White Hair Remedy : ಈ ಮನೆಮದ್ದು ಬಳಸಿ ಕೇವಲ 5 ದಿನದಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ!

Home Remedy for White Hair : ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕೂದಲು ಸ್ಟ್ರಾಂಗ್ ಮಾಡುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಈ ಸಲಹೆಗಳನ್ನು ಅನುಸರಿಸಿ.    

Written by - Chetana Devarmani | Last Updated : Apr 2, 2023, 07:56 AM IST
  • ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ?
  • ಕಪ್ಪು ಕೂದಲಿಗೆ ಈ ಮನೆಮದ್ದು ಬಳಸಿ
  • ಕೆಲವೇ ದಿನದಲ್ಲಿ ಉತ್ತಮ ಫಲಿತಾಂಶ ಗೋಚರಿಸುತ್ತೆ
White Hair Remedy : ಈ ಮನೆಮದ್ದು ಬಳಸಿ ಕೇವಲ 5 ದಿನದಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ!  title=
White Hair Remedy

Home Remedy for White Hair : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ರಾಸಾಯನಿಕ ಕೂದಲು ಆರೈಕೆ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇವುಗಳ ಬಳಕೆಯ ಫಲಿತಾಂಶಗಳ ಹೊರತಾಗಿಯೂ, ಭವಿಷ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳ ಸಾಧ್ಯತೆಗಳಿವೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮನೆಮದ್ದುಗಳನ್ನು ಬಳಸಲೇಬೇಕು.

ಮೆಲನಿನ್ ವಾಸ್ತವವಾಗಿ ಒಂದು ರೀತಿಯ ವರ್ಣದ್ರವ್ಯವಾಗಿದೆ.. ಇದು ನಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಹಲವಾರು ಸಲಹೆಗಳನ್ನು ಅನುಸರಿಸಬೇಕು. ಅದರಲ್ಲೂ ಆರೋಗ್ಯಕರ ಆಹಾರ ಸೇವನೆಯಿಂದ ಕೂದಲಿನಲ್ಲಿ ಬದಲಾವಣೆ ಕಾಣಬಹುದು ಎನ್ನುತ್ತಾರೆ ತಜ್ಞರು. ಆದರೆ ಯಾವ ಮನೆಮದ್ದುಗಳು ಬಿಳಿ ಕೂದಲನ್ನು ಕಪ್ಪಾಗಿಸಬಹುದು ಎಂಬುದನ್ನು ತಿಳಿಯೋಣ.

ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತವೆ ಈ ಹಸಿರು ಎಲೆಗಳು

ಕಪ್ಪು ಕೂದಲಿಗೆ ಮನೆಮದ್ದು:

ಮೆಂತ್ಯ ಬೀಜ : ಒಂದು ಪಾತ್ರೆಯಲ್ಲಿ ತೆಂಗಿನಕಾಯಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಕುದಿಸಿ. ಅದಕ್ಕೆ ಒಂದು ಚಮಚ ಮೆಂತ್ಯ ಪುಡಿ ಹಾಕಿ. ಈಗ ಹೇರ್ ಆಯಿಲ್ ಸಿದ್ಧವಾದಂತೆ. ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿಕೊಳ್ಳಿ.

ಕರಿಬೇವಿನ ಎಣ್ಣೆ : ಒಂದು ಪಾತ್ರೆಯಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಅದರಲ್ಲಿ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕುದಿಸಿ. ಹೀಗೆ ಕುದ್ದ ನಂತರ ತಣ್ಣಗಾಗಲು ಬಿಡಿ. ಈ ಕರಿಬೇವಿನ ಎಣ್ಣೆಯನ್ನು ಕೂದಲಿಗೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ ಮತ್ತು ತೊಳೆಯಿರಿ.

ಇದನ್ನೂ ಓದಿ : ಮನೆಯಲ್ಲಿಯೇ ಸುಂದರವಾದ ಕೂದಲನ್ನು ಪಡೆಯಲು ಇಲ್ಲಿವೆ 6 ಸಿಂಪಲ್‌ ಮಾರ್ಗಗಳು

ನಿಂಬೆ ರಸ, ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಮಸಾಜ್ ಮಾಡಿದ 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಇದು ಕೂಡ ನಿಮ್ಮ ಕೂದಲನ್ನು ಕಪ್ಪಗಾಗಿಸಲು ಸಹಾಯ ಮಾಡುತ್ತದೆ. 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಪರಿಶೀಲಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News