ಮಹಿಳೆಯರು ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ, ಸಂಸಾರ ಜೀವನ ಹಾಳಾಗುವುದಕ್ಕೆ ಇದೂ ಕಾರಣವಾಗಬಹುದು

ಗರುಡ ಪುರಾಣದ ಪ್ರಕಾರ ಹೆಂಡತಿ ಗಂಡನಿಂದ ದೂರ ಇರಬಾರದು.  ಏಕೆಂದರೆ ಸಂಗಾತಿಯಿಂದ ದೂರವಾಗುವುದು ಮಹಿಳೆಯರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. 

Written by - Zee Kannada News Desk | Last Updated : Mar 15, 2022, 04:13 PM IST
  • ಕೆಟ್ಟ ಸ್ವಭಾವದಿಂದ ದೂರವಿರಬೇಕು
  • ಗಂಡನನ್ನು ಟೀಕಿಸುವವರಿಂದ ಅಂತರ ಕಾಯ್ದುಕೊಳ್ಳಿ
  • ಗರುಡ ಪುರಾಣದಲ್ಲಿ ತಿಳಿಸಲಾದ ವಿಷಯಗಳು
ಮಹಿಳೆಯರು ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ, ಸಂಸಾರ ಜೀವನ ಹಾಳಾಗುವುದಕ್ಕೆ  ಇದೂ ಕಾರಣವಾಗಬಹುದು   title=
ಗರುಡ ಪುರಾಣದಲ್ಲಿ ತಿಳಿಸಲಾದ ವಿಷಯಗಳು (file photo)

ಬೆಂಗಳೂರು : ಗರುಡ ಪುರಾಣದಲ್ಲಿ ಜೀವನ ಮತ್ತು ಸಾವಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ (Garuda Purana). ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಜೀವನದಲ್ಲಿ ಗರುಡ ಪುರಾಣದ ವಿಷಯಗಳನ್ನು ಅನ್ವಯಿಸುವ ಮೂಲಕ ಅಪಾರ ಯಶಸ್ಸನ್ನು ಸಾಧಿಸಬಹುದು (Garuda Purana Fir Success). ಗರುಡಪುರಾಣದಲ್ಲಿ ಹೆಣ್ಣಿನ ಬಗ್ಗೆ ವಿಶೇಷವಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಪ್ರತಿಯೊಬ್ಬ ವಿವಾಹಿತ ಮಹಿಳೆಯು ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ ಈ  ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 

ಪತಿಯೊಂದಿಗೆ  ಅಂತರ ಕಾಯ್ದುಕೊಳ್ಳುವುದು ಸರಿಯಲ್ಲ : 
ಗರುಡ ಪುರಾಣದ (Garuda Purana) ಪ್ರಕಾರ ಹೆಂಡತಿ ಗಂಡನಿಂದ ದೂರ ಇರಬಾರದು.  ಏಕೆಂದರೆ ಸಂಗಾತಿಯಿಂದ ದೂರವಾಗುವುದು ಮಹಿಳೆಯರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. 

ಇದನ್ನೂ ಓದಿ : ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಸದಾ ಇರಲಿದೆ ಲಕ್ಷ್ಮೀ ಕಟಾಕ್ಷ , ಇಲ್ಲವಾದಲ್ಲಿ ಬಡತನ ಬೆಂಬಿಡುವುದೇ ಇಲ್ಲ

ಹೆಚ್ಚು ದೂರ ಮಾಡಬೇಡಿ :
ಧರ್ಮಗ್ರಂಥಗಳ ಪ್ರಕಾರ, ಗಂಡ ಮತ್ತು ಹೆಂಡತಿ ಪರಸ್ಪರ ನಿಷ್ಠರಾಗಿರುತ್ತಾರೆ (Garuda Purana for relations). ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಒಟ್ಟಿಗೆ ಇರುವುದು ಬಹಳ ಮುಖ್ಯ. ಪರಸ್ಪರ ದೂರವಿರುವುದು ಅವರಿಗೆ ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. 

ಗರುಡ ಪುರಾಣದ ಪ್ರಕಾರ, ಮಹಿಳೆಯರು ಕೆಟ್ಟ ಸ್ವಭಾವ ಹೊಂದಿರುವ ಜನರೊಂದಿಗೆ ಸಂಪರ್ಕ ಅಥವಾ ಸ್ನೇಹವನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಕೆಟ್ಟ ಸ್ವಭಾವವು ಅವರ ಮೇಲೆ ಪರಿಣಾಮ ಬೀರಬಹುದು (Garuda Purana For Women). ಅಲ್ಲದೆ, ಪತಿಯ ವಿರುದ್ಧ ಇರುವವರ ಸ್ನೇಹ ಮಾಡಿಕೊಳ್ಳಬಾರದು. ಪತಿಗೆ ಕೆಟ್ಟದ್ದನ್ನು ಬಯಸುವ   ಅಥವಾ ಗಂಡನನ್ನು ಖಂಡಿಸುವ ಜನರಿಂದ ದೂರವಿರಬೇಕು. 

ಇದನ್ನೂ ಓದಿ : ASTROLOGY: ಪತಿಗೆ ಪಾಲಿಗೆ ಅದೃಷ್ಟ ಹೊತ್ತು ತರುತ್ತಾರೆ ಈ 3 ರಾಶಿಯ ಹುಡುಗಿಯರು!

ಬೇರೆಯವರ ಮನೆಯಲ್ಲಿ ಹೆಚ್ಚು ದಿನ ಇರಬೇಡಿ :
ಗರುಡ ಪುರಾಣದ ಪ್ರಕಾರ, ನಿಮ್ಮ ಮನೆ ಯಾವಾಗಲೂ ನಿಮ್ಮದೇ ಆಗಿರುತ್ತದೆ.  ಬೇರೆಯವರ ಮನೆಯಲ್ಲಿ ಹೆಚ್ಚು ದಿನ ಇರಬಾರದು. ಸ್ವಂತ ಮನೆಯಲ್ಲಿ ಸಿಗುವ ಗೌರವ ಅನ್ಯ ಮನೆಯಲ್ಲಿ ಸಿಗುವುದಿಲ್ಲ.

ನಿಮ್ಮ ಪ್ರೀತಿಪಾತ್ರರಿಗೆ ಅಗೌರವ  ತೋರಬೇಡಿ : 
ಗರುಡ ಪುರಾಣದ ಪ್ರಕಾರ, ಸಿಹಿಯಾಗಿ ಮಾತನಾಡುವ ಮತ್ತು ಎಲ್ಲರ ಒಳಿತನ್ನು ಬಯಸುವ ಮಹಿಳೆಯರನ್ನು ಸದ್ಗುಣಿ ಎಂದು ಹೇಳಲಾಗುತ್ತದೆ. ಪುರುಷರು ಅಂತಹ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ತಮ್ಮ ಮಾತಿನ ಮೇಲೆ ನಿಯಂತ್ರಣ ಇರುವ ಮಹಿಳೆಯರಿಗೆ ಎಲ್ಲೆಡೆ ಗೌರವ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News