ತಿ, ಈ ವಿಶೇಷ ಯೋಗದಂದು ಅನುಸರಿಸಿ ವಿಶೇಷ ಉಪಾಯ  title=
Special Yoga On Shani Pradosh (File Photo)

ನವದೆಹಲಿ: Shani Pradosh Vrat 2022 - ವರ್ಷ 2022 ರಲ್ಲಿ, ಶನಿ ಪ್ರದೋಷ ವ್ರತ 2022ರ  (Shani Pradosh Vrat 2022) ಒಟ್ಟು ಮೂರು ವಿಶೇಷ ಕಾಕತಾಳೀಯಗಳು ನಿರ್ಮಾಣಗೊಳ್ಳುತ್ತಿವೆ. ಮೊದಲನೆಯ ಶನಿ ಪ್ರದೋಷ ಉಪವಾಸ (Vrat) ಜನವರಿ 15 ರಂದು ನಿರ್ಮಾಣಗೊಳ್ಳುತ್ತಿದೆ. ಈ ದಿನ ಶಿವನ ಆರಾಧನೆ ಮಾಡುವುದರಿಂದ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುತ್ತದೆ. ಶನಿ ಪ್ರದೋಷ ವ್ರತದ ಎರಡನೇ ಮಂಗಳಕರ ಸಂಯೋಗ ಅಕ್ಟೋಬರ್ 22 ರಂದು ಮತ್ತು ಮೂರನೆಯದು ನವೆಂಬರ್ 5 ರಂದು ನಿರ್ಮಾಣಗೊಳ್ಳುತ್ತಿದೆ. ಶನಿ ಪ್ರದೋಷ ಉಪವಾಸದ ಸಮಯದಲ್ಲಿ ಏನು ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ ತಿಳಿಯೋಣ ಬನ್ನಿ.

ಶನಿಯ ಸಾಡೆಸಾತಿ (Shani Sade Sathi) ಹಾಗೂ ಎರಡೂವರೆ ವರ್ಷ ಕಾಟದಿಂದ (Shani Dhaiya) ಮುಕ್ತಿ ಪಡೆಯಲು ಈ ವಿಶೇಷ ಉಪಾಯ ಮಾಡಿ
ಜನವರಿ 14 ರಂದು, ಸೂರ್ಯನು ತನ್ನ ಪುತ್ರನ ರಾಶಿಯಾಗಿರುವ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿಯ ಬೀಜಗಳು ಶತ್ರುತ್ವಕ್ಕೆ ಸಂಬಂಧಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಗ್ರಹಗಳಿಂದ ಉಂಟಾಗುವ ಅಶುಭ ಯೋಗದ ದುಷ್ಪರಿಣಾಮಗಳನ್ನು ತಪ್ಪಿಸಲು ಶನಿ ಪ್ರದೋಷದಂದು ಶಿವನ ಆರಾಧನೆಯು ಮಂಗಳಕರವಾಗಿದೆ. ಶನಿ ಪ್ರದೋಷದಂದು ಶಿವನ ಆರಾಧನೆ ಮಾಡುವುದರಿಂದ ಶನಿಯ ಅಶುಭ ಪರಿಣಾಮಗಳು ಮತ್ತು ತೊಂದರೆಗಳು ನಿವಾರಣೆಯಾಗುತ್ತವೆ. ಇದಲ್ಲದೇ ಶನಿ ಸಾಡೇಸಾತಿ, ಎರಡೂವರೆ ವರ್ಷಗಳ ಕಾಟ, ಮಹಾದೆಸೆ ಇರುವವರಿಗೆ ಜನವರಿ 15ರ ಶನಿ ಪ್ರದೋಷ ಉಪವಾಸ ಬಹಳ ವಿಶೇಷ. ಹಾಗೆಯೇ ಪೌಷ ಮಾಸವಾದ್ದರಿಂದ ಪೂಜೆಯ ಫಲಗಳು ಹಲವು ಪಟ್ಟು ಹೆಚ್ಚಾಗಲಿವೆ.

ಇದನ್ನೂ ಓದಿ-ಮನೆಯಲ್ಲಿ ಪಾರಿವಾಳ ಅಥವಾ ಜೇನು ಹುಳು ಗೂಡು ಕಟ್ಟಿವೆಯಾ? ಹಾಗಿದ್ರೆ, ಎಚ್ಚರದಿಂದಿರಿ!

ಶನಿ ಪ್ರದೋಷದಂದು ಏನು ಮಾಡಬೇಕು?
ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ಪ್ರದೋಷದ ದಿನದಂದು ಉಪವಾಸ, ಪೂಜೆ ಮತ್ತು ದಾನ ಮಾಡುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಇದರೊಂದಿಗೆ, ದೈಹಿಕ ನೋವುಗಳನ್ನು ತೆಗೆದುಹಾಕಲಾಗುತ್ತದೆ. ಇದಲ್ಲದೇ ಸಂಪತ್ತು ಮತ್ತು ಆಸ್ತಿಯಲ್ಲಿಯೂ ಕೂಡ ಹೆಚ್ಚಳವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನದಂದು ಬಡವರಿಗೆ ಬಟ್ಟೆ, ಅನ್ನದಾನ ಮಾಡಬೇಕು. ಹಾಗೆಯೇ  ಪಾದರಕ್ಷೆ ಅಥವಾ ಚಪ್ಪಲಿ ದಾನ ಮಾಡುವುದರಿಂದ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಪಾಪಗಳು ನಿವಾರನೆಯಾಗಳಿವೆ. ಪರಿಣಾಮವಾಗಿ ಜೀವನ ಸುಖಮಯವಾಗಲಿದೆ. ಈ ದಿನ ಶಿವನ ರುದ್ರಾಭಿಷೇಕ ಮತ್ತು ಶನಿ ದೇವರಿಗೆ ಎಣ್ಣೆಯ ಅಭಿಷೇಕವು ಮಂಗಳಕರವಾಗಿದೆ. ಅಭಿಷೇಕದ ಬಳಿಕ, ಜಲ ಮತ್ತು ಎಣ್ಣೆಯನ್ನು ಯಾವುದಾದರೊಂದು ಪವಿತ್ರ ನದಿಯಲ್ಲಿ ವಿಸರ್ಜಿಸಬೇಕು.

ಇದನ್ನೂ ಓದಿ-Shani-Surya Samyog: 29 ವರ್ಷಗಳ ನಂತರ ಇಂದು 'ಶನಿ-ಸೂರ್ಯ'ರ ಅಪರೂಪದ ಸಂಯೋಗ, ದ್ವಾದಶ ರಾಶಿಗಳ ಫಲಾಫಲ

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Surya Dev: ಮಕರ ಸಂಕ್ರಾಂತಿಯಂದು ಮನೆಯಲ್ಲಿ ಒಂದು ಚಿಕ್ಕ ವಸ್ತುವನ್ನು ಇರಿಸಿ, ಇಡೀ ವರ್ಷ ಸಿಗುತ್ತೆ ಯಶಸ್ಸು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News