ಹಲ್ಲಿನ ಈ ಸಮಸ್ಯೆಯನ್ನು ಎಂದಿಗೂ ಕಡೆಗಣಿಸಬೇಡಿ, ಎದುರಾಗಬಹುದು ಬಹುದೊಡ್ಡ ತೊಂದರೆ

ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ತೊಂದರೆ ಉಂಟುಮಾಡಬಹುದು. ಈಗ ಪ್ರಮುಖ ಹಲ್ಲಿನ ಸಮಸ್ಯೆಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ. 

Written by - Ranjitha R K | Last Updated : Sep 28, 2021, 07:39 PM IST
  • ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ತೊಂದರೆ ಖಂಡಿತಾ
  • ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಕ್ಯಾವಿಟಿ ಆಗಬಹುದು.
  • ಕ್ಯಾವಿಟಿ ಹಲ್ಲುನೋವು ಮತ್ತು ಕೊಳೆತಕ್ಕೆ ಕಾರಣವಾಗುತ್ತದೆ.
ಹಲ್ಲಿನ ಈ ಸಮಸ್ಯೆಯನ್ನು ಎಂದಿಗೂ ಕಡೆಗಣಿಸಬೇಡಿ, ಎದುರಾಗಬಹುದು ಬಹುದೊಡ್ಡ ತೊಂದರೆ

ನವದೆಹಲಿ : ಮುಖದ ಮೇಲೆ ನಗುವಿದ್ದರೆ ನೋಡಲು ಚೆಂದ. ಸುಂದರವಾದ ನಗು ಬೇಕಾದರೆ ಸ್ವಚ್ಛ ಮತ್ತು ಆರೋಗ್ಯಕರ ಹಲ್ಲುಗಳಿರಬೇಕು. ಆದರೆ, ನಾವು ನಮ್ಮ ಹಲ್ಲುಗಳಿಗೆ ನೀಡಬೇಕಾಗಿರುವಷ್ಟು ಕಾಳಜಿ ನೀಡುವುದಿಲ್ಲ. ಬೆಳಿಗ್ಗೆ ಒಮ್ಮೆ ಹಲ್ಲುಜ್ಜಿದ ಮಾತ್ರಕ್ಕೆ ನಮ್ಮ ಹಲ್ಲುಗಳನ್ನು ಆರೋಗ್ಯವಾಗಿರಿಸುತ್ತದೆ (Dental Health) ಎಂದು ಭಾವಿಸುತ್ತೇವೆ. ಆದರೆ, ಇದು ಸಾಕಾಗುವುದಿಲ್ಲ. ಇದರೊಂದಿಗೆ, ವಿಶೇಷ ಗಮನ ಹರಿಸುವ ಅಗತ್ಯವಿದೆ. ಇದು ಪ್ರಮುಖ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ತೊಂದರೆ ಉಂಟುಮಾಡಬಹುದು. ಈಗ ಪ್ರಮುಖ ಹಲ್ಲಿನ ಸಮಸ್ಯೆಗಳು (Dental Problem) ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ. 

ಇದನ್ನೂ ಓದಿ : ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ Vitamin C ತೆಗೆದುಕೊಳ್ಳಬೇಡಿ: ಏಕೆಂದು ತಿಳಿಯಿರಿ…

ಮೊದಲ ಸಮಸ್ಯೆ :
ಹಲ್ಲುಗಳನ್ನು ಸ್ವಚ್ಛಗೊಳಿಸುವಾಗ ಒಸಡುಗಳನ್ನು ಸ್ವಚ್ಛಗೊಳಿಸುವತ್ತ ಗಮನ ಹರಿಸದಿದ್ದರೆ, ಕೊಳಕು ಅಲ್ಲಿ ಉಳಿಯಬಹುದು. ಇದರಿಂದಾಗಿ ಒಸಡುಗಳು ಅನಾರೋಗ್ಯಕರ ಮತ್ತು ದುರ್ಬಲವಾಗುತ್ತವೆ. ಈ ಕಾರಣದಿಂದಾಗಿ, ಒಸಡುಗಳಲ್ಲಿ ಊತದ ಸಮಸ್ಯೆ ಉಂಟಾಗಬಹುದು ಮತ್ತು ರಕ್ತ ಕೂಡ ಬರಬಹುದು.

ಎರಡನೆಯ ಸಮಸ್ಯೆ :
ನೀವು ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಕ್ಯಾವಿಟಿ (Cavity) ಆಗಬಹುದು. ಕ್ಯಾವಿಟಿ ಎಂದರೆ ನಿಮ್ಮ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಕೊಳಕು ಸಂಗ್ರಹವಾಗಲು ಆರಂಭವಾಗುತ್ತದೆ. ಇದು ಹಲ್ಲುನೋವು ಮತ್ತು ಕೊಳೆತಕ್ಕೆ ಕಾರಣವಾಗುತ್ತದೆ.

ಮೂರನೆಯ ಸಮಸ್ಯೆ ಎಂದರೆ :
ತಣ್ಣಗೆ ಅಥವಾ ಬಿಸಿಯಾಗಿ ಏನನ್ನಾದರೂ ತಿಂದ ನಂತರ ಹಲ್ಲುಗಳಲ್ಲಿ (sensitive teeth) ಜುಮ್ಮೆನ್ನುವುದು. ಸರಿಯಾಗಿ ಜಗಿಯದಿರುವುದು ಅಥವಾ ಹಲ್ಲುಜ್ಜದಿರುವುದು ಇದಕ್ಕೆ ಕಾರಣ.

ಇದನ್ನೂ ಓದಿ : Cooking Oil: ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಶುದ್ಧತೆಯನ್ನು ಗುರುತಿಸುವುದು ಹೇಗೆ?

ಹಲ್ಲಿನ ಸಮಸ್ಯೆಗಳನ್ನು ತಪ್ಪಿಸಲು ಇರುವ ವಿಶೇಷ ಸಲಹೆಗಳು :
-ಅತಿಯಾದ ಪ್ರಮಾಣದಲ್ಲಿ ಸಿಹಿ ಮತ್ತು ಸಕ್ಕರೆ ಪದಾರ್ಥಗಳನ್ನು ಸೇವಿಸಬೇಡಿ.
-ಸಾಕಷ್ಟು ಪ್ರಮಾಣದಲ್ಲಿ ನೀರು (Water) ಕುಡಿಯಿರಿ.
-ತಾಜಾ ಹಣ್ಣುಗಳನ್ನು (Fruits) ಸೇವಿಸಿ.
-ಆಹಾರವನ್ನು ಚೆನ್ನಾಗಿ ಅಗಿಯಿರಿ.
-ಆಹಾರ ತಿಂದ ನಂತರ ನೀರಿನಿಂದ ಬಾಯಿ ತೊಳೆಯುವುದನ್ನು ಖಚಿತಪಡಿಸಿಕೊಳ್ಳಿ.
-ಹಲ್ಲುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬ್ರಶ್ ಬಳಸಿ ಮತ್ತು ಹೆಚ್ಚು ಗಟ್ಟಿಯಾಗಿ ಉಜ್ಜಬೇಡಿ.
-ನಾಲಿಗೆಯನ್ನು ಸ್ವಚ್ಛಗೊಳಿಸಲು ಟಂಗ್ ಕ್ಲೀನರ್ ಬಳಸಿ.
-ರಾತ್ರಿ ಹಲ್ಲುಗಳನ್ನು ಸ್ವಚ್ಛಗೊಳಿಸಿ ಮಲಗಿಕೊಳ್ಳಿ.
-ಹಲ್ಲುಗಳಿಗೆ ಏನಾದರೂ ಸಮಸ್ಯೆ ಇದ್ದರೆ, ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News