Vastu Tips: ಮನೆಯಲ್ಲಿ ಬೀಳುವ ಈ ರೀತಿಯ ನೆರಳು ಬದುಕನ್ನೇ ಹಾಳು ಮಾಡುತ್ತದೆ..!

ಮನೆಯ ಮುಂದೆ ಬೃಹತ್ ಮರ, ಗೋಡೆ, ಹಳ್ಳ, ಬಾವಿ ಇರಬಾರದು. ದೇವಸ್ಥಾನದಂತೆಯೇ ಮನೆಯಲ್ಲೂ ಮರದ ನೆರಳು ಬೀಳುವುದು ಅಶುಭ.

Written by - Puttaraj K Alur | Last Updated : Feb 7, 2022, 02:24 PM IST
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲ ವಸ್ತುಗಳ ನೆರಳು ಬೀಳುವುದು ತುಂಬಾ ಅಶುಭಕಾರಿಯಾಗಿದೆ
  • ಮನೆ ಹೊರಗೆ ವಾಸ್ತು ದೋಷವಿದ್ದರೆ ಅದು ನೇರವಾಗಿ ಮನೆ ಸದಸ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ
  • ಮನೆಯ ಮುಖ್ಯದ್ವಾರದ ಮುಂದೆ ಸೂರ್ಯ, ಬ್ರಹ್ಮ, ವಿಷ್ಣು ಅಥವಾ ಶಿವನ ದೇವಾಲಯ ಇರಬಾರದು
Vastu Tips: ಮನೆಯಲ್ಲಿ ಬೀಳುವ ಈ ರೀತಿಯ ನೆರಳು ಬದುಕನ್ನೇ ಹಾಳು ಮಾಡುತ್ತದೆ..! title=
ಮನೆಯ ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳಬೇಕು

ನವದೆಹಲಿ: ವಾಸ್ತು ಶಾಸ್ತ್ರದಲ್ಲಿ ಮನೆಯ ಒಳಗಿನಿಂದ ಹೊರಗಿರುವ ಕೆಲವು ಪ್ರಮುಖ ಸನ್ನಿವೇಶಗಳ ಬಗ್ಗೆಯೂ ಹೇಳಲಾಗಿದೆ. ಮನೆಯ ಹೊರಗೆ ವಾಸ್ತು ದೋಷ(Vastu Tips)ಗಳಿದ್ದರೆ ಅದು ನೇರವಾಗಿ ಮನೆಯಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳ ನೆರಳು ಬೀಳುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಮನೆಯ ಮೇಲೆ ಬೀಳುವ ಈ ನೆರಳು(Home Vastu) ಜನರ ಉತ್ತಮ ಜೀವನವನ್ನೇ ನಾಶಮಾಡುತ್ತದಂತೆ. ಆದ್ದರಿಂದ ಇದರ ಬಗ್ಗೆ ಎಂದಿಗೂ ನಿರ್ಲಕ್ಷ್ಯವಹಿಸಬಾರದು.

ಇದನ್ನೂ ಓದಿ: ಈ 5 ರಾಶಿಯವರಿಗೆ ವರದಾನವಾಗಿ ಪರಿಣಮಿಸಲಿದೆ ತ್ರಿಗ್ರಾಹಿ ಯೋಗ

ಈ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಿ 

  • ದೇವಾಲಯಗಳು ನಮಗೆ ಸಕಾರಾತ್ಮಕತೆ(Home Temple Vastu)ಯನ್ನು ನೀಡುತ್ತವೆ, ಆದರೆ ದೇವಾಲಯದ ಬಳಿ ಮನೆಯನ್ನು ಹೊಂದಿರುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದ ಹತ್ತಿರ ಯಾವುದೇ ಮನೆಯನ್ನು ತೆಗೆದುಕೊಳ್ಳಬಾರದು. ಮನೆಯಲ್ಲಿ ದೇವಸ್ಥಾನದ ನೆರಳು ಇರುವುದು ಒಳ್ಳೆಯದಲ್ಲ. ಇದರಿಂದ ಮನೆಯವರು ಪ್ರಗತಿ ಕಾಣುವುದಿಲ್ಲವೆಂದು ಹೇಳಲಾಗಿದೆ.  
  • ಮನೆ ಮುಂದೆ ಮನೆಯ 2 ಪಟ್ಟು ಎತ್ತರದವರೆಗೆ ದೇವಸ್ಥಾನ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.
  • ವಿಶೇಷವಾಗಿ ಮನೆಯ ಮುಖ್ಯದ್ವಾರದ ಮುಂದೆ ಸೂರ್ಯ, ಬ್ರಹ್ಮ, ವಿಷ್ಣು ಅಥವಾ ಶಿವನ ದೇವಾಲಯ(Temple In Front Of Home) ಇರಬಾರದು.
  • ಮನೆಯ ಪೂರ್ವ, ಉತ್ತರ ಮತ್ತು ಉತ್ತರ ದಿಕ್ಕಿನಲ್ಲಿ ದೊಡ್ಡ ಕಲ್ಲು, ದೊಡ್ಡ ಬಂಡೆ ಅಥವಾ ಕಂಬ ಕೂಡ ಇರಬಾರದು. ಇದು ಜೀವನದ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ.  
  • ಮನೆಯ ಮುಂದೆ ಬೃಹತ್ ಮರ, ಗೋಡೆ, ಹಳ್ಳ, ಬಾವಿ ಇರಬಾರದು. ದೇವಸ್ಥಾನದಂತೆಯೇ ಮನೆಯಲ್ಲೂ ಮರದ ನೆರಳು(Bad Shadow For Home) ಬೀಳುವುದು ಅಶುಭ.
  • ಮನೆಯ ಮುಂದೆ ಎಂದಿಗೂ ಕೆಸರು ಇರಬಾರದು. ಮನೆಯ ಮುಂದೆ ಅಥವಾ ಸುತ್ತಮುತ್ತ ಇಂತಹ ಅಡೆತಡೆಗಳು ಇದ್ದರೆ ಜೀವನದಲ್ಲಿ ವಿನಾಶ ಉಂಟಾಗುತ್ತದೆ. ಹೀಗಾಗಿ ಈ ವಿಚಾರಗಳ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ.

ಇದನ್ನೂ ಓದಿ: ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಉಂಗುರ, ಧರಿಸಿದರೆ ಸಾಕು ಮಾಯವಾಗುತ್ತದೆಯಂತೆ ಕಷ್ಟ ಕಾರ್ಪಣ್ಯ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News