Relationship Tips: ಏಕಕಾಲಕ್ಕೆ ಇಬ್ಬರ ಜೊತೆಗೆ ಡೇಟಿಂಗ್, ಇಲ್ಲಿವೆ ಅದರ ಹಾನಿಗಳು

Double Dating: ಡಬಲ್ ಡೇಟಿಂಗ್ ' ಕೇಳಲು ತುಂಬಾ ಹಿತಕರವಾಗಿದೆ ಆದರೆ, ವಾಸ್ತವದಲ್ಲಿ ಅಷ್ಟೇ ಅಪಾಯಕಾರಿಯಾಗಿದೆ. ನಾವು ಇಂದಿನ ಲೇಖನದಲ್ಲಿ ನಿಮಗೆ ಡಬಲ್ ಡೇಟಿಂಗ್ ನಿಂದ ಆಗುವ ಹಾನಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.  

Written by - Nitin Tabib | Last Updated : Sep 6, 2022, 03:53 PM IST
  • ಡಬಲ್ ಡೇಟಿಂಗ್ ಎಂಬ ಪದ ಕೇಳಲು ತುಂಬಾ ಹಿತಕರವಾಗಿದೆ.
  • ಆದರೆ, ವಾಸ್ತವದಲ್ಲಿ ಅದು ಹಾಗಿಲ್ಲ.
  • ನೀವು ಅದನ್ನು ಪ್ರೀತಿ ಎಂದು ಕರೆಯಬಹುದು ಆದರೆ ಇದು ಆಟದಂತೆಯೇ ಇರುತ್ತದೆ.
Relationship Tips: ಏಕಕಾಲಕ್ಕೆ ಇಬ್ಬರ ಜೊತೆಗೆ ಡೇಟಿಂಗ್, ಇಲ್ಲಿವೆ ಅದರ ಹಾನಿಗಳು title=
Double Dating

Double Dating Disadvantages: ಡಬಲ್ ಡೇಟಿಂಗ್ ಎಂಬ ಪದ ಕೇಳಲು ತುಂಬಾ ಹಿತಕರವಾಗಿದೆ. ಆದರೆ, ವಾಸ್ತವದಲ್ಲಿ ಅದು ಹಾಗಿಲ್ಲ. ನೀವು ಅದನ್ನು ಪ್ರೀತಿ ಎಂದು ಕರೆಯಬಹುದು ಆದರೆ ಇದು ಆಟದಂತೆಯೇ ಇರುತ್ತದೆ. ಹೌದು, ಡಬಲ್ ಡೇಟಿಂಗ್‌ನಲ್ಲಿ, ಜನರು ಒಂದೇ ಸಮಯದಲ್ಲಿ ಇಬ್ಬರು ವಿಭಿನ್ನ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡುತ್ತಾರೆ, ಆದರೆ ಇಂತಹ ವಿಷಯಗಳು ನಿಮ್ಮ ಸಂಬಂಧವನ್ನು ಹಾಳುಮಾಡುವುದು ಮಾತ್ರವಲ್ಲದೆ ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ರೀತಿಯ ಸಂಬಂಧ  ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಲ್ಲದೆ, ಇದರಿಂದ ನಿಮ್ಮ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ನಿಮಗೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ,  ಡಬಲ್ ಡೇಟಿಂಗ್ ನಿಂದ ಯಾವ ಯಾವ ಅನಾಹುತಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಡಬಲ್ ಡೇಟಿಂಗ್‌ನ ಹಾನಿಗಳು
ಡಬಲ್ ಡೇಟಿಂಗ್‌ನಲ್ಲಿ ಭಾವನಾತ್ಮಕದ ನಾಟಕ

ಡಬಲ್ ಡೇಟಿಂಗ್‌ನಲ್ಲಿ ನಾಟಕ ಮತ್ತು ನಂಬಿಕೆಯ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ಡಬಲ್ ಡೇಟಿಂಗ್‌ನಲ್ಲಿ, ನಿಮ್ಮ ಇಬ್ಬರೂ ಪಾರ್ಟ್ನರ್ ಗಳಿಗೆ ನಿಮ್ಮ ಈ ವಿಷಯದ ಬಗ್ಗೆ ಗೊತ್ತಾದರೆ, ಅದರ ಫಲಿತಾಂಶವು ತುಂಬಾ ಅಪಾಯಕಾರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ಸಂಗತಿಗಳನ್ನು ಎದುರಿಸಬೇಕಾಗುತ್ತದೆ. ಆಗ ನೀವು ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಹೀಗಾಗಿ, ನೀವು ಸಹ ಡಬಲ್ ಡೇಟಿಂಗ್ ಮಾಡುತ್ತಿದ್ದರೆ, ತುಂಬಾ ಎಚ್ಚರಿಕೆವಹಿಸಿ.

ಯಾವಾಗಲು ಗೊಂದಲದ ಸ್ಥಿತಿ ಇರುತ್ತದೆ
ಡಬಲ್ ಡೇಟಿಂಗ್ ಮಾಡುವ ಜನರು ಯಾವಾಗಲೂ ಗೊಂದಲಕ್ಕೊಳಗಾಗುತ್ತಾರೆ. ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ಅರ್ಥವಾಗುವುದಿಲ್ಲ. ಮತ್ತೊಂದೆಡೆ, ಡಬಲ್ ಡೇಟಿಂಗ್‌ ನಲ್ಲಿ ನೀವು ಅಂತ್ಯದಲ್ಲಿ  ಸಿಲುಕಿಕೊಳ್ಳಬಹುದು, ಹೌದು, ಡಬಲ್ ಡೇಟಿಂಗ್ ತುಂಬಾ ಕೆಟ್ಟದಾಗಿ ಕೊನೆಗೊಳ್ಳುತ್ತದೆ. ಆದ್ದರಿಂದ ಯಾವಾಗಲೂ ಅದರಿಂದ ದೂರವಿರಿ.

ಇದನ್ನೂ ಓದಿ-Relationship Tips: ಸಂಬಂಧ ಬೆಳೆಸುವ ಮೊದಲು ಜೋಡಿ ಆರೋಗ್ಯಕ್ಕೆ ಸಂಬಂಧಿಸಿ ಈ ಪರೀಕ್ಷೆ ನಡೆಸಲೇಬೇಕು

ನೀವು ನಿಮ್ಮ ಮೇಲೆ ನಂಬಿಕೆ ಇಟ್ಟ ಇಬ್ಬರನ್ನು ಕೂಡ ದುಃಖಕ್ಕೆ ತಳ್ಳುವಿರಿ
ಡಬಲ್ ಡೇಟಿಂಗ್ ಮಾಡುವಾಗ ನಿಮಗೆ ಹಿತಕರ ಎನಿಸಬಹುದು. ಆದರೆ ಮುಂದೊಂದು ದಿನ ನೀವು ಸಿಕ್ಕಿಹಾಕಿಕೊಳ್ಳುವುದು ನಿಜ. ಹೌದು, ಡಬಲ್ ಡೇಟಿಂಗ್‌ನಲ್ಲಿ ನಿಮ್ಮ ವಂಚನೆ ಯಾವಾಗ ಬೇಕಾದರೂ ಮುನ್ನೆಲೆಗೆ ಬರಬಹುದು, ಇಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ತುಂಬಾ ಪ್ರೀತಿಸುವ ಇಬ್ಬರು ವ್ಯಕ್ತಿಗಳನ್ನು ನೀವು ದುಃಖಕ್ಕೆ ತಳ್ಳುವಿರಿ ಎಂಬುದು ಮಾತ್ರ ನಿಜ.

ಇದನ್ನೂ ಓದಿ-ನಿಮ್ಮ ರಾಶಿಯ ಆಧಾರದ ಮೇಲೆ ನೀವು ಯಾವ ರಾಶಿಯವರನ್ನು ಮದುವೆಯಾಗಬೇಕು?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News