ಗ್ರೀನ್ ಟೀ ಕುಡಿಯುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ಗ್ರೀನ್ ಟೀ ಕುಡಿಯಲು ಸರಿಯಾದ ಸಮಯ ಯಾವುದು ಎಂಬುದರ ಬಗ್ಗೆ ಹೆಚ್ಚು ಸಂಶೋಧನೆ ನಡೆದಿಲ್ಲ. ಆದರೆ ಗ್ರೀನ್ ಟೀ ಯಲ್ಲಿರುವ ಸಣ್ಣ ಪ್ರಮಾಣದ ಕೆಫೀನ್ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸುವ ಮೂಲಕ ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. 

Written by - Ranjitha R K | Last Updated : Oct 22, 2021, 04:16 PM IST
  • ಗ್ರೀನ್ ಟೀಯಲ್ಲಿರುವ ಕೆಫೀನ್ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
  • ಬೆಳಿಗ್ಗೆ ಮತ್ತು ಸಂಜೆ ಗ್ರೀನ್ ಟೀ ಸೇವಿಸಿದರೆ ಸಾಕು
  • ಎರಡು-ಮೂರು ಕಪ್ ಗ್ರೀನ್ ಟೀಗಿಂತ ಹೆಚ್ಚು ಕುಡಿಯಬಾರದು
ಗ್ರೀನ್ ಟೀ ಕುಡಿಯುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ನವದೆಹಲಿ : ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ (geen tea benefits) ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ. ಆದರೆ ಎಷ್ಟು ಗ್ರೀನ್ ಟೀ ಸೇವಿಸಬೇಕು ಎನ್ನುವುದು ಕೂಡಾ ತಿಳಿದಿರಬೇಕು. ಯಾಕೆಂದರೆ ಆರೋಗ್ಯಕ್ಕೆ ಹಿತಕಾರಿ ಎಂದ ಮಾತ್ರಕ್ಕೆ ಕೆಲವರು ದಿನವಿಡೀ ಹಲವಾರು ಕಪ್ ಗ್ರೀನ್ ಟೀ ಕುಡಿಯುತ್ತಾರೆ. ಇದು ಪ್ರಯೋಜನವಾಗುವ ಬದಲು ಅಡ್ಡ ಪರಿಣಾಮಗಳನ್ನು (Side effects of green tea) ತಂದೊಡ್ಡಬಹುದು. ಇನು ಕೆಲವರಿಗೆ ರಾತ್ರಿ ಮಲಗುವ ಮುನ್ನ ಕೂಡಾ ಗ್ರೀನ್ ಟೀ ಕುಡಿಯುವ ಅಭ್ಯಾಸವಿರುತ್ತದೆ. ತಜ್ಞರ ಪ್ರಕಾರ, ಗ್ರೀನ್ ಟೀ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. 

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ :
ಗ್ರೀನ್ ಟೀ (Green tea) ಕುಡಿಯಲು ಸರಿಯಾದ ಸಮಯ ಯಾವುದು ಎಂಬುದರ ಬಗ್ಗೆ ಹೆಚ್ಚು ಸಂಶೋಧನೆ ನಡೆದಿಲ್ಲ. ಆದರೆ ಗ್ರೀನ್ ಟೀ ಯಲ್ಲಿರುವ ಸಣ್ಣ ಪ್ರಮಾಣದ ಕೆಫೀನ್ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸುವ ಮೂಲಕ ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. 

ಇದನ್ನೂ ಓದಿ Egg : ಮೊಟ್ಟೆ ಜೊತೆ ಯಾವುದೇ ಕಾರಣಕ್ಕೂ ಸೇವಿಸಬೇಡಿ ಈ ಆಹಾರಗಳನ್ನ : ಇಲ್ಲದಿದ್ದರೆ ತಪ್ಪಿದಲ್ಲ ಆರೋಗ್ಯ ಸಮಸ್ಯೆಗಳು

ಇದಲ್ಲದೇ, ಮಲಗುವ ಮುನ್ನ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಪದೇ ಪದೇ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗಬಹುದು. ಇದು ನಿದ್ರೆಗೆ ಭಂಗ ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಹೊತ್ತು ಸಣ್ಣ ಪ್ರಮಾಣದಲ್ಲಿ ಗ್ರೀನ್ ಟೀ  ಸೇವಿಸಬಹುದು (Green tea at night). ಆದರೆ ಅದು ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ಎನ್ನುವುದು ನೆನಪಿರಲಿ. 

ಹೆಚ್ಚು ಗ್ರೀನ್ ಟೀ ಬೇಡ : 
ತಜ್ಞರ ಪ್ರಕಾರ, ದಿನಕ್ಕೆ ಎರಡು-ಮೂರು ಕಪ್ ಹೆಚ್ಚು ಗ್ರೀನ್ ಟೀ ಗಿಂತ  ಕುಡಿಯಬಾರದು. ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಗ್ರೀನ್ ಟೀ ಕುಡಿದರೆ ಸಾಕು. ಈ ಪ್ರಮಾಣದಲ್ಲಿ ಗ್ರೀನ್ ಟೀ ಕುಡಿದರೆ ಯಾವ ಅಡ್ಡಪರಿಣಾಮಗಳೂ (Side effects of green tea) ಇಲ್ಲದೆ, ಅದರ ಪ್ರಯೋಜನವನ್ನು ಪಡೆಯಬಹುದು.  ಅತಿಯಾಗಿ ಗ್ರೀನ್ ಟೀ ಕುಡಿಯುವುದರಿಂದ ವಾಕರಿಕೆ, ನಿದ್ರಾಹೀನತೆ ಮತ್ತು ರಕ್ತಹೀನತೆ ಸಮಸ್ಯೆ ಉಂಟಾಗಬಹುದು. 

ಇದನ್ನೂ ಓದಿ : Benefits Of Rice: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನ

ಗ್ರೀನ್ ಟೀಯನ್ನು ಯಾಕೆ ಕುಡಿಯಬೇಕು?
 ಗ್ರೀನ್ ಟೀ ಏಕೆ ಕುಡಿಯಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕ್ಯಾಮಲಿಯಾ ಸೈನೆನ್ಸಿಸ್ ಸಸ್ಯದ ಎಲೆಗಳಿಂದ (Camellia sinensis plant) ಗ್ರೀನ್ ಟೀಯನ್ನು ಹೊರತೆಗೆಯಲಾಗುತ್ತದೆ. ಇದು ಆಂಟಿ ಆಕ್ಸಿಡೆಂಟ್   ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಗ್ರೀನ್ ಟೀ ನರಗಳನ್ನು ಸಡಿಲಗೊಳಿಸುತ್ತದೆ, ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಮುಕ್ತ ಕಣಗಳಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ. 

ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ (Catechins) ಎಂಬ ಸಂಯುಕ್ತಗಳಿವೆ.  ಜೊತೆಗೆ ಆಂಟಿಆಕ್ಸಿಡೆಂಟ್‌ಗಳು epigallocatechin gallate (EGCGC) ಮತ್ತು (epigallocatechin (EGC) ಕೂಡ ಇದೆ. ಇದರ ಜೊತೆಗೆ ಇದು ನರಗಳನ್ನು ಸಡಿಲಗೊಳಿಸುವ ಥೈನೈನ್ ಅಮೈನೋ ಆಸಿಡ್ ಅನ್ನು ಒಳಗೊಂಡಿದೆ. ಇದು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News