ನವದೆಹಲಿ: ಇಂದು(ಫೆ.23) ಫಾಲ್ಗುನ್ ಮಾಸದ ವಿನಾಯಕ ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಎಲ್ಲಾ ಚತುರ್ಥಿಯನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಈ ಚತುರ್ಥಿಯಂದು ಉಪವಾಸ ಮತ್ತು ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗಿ ಇಷ್ಟಾರ್ಥಗಳು ಈಡೇರುತ್ತವೆ. ಸಂಕಷ್ಟಿ ಚತುರ್ಥಿಯ ದಿನ ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಆದರೆ ವಿನಾಯಕ ಚತುರ್ಥಿಯ ರಾತ್ರಿ ಚಂದ್ರನ ದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ವಿನಾಯಕ ಚತುರ್ಥಿಯಂದು ಹಗಲಿನಲ್ಲಿ ಗಣಪತಿ ಬಪ್ಪನನ್ನು ಪೂಜಿಸಲಾಗುತ್ತದೆ.
ವಿನಾಯಕ ಚತುರ್ಥಿಯಂದು ಸರ್ವಾರ್ಥ ಸಿದ್ಧಿಯೋಗ
ಇಂದು ಫಾಲ್ಗುನ ಮಾಸದ ವಿನಾಯಕ ಚತುರ್ಥಿಯಂದು ಅತ್ಯಂತ ಮಂಗಳಕರವಾದ ಯೋಗವು ರೂಪುಗೊಂಡಿದೆ. ಇಂದು ಇಡೀ ದಿನ ಸರ್ವಾರ್ಥ ಸಿದ್ಧಿಯೋಗ ಇರುತ್ತದೆ. ಸರ್ವಾರ್ಥ ಸಿದ್ಧಿಯೋಗದಲ್ಲಿ ಪೂಜಿಸುವುದು ಮತ್ತು ಉಪವಾಸ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಫಾಲ್ಗುನ್ ವಿನಾಯಕ ಚತುರ್ಥಿ ತಿಥಿ ಫೆಬ್ರವರಿ 23ರಂದು ಬೆಳಗ್ಗೆ 03.24ರಿಂದ ಪ್ರಾರಂಭವಾಯಿತು, ಫೆ.24ರ ಮಧ್ಯರಾತ್ರಿ 1.33ರವರೆಗೆ ಇರುತ್ತದೆ. ಈ ಸಮಯದಲ್ಲಿ ಇಂದು ಬೆಳಗ್ಗೆ 11.26ರಿಂದ ಮಧ್ಯಾಹ್ನ 01.43ರವರೆಗೆ ಪೂಜೆಗೆ ಅತ್ಯಂತ ಮಂಗಳಕರ ಸಮಯವಾಗಿರುತ್ತದೆ.
ಇದನ್ನೂ ಓದಿ: Astro Tips: ಈ ವಸ್ತುಗಳನ್ನು ದಾನ ಮಾಡಿದರೆ ಶನಿ ಸಂತೋಷಗೊಳ್ಳುತ್ತಾನೆ, ಶ್ರೀಮಂತರಾಗಲು ಇದು ಸುಲಭ ಮಾರ್ಗ!
ವಿನಾಯಕ ಚತುರ್ಥಿಯ 4 ಶುಭಯೋಗ
ಸರ್ವಾರ್ಥ ಸಿದ್ಧಿ ಯೋಗ: ಇಂದು ಇಡೀ ದಿನ ನಡೆಯಲಿದೆ
ರವಿ ಯೋಗ: ಬೆಳಗ್ಗೆ 06:53ರಿಂದ ನಾಳೆ ಬೆಳಗಿನವರೆಗೆ: 03:44 AM
ಶುಭ ಯೋಗ: ಬೆಳಗ್ಗೆಯಿಂದ 08:58 AM
ಶುಕ್ಲ ಯೋಗ: ಬೆಳಗ್ಗೆ 08:58ರಿಂದ ನಾಳೆ ಸಂಜೆಯವರೆಗೆ
ಇಂದು ರಾತ್ರಿ ಚಂದ್ರನನ್ನು ನೋಡಬಾರದು
ವಿನಾಯಕ ಚತುರ್ಥಿಯಂದು ಚಂದ್ರನನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ. ವಿನಾಯಕ ಚತುರ್ಥಿಯಂದು ಚಂದ್ರನನ್ನು ನೋಡುವುದನ್ನು ಧಾರ್ಮಿಕ ಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಈ ದಿನದಂದು ಚಂದ್ರನನ್ನು ನೋಡುವುದು ವ್ಯಕ್ತಿಯ ಮೇಲೆ ಕಳಂಕ ತರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: 30 ವರ್ಷಗಳ ನಂತರ ಗ್ರಹಗಳ ಅದ್ಭುತ ಸಂಯೋಜನೆ! ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭ
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.