Best remedies to get rid of black lips : ಚಳಿಗಾಲದಲ್ಲಿ ಒಂದು ರೀತಿಯಲ್ಲಿ ತ್ವಚೆಯ ಸಮಸ್ಯೆ ಕಾಡಿದರೆ ಬೇಸಿಗೆಯಲ್ಲಿ ಮತ್ತೊಂದು ರೀತಿಯಲ್ಲಿ ಚಿಂತೆ ಕಾಡತೊಡಗುತ್ತದೆ. ಬಿಸಿಲು ಜಾಸ್ತಿಯಾಗುತ್ತಿದ್ದಂತೆಯೇ ಅದರ ಪರಿಣಾಮ ನೇರವಾಗಿ ತುಟಿಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ನಮ್ಮ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಲು ಶುರುವಾಗುತ್ತದೆ. ಅತಿಯಾದ ಸೂರ್ಯನ ಬೆಳಕಿನಿಂದ ನಮ್ಮ ತುಟಿಗಳು ಕಂದುಬಣ್ಣಕ್ಕೆ ತಿರುಗುತ್ತದೆ. ಅದು ತುಟಿಗಳ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ತುಟಿಗಳ ಚರ್ಮವು ನಮ್ಮ ಸಾಮಾನ್ಯ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ತುಟಿಗಳನ್ನು ಸರಿಯಾಗಿ ಆರೈಕೆ ಮಾಡಿಕೊಳ್ಳದಿದ್ದರೆ, ಅದರ ಬಣ್ಣ ಕಪ್ಪಾಗಲು ಪ್ರಾರಂಭಿಸುತ್ತದೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ತುಟಿಗಳ ಕಪ್ಪು ಬಣ್ಣವನ್ನು ಮತ್ತೆ ಗುಲಾಬಿ ಬಣ್ಣಕ್ಕೆ ತಿರುಗಿಸಬಹುದು.
ತುಟಿಗಳ ಕಪ್ಪು ಬಣ್ಣವನ್ನು ಶಾಶ್ವತವಾಗಿ ದೂರ ಮಾಡುವ ನೈಸರ್ಗಿಕ ಉಪಾಯ :
ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲ ಬೇಗೆಯಿಂದ ತ್ವಚೆಯನ್ನು ಕಾಪಾಡಿಕೊಳ್ಳಲು ದುಬಾರಿ skin care productಗಳನ್ನೇ ಬಳಸಬೇಕು ಎನ್ನುವುದು ಅನಿವಾರ್ಯವಲ್ಲ. ತುಟಿಗಳ ಕಪ್ಪು ಬಣ್ವನ್ನು ಹೋಗಲಾಡಿಸಲು ನಿಂಬೆ ರಸ ಇದ್ದರೆ ಸಾಕು. ನಿಂಬೆಯಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಪರಿಣಾಮವು ನಿಮ್ಮ ತುಟಿಗಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Blood sugar Control tips : ಈ ಎಲೆಯನ್ನು ರಾತ್ರಿ ಹೊತ್ತು ಜಗಿದು ತಿಂದರೆ ಬ್ಲಡ್ ಶುಗರ್ ಕಡಿಮೆ ಮಾಡಲು ಔಷಧಿಯೇ ಬೇಕಿಲ್ಲ!
ತುಟಿಗಳ ಸೌಂದರ್ಯವನ್ನು ಕಾಪಾಡಿಕೊಳ್ಳುವ ಈ ವಿಧಾನವು ತುಂಬಾ ಸುಲಭ. ಇದಕ್ಕಾಗಿ ನೀವು ಹೆಚ್ಚು ಶ್ರಮಪಡುವ ಅಗತ್ಯವಿಲ್ಲ. ಶುದ್ಧವಾದ ಬಟ್ಟಲಿನಲ್ಲಿ ಒಂದು ಚಮಚ ತಾಜಾ ನಿಂಬೆ ರಸವನ್ನು ತೆಗೆದುಕೊಂದು ಅದಕ್ಕೆ ಪುಡಿಮಾಡಿದ ಸಕ್ಕರೆ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಕನಿಷ್ಠ 15 ನಿಮಿಷಗಳ ಕಾಲ ಇರಿಸಿ. ನಂತರ ಇದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿದರೆ, ತುಟಿಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಸರಿಯಾದ ಬಳಕೆಯ ವಿಧಾನ :
ತುಟಿಗಳ ಕಪ್ಪನ್ನು ಹೋಗಲಾಡಿಸಲು ಈ ವಿಧಾನವನ್ನು ಅನುಸರಿಸುವುದು ತುಂಬಾ ಸುಲಭ. ಮೊದಲು ನಿಮ್ಮ ತುಟಿಗಳನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಹತ್ತಿ ಬಟ್ಟೆಯಿಂದ ಒಣಗಿಸಿ. ನಂತರ, ತಯಾರಿಸಿಟ್ಟ ಮಿಶ್ರಣವನ್ನು ಹತ್ತಿಯ ಸಹಾಯದಿಂದ ತುಟಿಗಳ ಮೇಲೆ ಹಚ್ಚಿ. ಹೀಗೆ ಹಚ್ಚಿದ ಮಿಶ್ರಣವನ್ನು ಕನಿಷ್ಠ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಹೀಗೆ ಮಾಡಿದರೆ ತುಟಿಗಳ ಕಪ್ಪು ಬಣ್ಣ ಮಾಯವಾಗಿ ಬಿಡುತ್ತದೆ.
ಇದನ್ನೂ ಓದಿ : Cinnamon Tea Benefits: ತೂಕ ಇಳಿಕೆ ಅಷ್ಟೇ ಅಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೇ ಈ ಚಹಾ!
(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.