Vastu for Success : ಮನೆಯಲ್ಲಿ ನೀವು ಇಟ್ಟುಕೊಳ್ಳುವ ಈ ವಸ್ತುಗಳೇ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು ! ಇಂದೇ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ

Vastu for Success : ವಾಸ್ತು ದೋಷಕ್ಕೆ ಕಾರಣವಾಗುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು.    

Written by - Ranjitha R K | Last Updated : Feb 3, 2024, 06:28 PM IST
  • ನಾವು ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ
  • ಆದರೆ ನಮ್ಮ ಪರಿಶ್ರಮದ ಫಲ ನಮಗೆ ಸಿಗುವುದಿಲ್ಲ
  • ವಾಸ್ತು ದೋಷವೇ ಇದಕ್ಕೆ ಕಾರಣವಾಗಿರಬಹುದು
Vastu for Success : ಮನೆಯಲ್ಲಿ ನೀವು ಇಟ್ಟುಕೊಳ್ಳುವ ಈ ವಸ್ತುಗಳೇ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು ! ಇಂದೇ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ title=

Vastu for Success : ನಾವು ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಆದರೆ ನಮ್ಮ ಪರಿಶ್ರಮದ ಫಲ ನಮಗೆ ಸಿಗುವುದಿಲ್ಲ.ವಾಸ್ತು ದೋಷಗಳನ್ನು ಉಂಟುಮಾಡುವ ಕೆಲವು ವಸ್ತುಗಳು ನಮ್ಮ ಮನೆಯಲ್ಲಿ ಇರುವುದರಿಂದಲೇ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಅದು ನಮ್ಮ ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಆದ್ದರಿಂದ, ವಾಸ್ತು ದೋಷಕ್ಕೆ ಕಾರಣವಾಗುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು.  

ಈ ವಸ್ತುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ : 
ಒಡೆದ ವಸ್ತುಗಳು, ಪಾತ್ರೆಗಳು, ಪೀಠೋಪಕರಣಗಳು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ. ಇಂಥಹ ವಸ್ತುಗಳನ್ನು ತಕ್ಷಣ ಮನೆಯಿಂದ ಹೊರಹಾಕಬೇಕು. ಒಣಗಿದ ಹೂವುಗಳು ನಕಾರಾತ್ಮಕತೆಯ ಸಂಕೇತವಾಗಿರುತ್ತದೆ. ಅವುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕಬೇಕು. ಯಾವಾಗಲೂ ತಾಜಾ ಹೂವುಗಳು ಮತ್ತು ಸಸ್ಯಗಳಿಂದ ಮನೆಯನ್ನು ಅಲಂಕರಿಸಬೇಕು. ಮನೆಯಲ್ಲಿ ಕಸ ಸಂಗ್ರಹವಾಗಲು ಬಿಡಬೇಡಿ. ಪ್ರತಿದಿನ ಮನೆಯೊಳಗಿನಿಂದ ಕಸವನ್ನು ಹೊರ ತೆಗೆಯಿರಿ. ಮನೆಯಲ್ಲಿ ಕಪ್ಪು ಬಣ್ಣದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ. ಈ ಬಣ್ಣವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. 

ಇದನ್ನೂ ಓದಿ : Mangalsutra: ಮಂಗಳಸೂತ್ರದಲ್ಲಿ ಕಪ್ಪು ಮಣಿಗಳನ್ನೇ ಬಳಸುವುದೇಕೆ? ಇದರ ಹಿನ್ನೆಲೆ-ಮಹತ್ವ ಏನೆಂದು ಬಲ್ಲಿರಾ?

ಮನೆಯಲ್ಲಿ ಯುದ್ಧ ಅಥವಾ ಹಿಂಸಾಚಾರವನ್ನು ಪ್ರತಿಬಿಂಬಿಸುವ ನಕಾರಾತ್ಮಕ ಚಿತ್ರಗಳನ್ನು ನೇತುಹಾಕಬೇಡಿ. ಒಡೆದ ಗಾಜು ಮನೆಗೆ ದುರಾದೃಷ್ಟವನ್ನು ತರುತ್ತದೆ.  ಮನೆಯಲ್ಲಿ ಹಸಿ ಮಾಂಸವನ್ನು ಇಡಬೇಡಿ. ಮನೆಯಲ್ಲಿ ಹಳೆಯ ಕಬ್ಬಿಣದ ವಸ್ತುಗಳನ್ನು ಸಂಗ್ರಹವಾಗಲು ಬಿಡಬೇಡಿ. ಮನೆಯ ಮುಖ್ಯ ದ್ವಾರದಲ್ಲಿ ಮುರಿದ ಕುರ್ಚಿಯನ್ನು ಇಡಬೇಡಿ. ಮನೆಯ ಮುಖ್ಯ ದ್ವಾರದಲ್ಲಿ ಮುರಿದ ಕುರ್ಚಿಯನ್ನು ಇಡುವುದರಿಂದ ಮನೆಗೆ ಬಡತನ ವಕ್ಕರಿಸುತ್ತದೆ. ಇದಲ್ಲದೇ ಮನೆಯ ಮುಖ್ಯದ್ವಾರದ ಕಂಬ ಮುರಿದಿರುವುದರಿಂದ ಅಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿ ನೆಲೆಸುವುದಿಲ್ಲ.

ವಾಸ್ತು ಪರಿಹಾರಗಳು:
ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಇದು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ತುಳಸಿ ಗಿಡವು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಬೆಳಗಿಸಿ. ಮನೆಯಲ್ಲಿ ಪ್ರತಿದಿನ ಅಗರಬತ್ತಿಗಳನ್ನು ಬೆಳಗಿಸಿ.ಮನೆಯಲ್ಲಿ ದೇವರ ಕೋಣೆಯಿರಲಿ. ಪ್ರತಿದಿನ ದೇವರನ್ನು ಪೂಜಿಸಬೇಕು.ಮನೆಯಲ್ಲಿ ಪರಿಮಳಯುಕ್ತ ಮೇಣದಬತ್ತಿಗಳನ್ನು ಬೆಳಗಿಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.

ಇದನ್ನೂ ಓದಿ :  Salt tradition: ಉಪ್ಪನ್ನು ನೇರವಾಗಿ ಇನ್ನೊಬ್ಬರಿಗೆ ನೀಡಬೇಡಿ..! ಇದರ ಹಿಂದಿನ ಕಥೆ ನಿಮಗೆ ತಿಳಿದಿದೆಯೇ?

 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News