ಲವ್‌ ಮಾಡುವ ಹುಡುಗಿಯರು, ಹುಡುಗರ ಈ ರೀತಿ ಮಾಡಿದ್ರೆ ಇಷ್ಟಪಡುವುದಿಲ್ಲ..! ತಿಳಿಯಿರಿ

Love tips in Kannada : ಪ್ರೀತಿಸುವವರು ತಮ್ಮ ಹುಡುಗಿ ಅಥವಾ ಹುಡುಗನ ಇಷ್ಟ ಕಷ್ಟಗಳನ್ನು ಸಹ ಅರಿತುಕೊಂಡಿರಬೇಕು. ಸಧ್ಯ ಹುಡುಗರಲ್ಲಿ ಹುಡುಗಿಯರು ಇಷ್ಟಪಡದ ಆ ಅಭ್ಯಾಸ ಯಾವುದು ಅಂತ ತಿಳಿಯೋಣ.

Written by - Krishna N K | Last Updated : Feb 25, 2024, 07:10 PM IST
  • ಹುಡುಗರು ಇಷ್ಟಪಡುವ, ಹುಡುಗಿಯರು ಇಷ್ಟಪಡದ ಕೆಲವು ವಿಷಯಗಳಿವೆ.
  • ಯಾವುದೇ ಹುಡುಗಿ ತನಗೆ ಇಷ್ಟವಿಲ್ಲದ ಪದಗಳನ್ನು ಸಹಿಸುವುದಿಲ್ಲ.
  • ಕೀಳಾಗಿ ನೋಡುವ ವ್ಯಕ್ತಿತ್ವದ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ.
ಲವ್‌ ಮಾಡುವ ಹುಡುಗಿಯರು, ಹುಡುಗರ ಈ ರೀತಿ ಮಾಡಿದ್ರೆ ಇಷ್ಟಪಡುವುದಿಲ್ಲ..! ತಿಳಿಯಿರಿ title=

Relationship tips : ಸಂಬಂಧದಲ್ಲಿ ಹುಡುಗರು ಇಷ್ಟಪಡುವ, ಹುಡುಗಿಯರು ಇಷ್ಟಪಡದ ಕೆಲವು ವಿಷಯಗಳಿವೆ. ಪ್ರೀತಿಸಿದ ಹುಡುಗಿಯರು ಏನು ಇಷ್ಟಪಡುತ್ತಾಳೆ, ತನ್ನ ಹುಡುಗನಿಗೆ ಏನಂದ್ರೆ ಇಷ್ಟ ಎನ್ನುವುದನ್ನ ಇಬ್ಬರೂ ಅರಿತುಕೊಂಡಿರಬೇಕು.. ಇದರಿಂದಾಗಿ ಅವರ ಸಂಬಂಧ ಗಟ್ಟಿಯಾಗಿರುತ್ತದೆ. 

ಸಾಮಾನ್ಯವಾಗಿ, ಯಾವುದೇ ಹುಡುಗಿ ತನಗೆ ಇಷ್ಟವಿಲ್ಲದ ಪದಗಳನ್ನು ಸಹಿಸುವುದಿಲ್ಲ. ಕೆಲವು ಹುಡುಗರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ, ಕೆಲವು ಸಂದರ್ಭದಲ್ಲಿ ಅದೇ ಮಾತುಗಳಿಂದ ಅವರನ್ನು ನೋಯಿಸುತ್ತಾರೆ. ಕೆಲವು ಹುಡುಗಿಯರು ತಮಗೆ ಆದ್ಯತೆ ನೀಡಲಿಲ್ಲ ಅಂದ್ರೆ ಬೇಸರ ಮಾಡಿಕೊಳ್ಳುತ್ತಾರೆ. ತಮ್ಮನ್ನು ಕೀಳಾಗಿ ನೋಡುವ ವ್ಯಕ್ತಿತ್ವದ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ.

ಇದನ್ನೂ ಓದಿ:ವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗಿದೆಯೇ? ಹಾಗಿದ್ರೆ, ಇಲ್ಲಿದೆ ಅದಕ್ಕೆ ಪರಿಹಾರ!

ಕೆಲಸದ ಬಗ್ಗೆ ಕೆಲವು ಹುಡುಗರು ಲೈಟ್ ತೆಗೆದುಕೊಳ್ಳುತ್ತಾರೆ. ಈ ಮನೋಭಾವ ಇರುವ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಇದಲ್ಲದೆ, ಕೆಲವು ಹುಡುಗರು ವೇದಗಳು ಹೇಳಿದಂತೆ ವರ್ತಿಸಲು ನಿರ್ಬಂಧ ವಿಧಿಸುತ್ತಾರೆ. ಹುಡುಗಿ ಅದನ್ನು ಮೊದಲು ಇಷ್ಟಪಡುವುದಿಲ್ಲ. ಅವಳನ್ನು ಸ್ವತಂತ್ರವಾಗಿರಲು ಬಿಡಿ..

ಹುಡುಗಿಯರು ಕರೆ ಮಾಡಿದಾಗ ಅಥವಾ ಸಂದೇಶ ಕಳುಹಿಸಿದಾಗ ತಕ್ಷಣವೇ ಉತ್ತರಿಸಲು ಬಯಸುತ್ತಾರೆ. ಇಲ್ಲದಿದ್ದರೆ ಅವರು ಕೋಪಗೊಳ್ಳುತ್ತಾರೆ. ಇನ್ನು ಕೆಲವು ಹುಡುಗರು ಎಲ್ಲದಕ್ಕೂ ಜಗಳವಾಡುತ್ತಾರೆ. ಸಣ್ಣ ವಿಚಾರವನ್ನೂ ಸಹ ದೊಡ್ಡದಾಗಿ ಮಾಡುತ್ತಾರೆ. ಇಂತಹ ಗುಣವುಳ್ಳ ಹುಡುಗನನ್ನು ಹುಡುಗಿ ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಪಾಲಕರು ತಮ್ಮ ಮಕ್ಕಳಿಗೆ ನಾಯಕತ್ವದ ಬಗ್ಗೆ ಈ 5 ವಿಷಯಗಳನ್ನು ಕಲಿಸಬೇಕು..!

ಕೊನೆಯದಾಗಿ ದೊಡ್ಡ ವಿಚಾರವೊಂದನ್ನು ನಿಮಗೆ ಹೇಳಲೇಬೇಕು.. ಸಾಮಾನ್ಯವಾಗಿ ಯುವಕರು ರಸ್ತೆಯಲ್ಲಿ ತಮ್ಮ ಪ್ರೇಯಸಿಯ ಜೊತೆ ಹೋಗುವಾಗ ಅಂದದ ಹುಡುಗಿ ಕಂಡ್ರೆ ಅವರನ್ನು ನೋಡುತ್ತಾ ನಿಲ್ಲುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಬೇಡಿ. ಇದರಿಂದ ನಿಮ್ಮ ಪ್ರೇಯಸಿ ಕೋಪಗೊಳ್ಳುತ್ತಾಳೆ.. ನೆಕ್ಸ್ಟ್‌ ಬ್ರೇಕ್‌ ಅಪ್‌ ಗ್ಯಾರಂಟಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News