ಈ ಒಂದು ವೃತ ಹಣಕಾಸಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತದೆ, ಜೀವನಪೂರ್ತಿ ಉಳಿಯಲಿದೆ ಲಕ್ಷ್ಮೀ ಕೃಪೆ

ಮಹಾಲಕ್ಷ್ಮೀ ಉಪವಾಸವನ್ನು ಧಾರ್ಮಿಕ ಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಹೇಳಲಾಗಿದೆ. ಗಜ ಲಕ್ಷ್ಮಿಯ ಉಪವಾಸದ ಪೂಜೆ ಮಾಡಿದರೆ, ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆಯಾಗುವುದಿಲ್ಲ ಎನ್ನುವುದು ನಂಬಿಕೆ.

Written by - Ranjitha R K | Last Updated : Sep 28, 2021, 04:32 PM IST
  • ಮಹಾಲಕ್ಷ್ಮೀಯ ಈ ಉಪವಾಸವನ್ನೊಮ್ಮೆ ಮಾಡಿ ನೋಡಿ
  • ಆನೆಯ ಮೇಲೆ ಕಮಲದ ಆಸನದ ಮೇಲೆ ಕುಳಿತಿರುವ ಮಹಾಲಕ್ಷ್ಮೀಯನ್ನು ಪೂಜಿಸಿ
  • ಅಪಾರ ಸಂಪತ್ತನ್ನು ದೇವಿ ಕರುಣಿಸುತ್ತಾಳೆ
ಈ ಒಂದು ವೃತ ಹಣಕಾಸಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತದೆ, ಜೀವನಪೂರ್ತಿ ಉಳಿಯಲಿದೆ ಲಕ್ಷ್ಮೀ ಕೃಪೆ

ನವದೆಹಲಿ : ಸಂಪತ್ತಿನ ದೇವತೆ ಲಕ್ಷ್ಮೀಯನ್ನು (Godess Lakshmi) ಒಲಿಸಿಕೊಂಡರೆ ಜೀವನದ ಕಷ್ಟಗಳೆಲ್ಲಾ ದೂರವಾಗಿ ಬಿಡುತ್ತವೆ. ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕಾದರೆ ಈ ವೃತವನ್ನು ಆಚರಿಸಬೇಕು. ಈ ಉಪವಾಸವು ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಆರಂಭವಾಗುತ್ತದೆ. 16 ದಿನಗಳ ನಂತರ ಅಶ್ವಿನ್ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು  ಕೊನೆಗೊಳ್ಳುತ್ತದೆ. ಈ ದಿನ, ಆನೆಯ ಮೇಲೆ ಕಮಲದ ಆಸನದ ಮೇಲೆ ಕುಳಿತಿರುವ ಗಜಲಕ್ಷ್ಮೀಯನ್ನು (Gaja Lakshmi pooja) ಪೂಜಿಸುವುದರಿಂದ ಜೀವನದಲ್ಲಿ ಅಪಾರ ಸಂಪತ್ತು ಮತ್ತು ವೈಭವ ಸಿಗುತ್ತದೆ. ಈ ಉಪವಾಸವನ್ನು ಗಜ ಲಕ್ಷ್ಮೀ ವೃತ (Gaja Lakshmi vruta) ಎಂದೂ ಕರೆಯುತ್ತಾರೆ. 

ಅತ್ಯಂತ ಪರಿಣಾಮಕಾರಿ ಈ ಉಪವಾಸ :
ಮಹಾಲಕ್ಷ್ಮೀ ಉಪವಾಸವನ್ನು (Mahalakshmi upavasa) ಧಾರ್ಮಿಕ ಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಹೇಳಲಾಗಿದೆ.  ಪಾಂಡವರು ಜೂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡಾಗ, ಶ್ರೀಕೃಷ್ಣನು ಯುಧಿಷ್ಠಿರನಿಗೆ ಈ ಉಪವಾಸವನ್ನು ಆಚರಿಸುವಂತೆ ಸಲಹೆ ನೀಡುತ್ತಾನೆ.   ಪಾಂಡವರು ತಾವು ಕಳೆದುಕೊಂಡ ರಾಜಮನೆತನ, ಸಂಪತ್ತನ್ನು ಮರಳಿ ಪಡೆಯುವಂತಾಗಲು ಈ ವೃತವನ್ನು ಆಚರಿಸುವಂತೆ ಸೂಚಿಸಲಾಗುತ್ತದೆ. ಗಜ ಲಕ್ಷ್ಮಿಯ ಉಪವಾಸದ ಪೂಜೆ (Lakshmi pooja) ಮಾಡಿದರೆ, ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆಯಾಗುವುದಿಲ್ಲ ಎನ್ನುವುದು ನಂಬಿಕೆ. ಗಜ ಲಕ್ಷ್ಮೀ ದೇವಿಯು ಭಕ್ತರ ಸರ್ವ ಆಸೆಯನ್ನೂ ಪೂರೈಸುತ್ತಾಳೆ. 

ಇದನ್ನೂ ಓದಿ : ಮನುಷ್ಯನಲ್ಲಿ ಈ ಗುಣವೊಂದಿದ್ದರೆ ಸಾಕು ಬದುಕಿನ ಭಾಗ್ಯವೇ ತೆರೆಯುತ್ತದೆಯಂತೆ..!

ಈ ಪರಿಹಾರವನ್ನು ಮಾಡಿ  :
ಈ ದಿನ ಕೆಲವು ಪರಿಹಾರಗಳನ್ನು ಮಾಡುವುದರಿಂದ, ಗಜ ಲಕ್ಷ್ಮೀ  ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರವಾಗಬಹುದು.  ಇದಕ್ಕಾಗಿ  ಪಿತೃ ಪಕ್ಷದ (Pitru Paksha) ಅಷ್ಟಮಿ ದಿನದಂದು, ಯಾವುದೇ ಬ್ರಾಹ್ಮಣ ಅಥವಾ ವಿವಾಹಿತ ಮಹಿಳೆಗೆ ಚಿನ್ನ, ಕಲಶ, ಸುಗಂಧ ದ್ರವ್ಯ, ಹಿಟ್ಟು, ಸಕ್ಕರೆ ಮತ್ತು ತುಪ್ಪವನ್ನು (Ghee) ದಾನವಾಗಿ ನೀಡಿ. ಅಲ್ಲದೆ, ಕನ್ಯೆಗೆ ತೆಂಗಿನಕಾಯಿ (Coconut), ಕಲ್ಲು ಸಕ್ಕರೆ, ಮತ್ತು ಬೆಳ್ಳಿ ಆನೆಯನ್ನು ನೀಡಿ. ಈ ಎಲ್ಲಾ ವಸ್ತುಗಳನ್ನು ನಿಮ್ಮ ಮಗಳಿಗೂ ನೀಡಬಹುದು.  ಇದನ್ನು ಮಾಡುವುದರಿಂದ, ಮಹಾಲಕ್ಷ್ಮೀ  ದೇವಿಯು ಸಂತಸಗೊಂಡು ಅಪಾರ ಸಂಪತ್ತನ್ನು ಕರುಣಿಸುತ್ತಾಳೆಯಂತೆ.   

ಇದನ್ನೂ ಓದಿ:  ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಅಮವಾಸ್ಯೆಯಂದು ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News