ಸೂರ್ಯ ರಾಶಿ ಪರಿವರ್ತನೆಯ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಗ್ರಹವನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯ ಗ್ರಹವು ಪ್ರತಿ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇತ್ತೀಚೆಗಷ್ಟೇ ಏಪ್ರಿಲ್ 14ರಂದು ತನ್ನ ರಾಶಿ ಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿ ಪ್ರವೇಶಿಸಿರುವ ಸೂರ್ಯನು ಮುಂದಿನ ತಿಂಗಳು ಅಂದರೆ ಮೇ 14ರವರೆಗೆ ಇದೇ ರಾಶಿಯಲ್ಲಿ ಉಳಿಯಲಿದ್ದಾನೆ. ಈ ಸಮಯವು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಕೆಲವು ರಾಶಿಯವರಿಗೆ ಇದು ಪ್ರತಿ ಕೆಲಸದಲ್ಲಿ ಯಶಸ್ಸು, ಗೌರವ ಮತ್ತು ಸಂತೋಷ-ಸಮೃದ್ಧಿಯನ್ನು ಕರುಣಿಸಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
ಸೂರ್ಯನ ರಾಶಿ ಬದಲಾವಣೆ: ನಾಲ್ಕು ರಾಶಿಯವರಿಗೆ ತುಂಬಾ ಶುಭ:
ಮೇಷ ರಾಶಿ:
ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಸಂಪತ್ತನ್ನು ವೃದ್ಧಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದ್ದು, ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸಮಯ. ಹೊಸ ಮನೆ, ವಾಹನ ಖರೀದಿಸುವ ಯೋಗವೂ ಇದೆ.
ಇದನ್ನೂ ಓದಿ- Solar Eclipse 2022 Date : ಈ ಮೂರು ರಾಶಿಯವರ ಪಾಲಿಗೆ ಅದೃಷ್ಟ ತರಲಿದೆ ವರ್ಷದ ಮೊದಲ ಸೂರ್ಯ ಗ್ರಹಣ
ಕರ್ಕಾಟಕ ರಾಶಿ:
ಸೂರ್ಯನ ರಾಶಿ ಪರಿವರ್ತನೆಯ ಪರಿಣಾಮವಾಗಿ ಕರ್ಕಾಟಕ ರಾಶಿಯ ಜನರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಿಡಿದ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರು ವೃತ್ತಿಯಲ್ಲಿ ಪ್ರಗತಿ ಪಡೆಯುತ್ತಾರೆ, ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ಸಮಯವು ಕಟಕ ರಾಶಿಯವರಿ ತುಂಬಾ ಶುಭ ಎಂದು ಸಾಬೀತುಪಡಿಸಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಮೇ 24ರವರೆಗೆ ಮುಟ್ಟಿದ್ದೆಲ್ಲ ಚಿನ್ನ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಶುಭ ಫಲಿತಾಂಶಗಳು ನಿಮನ್ನು ಕಾಯುತ್ತಿವೆ ಹೊಸ ಮನೆ, ಕಾರು ಖರೀದಿಯ ಯೋಗವೂ ಇದೆ. ಉದ್ಯೋಗದಲ್ಲಿರುವ ಬಡ್ತಿ, ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಕೆಲಸ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ- April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ
ಮೀನ ರಾಶಿ:
ಸೂರ್ಯನ ಸಂಚಾರವು ಮೀನ ರಾಶಿಯವರಿಗೆ ಸಮಾಜದಲ್ಲಿ ಗೌರವ, ಕೆಲಸದಲ್ಲಿ ಯಶಸ್ಸನ್ನು ಕರುನಿಸಲಿದೆ. ನೀವು ಕೆಲಸ ಮಾಡುವ ಜಾಗದಲ್ಲಿ ಮೇಲಾಧಿಕಾರಿಗಳು ನಿಮ್ಮ ಶ್ರಮವನ್ನು ಪ್ರಶಂಶಿಸುವರು. ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಪ್ರಯೋಜನವನ್ನು ಪಡೆಯಲಿದ್ದೀರಿ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.