ಈ ಒಂದು ರಾಶಿಯವರ ಮೇಲೆ ಪರಿಣಾಮ ಬೀರಲಿದೆ ವರ್ಷದ ಕೊನೆಯ ಚಂದ್ರಗ್ರಹಣ

ಭಾರತದಲ್ಲಿ, ಉಪಛಾಯ ಚಂದ್ರಗ್ರಹಣವಾಗಿ ಕಾಣಲಿದೆ. ಈ ಕಾರಣದಿಂದಾಗಿ ಸೂತಕ ಕಾಲ ಮಾನ್ಯವಾಗಿರುವುದಿಲ್ಲ.

Written by - Ranjitha R K | Last Updated : Oct 14, 2021, 04:03 PM IST
  • ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19, 2021 ರ ಸಂಭವಿಸಲಿದೆ.
  • ಭಾರತದಲ್ಲಿ, ಉಪಛಾಯ ಚಂದ್ರಗ್ರಹಣವಾಗಿ ಕಾಣಲಿದೆ.
  • ಚಂದ್ರ ಗ್ರಹಣವು ಈ ರಾಶಿಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ.
 ಈ ಒಂದು ರಾಶಿಯವರ ಮೇಲೆ ಪರಿಣಾಮ ಬೀರಲಿದೆ ವರ್ಷದ ಕೊನೆಯ ಚಂದ್ರಗ್ರಹಣ   title=
Chandra Grahan 2021 (file photo)

ನವದೆಹಲಿ : ಕಳೆದ  ಮೇ 26, 2021 ರಂದು,  ಈ ವರ್ಷದ ಮೊದಲ ಚಂದ್ರಗ್ರಹಣ (Chandra grahan) ಗೋಚರಿಸಿತ್ತು. ಈಗ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು (Lunar eclipse) ನವೆಂಬರ್ 19, 2021 ರ ಶುಕ್ರವಾರ ಸಂಭವಿಸಲಿದೆ. ಭೂಮಿಯ ನೆರಳು ಸೂರ್ಯನಿಂದ ಬರುವ ಬೆಳಕನ್ನು ತಡೆದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇಲ್ಲಿ ಚಂದ್ರ ಭೂಮಿಯ ನೆರಳಿನಡಿಯಲ್ಲಿ ಬರುತ್ತಾನೆ.  ಇದರ ಪರಿಣಾಮವಾಗಿ ಭಾಗಶಃ ಅಥವಾ ಸಂಪೂರ್ಣ ಚಂದ್ರಗ್ರಹಣವಾಗುತ್ತದೆ.

ಭಾರತದಲ್ಲಿ, ಉಪಛಾಯ ಚಂದ್ರಗ್ರಹಣವಾಗಿ (Chandra grahan 2021) ಕಾಣಲಿದೆ. ಈ ಕಾರಣದಿಂದಾಗಿ ಸೂತಕ ಕಾಲ ಮಾನ್ಯವಾಗಿರುವುದಿಲ್ಲ. ಈ ಚಂದ್ರ ಗ್ರಹಣವು ಮುಖ್ಯವಾಗಿ ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಾದಿಂದ ಗೋಚರಿಸುತ್ತದೆ. ವರ್ಷದ ಈ ಕೊನೆಯ ಚಂದ್ರಗ್ರಹಣದ (Chandragrahan) ಪರಿಣಾಮವನ್ನು ರಾಶಿಚಕ್ರ ಚಿಹ್ನೆಗಳ ಮೇಲೂ ಕಾಣಬಹುದು. 

ಇದನ್ನೂ ಓದಿ : ತಮ್ಮ ಮನಸ್ಸಿಗೆ ಬೇಕಾದಂತೆ ನಡೆದುಕೊಳ್ಳುತ್ತಾರಂತೆ ಈ ಮೂರು ರಾಶಿಯವರು..!

ಚಂದ್ರ ಗ್ರಹಣವು (Lunar eclipse) ಈ ರಾಶಿಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ.  ವರ್ಷದ ಕೊನೆಯ ಚಂದ್ರಗ್ರಹಣವು ವೃಷಭ ರಾಶಿ ಮತ್ತು ಕೃತಿಕಾ ನಕ್ಷತ್ರಗಲ್ಲಿ ನಡೆಯಲಿದೆ. ಈ ರಾಶಿ ಮತ್ತು ನಕ್ಷತ್ರದಲ್ಲಿ ಜನಿಸಿದ ಜನರು ಈ ದಿನದಂದು ಜಾಗರೂಕರಾಗಿರಬೇಕು. ವೃಷಭ ರಾಶಿಯವರು (Zodiac sign) ಈ ಅವಧಿಯಲ್ಲಿ ಯಾವುದೇ ಚರ್ಚೆಗೆ ಒಳಗಾಗುವುದನ್ನು ತಪ್ಪಿಸಬೇಕು. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಈ ಸಮಯದಲ್ಲಿ, ವೃಷಭ ರಾಶಿಯ ಜನರು ಪ್ರಯಾಣಿಸುವುದನ್ನು ತಪ್ಪಿಸಬೇಕು. 

ವರ್ಷದ ಕೊನೆಯ ಚಂದ್ರಗ್ರಹಣದ ಸಮಯ  : (Chandra Grahan Time 2021)

ಉಪಛಾಯೆಯ  ಮೊದಲ ಸ್ಪರ್ಶ - 02:18 PM 
ಪ್ರಛಾಯೆಯ ಮೊದಲ ಸ್ಪರ್ಶ - 03:15 PM 
ಖಗ್ರಾಸ ಆರಂಭ - 04:43 PM
ಪರಮಗ್ರಾಸ ಚಂದ್ರಗ್ರಹಣ - 04:48 PM 
ಖಗ್ರಾಸ ಅಂತ್ಯ - 04:54 PM
ಪ್ರಛಾಯೆಯ ಕೊನೆಯ ಸ್ಪರ್ಶ - 06 :21  PM  
ಉಪಛಾಯೆಯ ಕೊನೆಯ ಸ್ಪರ್ಶ  -  07:19 PM
ಖಗ್ರಾಸ ಅವಧಿ - 00 ಗಂಟೆ 11 ನಿಮಿಷ 16 ಸೆಕೆಂಡುಗಳು
ಖಂಡಗ್ರಾಸ ಅವಧಿ - 03 ಗಂಟೆ 06 ನಿಮಿಷ 22 ಸೆಕೆಂಡುಗಳು ಪೆನಂಬ್ರಾ ಅವಧಿ
ಉಪಛಾಯೆಯ ಅವಧಿ - 05 ಗಂಟೆ 00 ನಿಮಿಷ 39 ಸೆಕೆಂಡುಗಳ
ಚಂದ್ರಗ್ರಹಣದ ಪರಿಣಾಮ - 1.01 
ಉಪಛಾಯೆಚಂದ್ರ ಗ್ರಹಣದ ಪರಿಣಾಮ  - 1.95

ಇದನ್ನೂ ಓದಿ : Navratri Navami 2021 Puja Muhurat : ಇಂದು ಮಹಾನವಮಿ : ಪೂಜೆ-ಹವನ ಮಾಡುವ ವಿಧಿ-ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News