Kundli Yoga: ಜಾತಕದಲ್ಲಿನ ಯಾವ ಯೋಗದಿಂದ ವ್ಯಕ್ತಿ ಧನವಂತನಾಗುತ್ತಾನೆ? ನಿಮ್ಮ ಬಳಿ ಎಷ್ಟು ಅದೃಷ್ಗ ಬಲ ಇದೆ ಇಲ್ಲಿ ತಿಳಿಯಿರಿ

Know How Lucky You Are - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ಕೇಂದ್ರ ಸ್ಥಾನದಲ್ಲಿ  ದೋಷಪೂರಿತ ಗ್ರಹಗಳ ಸಂಯೋಜನೆ ಇದ್ದಾರೆ ವ್ಯಕ್ತಿಯು ಶ್ರಿಮಂತನಾಗಿಯೂ ಕೂಡ ಬದವನಾಗಿಯೇ ಇರುತ್ತಾನೆ. ಜಾತಕದಲ್ಲಿ ಹಣದ ಯೋಗ ಸೃಷ್ಟಿಸಲು ಗ್ರಹಗಳು ವಿಶೇಷ ಪಾತ್ರ ವಹಿಸುತ್ತವೆ.

Written by - Nitin Tabib | Last Updated : Jan 25, 2022, 08:57 PM IST

    ಜನ್ಮ ಜಾತಕದ ಕೆಲ ಯೋಗಗಳು ಮನುಷ್ಯನನ್ನು ವಿಶೇಷವನ್ನಾಗಿಸುತ್ತವೆ.

    ಜಾತಕದಲ್ಲಿ ಪಾಪ ಗ್ರಹಗಳು ಇದ್ದಾರೆ ಧನ ಯೋಗ ಸೃಷ್ಟಿಯಾಗುವುದಿಲ್ಲ

    ಈ ರಾಶಿಗಳ ಜಾತಕದಲ್ಲಿ ಧನಯೋಗ ಸೃಷ್ಟಿಯಾಗುತ್ತದೆ.

Kundli Yoga: ಜಾತಕದಲ್ಲಿನ ಯಾವ ಯೋಗದಿಂದ ವ್ಯಕ್ತಿ ಧನವಂತನಾಗುತ್ತಾನೆ? ನಿಮ್ಮ ಬಳಿ ಎಷ್ಟು ಅದೃಷ್ಗ ಬಲ ಇದೆ ಇಲ್ಲಿ ತಿಳಿಯಿರಿ title=
Know How Lucky You Are (File Photo)

ನವದೆಹಲಿ: Which Yoga In Kundali Makes Man Wealthy - ಜ್ಯೋತಿಷ್ಯದ (Astrology) ಪ್ರಕಾರ, ರಾಶಿ ಮತ್ತು ಜನ್ಮ ಜಾತಕ ವ್ಯಕ್ತಿಯ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಜನ್ಮ ಕುಂಡಲಿಯಲ್ಲಿ ಕೆಲವು ವಿಶೇಷ ಯೋಗಗಳಿವೆ, ಅವು ಓರ್ವ ವ್ಯಕ್ತಿಯು ಶ್ರೀಮಂತನಾಗುತ್ತಾನೆಯೇ (Wealthy Man) ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತವೆ. ಜಾತಕದ ಕೇಂದ್ರ ಸ್ಥಾನದಲ್ಲಿ ಪಾಪ ಗ್ರಹಗಳ ಸಂಯೋಜನೆಯಿದ್ದರೆ, ವ್ಯಕ್ತಿಯು ಶ್ರೀಮಂತನಾದ ನಂತರವೂ ಬಡವನಾಗಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ರಾಶಿಗಳಲ್ಲಿ (Zodiac Signs) ಹಣದ ಯೋಗವು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ: ಈ ರಾಶಿಯ ಲಗ್ನ ಜಾತಕದ ಕೇಂದ್ರ ಸ್ಥಾನದಲ್ಲಿ ಶುಕ್ರ ವಿರಾಜಮಾನನಾದರೆ, ಆಗ ವ್ಯಕ್ತಿಯು ಶ್ರೀಮಂತ ಉದ್ಯಮಿಯಾಗುತ್ತಾನೆ. ಸಂಪತ್ತಿನ ಮನೆಯಲ್ಲಿ ಶನಿ ಮತ್ತು ಮಂಗಳನ ಉಪಸ್ಥಿತಿಯಿಂದಾಗಿ, ವ್ಯಕ್ತಿಯು ಭೂಮಿ ಅಥವಾ ಕೃಷಿ ಕೆಲಸದ ಮೂಲಕ ಶ್ರೀಮಂತನಾಗುತ್ತಾನೆ.

ವೃಷಭ: ಸಂಪತ್ತಿನ ಮನೆಯಲ್ಲಿ ಬುಧ, ಗುರು, ಶುಕ್ರ ಇರುವುದರಿಂದ ವ್ಯಕ್ತಿ ಒಬ್ಬ ಒಳ್ಳೆಯ ಮಾತುಗಾರನಾಗುತ್ತಾನೆ. ಅಲ್ಲದೆ, ಕಾಪಿ-ಬುಕ್‌ ವ್ಯಾಪಾರದಿಂದ ಹೆಚ್ಚಿನ ಹಣವನ್ನು ಗಳಿಸುತ್ತದೆ.

ಮಿಥುನ: ಜಾತಕದ ಸಂಪತ್ತಿನ ಮನೆಯಲ್ಲಿ ಚಂದ್ರ, ಗುರು ಮತ್ತು ಮಂಗಳ ಒಟ್ಟಿಗೆ ಹಿಮ್ಮೆಟ್ಟಿದಾಗ ಅಥವಾ ವಕ್ರಿಯಾದಾಗ ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಇಂತಹ ಜನರು ಕಾರ್ಖಾನೆಗಳು, ಆಡಳಿತ ಅಧಿಕಾರಿಗಳಾಗಿ ಮತ್ತು ಧಾರ್ಮಿಕ ಕೆಲಸಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ.

ಕರ್ಕ: ಶುಕ್ರ, ಸೂರ್ಯ ಮತ್ತು ಗುರುಗಳು ಸಂಪತ್ತಿನ ಮನೆಯಲ್ಲಿದ್ದರೆ, ವ್ಯಕ್ತಿಗೆ ಗೌರವ ಮತ್ತು ಸಂಪತ್ತಿಗೆ ಕೊರತೆ ಇರುವುದಿಲ್ಲ. ಈ ರಾಶಿಯ ಜನರು ಗಾಜು ಮತ್ತು ನೀರಿಗೆ ಸಂಬಂಧಿಸಿದ ವ್ಯಾಪಾರದಿಂದ ಹೆಚ್ಚು ಹಣವನ್ನು ಗಳಿಸುತ್ತಾರೆ.

ಸಿಂಹ: ಸಂಪತ್ತಿನ ಮನೆಯಲ್ಲಿ ಬುಧ, ಗುರು ಮತ್ತು ಶುಕ್ರರ ಉಪಸ್ಥಿತಿಯಿಂದ ವ್ಯಕ್ತಿಯು ಉನ್ನತ ಮಟ್ಟದ ವ್ಯಾಪಾರಿಯಾಗುತ್ತಾನೆ. ಈ ರಾಶಿಚಕ್ರದ ಜನರು ಲೇಖನ ಸಾಮಗ್ರಿಗಳು, ಹತ್ತಿ ಮತ್ತು ಕಾಗದಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಆರ್ಥಿಕ ಯಶಸ್ಸನ್ನು ಪಡೆಯುತ್ತಾರೆ.

ಕನ್ಯಾ: ಸಂಪತ್ತಿನ ಮನೆಯಲ್ಲಿ ಶುಕ್ರ, ಚಂದ್ರ ಮತ್ತು ಬುಧರ ಸಂಯೋಜನೆಯು ಈ ರಾಶಿಯ ಜನರಿಗೆ ಸಂಪತ್ತನ್ನು ಸೃಷ್ಟಿಸುತ್ತದೆ. ಈ ರಾಶಿಯ ಜನರು ಬೋಧನೆ ಮತ್ತು ಕಂಪ್ಯೂಟರ್ ಉದ್ಯೋಗದಿಂದ ಹೆಚ್ಚಿನ ಹಣವನ್ನು ಗಳಿಸುತ್ತಾರೆ.

ತುಲಾ: ಜಾತಕದ ಹಣದ ಮನೆಯಲ್ಲಿ ಶುಕ್ರ, ಸೂರ್ಯ ಮತ್ತು ಮಂಗಳ ಇದ್ದರೆ, ವ್ಯಕ್ತಿಯು ಹೋಟೆಲ್, ರೆಸ್ಟೋರೆಂಟ್ ಮತ್ತು ಯಂತ್ರೋಪಕರಣಗಳ ಕೆಲಸದಿಂದ ಸಾಕಷ್ಟು ಹಣವನ್ನು ಗಳಿಸುತ್ತಾನೆ.

ವೃಶ್ಚಿಕ: ಧನಭಾವದಲ್ಲಿ ಶುಕ್ರ ಮತ್ತು ಗುರು ಇರುವುದರಿಂದ ಜಾತಕದಲ್ಲಿ ಧನ ಯೋಗ ಉಂಟಾಗುತ್ತದೆ. ಈ ರಾಶಿಚಕ್ರದ ಜನರು ನಿರ್ಮಾಣ ಕ್ಷೇತ್ರಕ್ಕೆ ಸೇರುವ ಮೂಲಕ ಉತ್ತಮ ಹಣವನ್ನು ಗಳಿಸುತ್ತಾರೆ.

ಧನು: ಸಂಪತ್ತಿನ ಮನೆಯಲ್ಲಿ ಶುಕ್ರ ಮತ್ತು ಶನಿ-ಮಂಗಳ ಸಂಯೋಜನೆಯಿಂದಾಗಿ, ವ್ಯಕ್ತಿಯು ಅತ್ಯುನ್ನದ ಭೂಮಾಲೀಕನಾಗುತ್ತಾನೆ. ಇಂತಹ ಜನರು ಜಮೀನಿನ ವ್ಯವಹಾರದ ಮೂಲಕ  ಸಾಕಷ್ಟು ಹಣ ಗಳಿಸುತ್ತಾರೆ.

ಮಕರ: ಮಕರ ಲಗ್ನದಲ್ಲಿ ಶುಕ್ರ ಮತ್ತು ಹಣದ ಮನೆಯಲ್ಲಿ ಶನಿ ಮತ್ತು ಮಂಗಳ ಸಂಯೋಜನೆ ಇರುವ ಜನರಿಗೆ ಕೃಷಿ ಫಾರ್ಮ್ ಮತ್ತು ಆಸ್ತಿ ಅಥವಾ ಕಾರ್ಖಾನೆ ಮುಂತಾದ ಯಂತ್ರೋಪಕರಣಗಳಿಂದ ವಿಶೇಷ ಲಾಭ ಸಿಗುತ್ತದೆ.

ಕುಂಭ: ಹಣದ ಮನೆಯಲ್ಲಿ ಶುಕ್ರ ಮತ್ತು ಗುರು ಇರುವುದರಿಂದ ಮಹಾಧನಿ ಯೋಗ ಸೃಷ್ಟಿಯಾಗುತ್ತದೆ. ಈ ರಾಶಿಯ ಜನರು ವಿಮೆ, ಗುತ್ತಿಗೆ ಕ್ಷೇತ್ರದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ.

ಇದನ್ನೂ ಓದಿ-Popularity Tips: ನಿಮಗೂ ಫೇಮಸ್ ಆಗುವ ಬಯಕೆಯೇ? ಈ ಸುಲಭ ಉಪಾಯಗಳನ್ನು ಅನುಸರಿಸಿ ಝಟ್ ಅಂತ ಪ್ರಸಿದ್ಧಿ ಪಡೆಯಿರಿ

ಮೀನ: ಶುಕ್ರನ ಜೊತೆಗೆ ಸೂರ್ಯ ಮತ್ತು ಮಂಗಳವು ಹಣದ ಮನೆಯಲ್ಲಿದ್ದಾಗ, ಯಂತ್ರೋಪಕರಣಗಳು ಮತ್ತು ಅಗ್ನಿಗೆ ಸಂಬಂಧಿ ಕೆಲಸಗಳಿಂದ ಆದಾಯವು ಅಧಿಕವಾಗಿರುತ್ತದೆ.

ಇದನ್ನೂ ಓದಿ-ಮನೆಯಲ್ಲಿ ಈ ಗಿಡವಿದ್ದರೆ , ಲಕ್ಷ್ಮೀ ಸುರಿಸುತ್ತಾಳೆ ದುಡ್ಡಿನ ಮಳೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Panchagrahi Yoga: ಶನಿಯ ರಾಶಿಯಲ್ಲಿ 5 ಗ್ರಹಗಳ 'ಮಹಾಸಂಯೋಗ'! ಈ 3 ರಾಶಿಯವರಿಗೆ ಸಂಕಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News