2019ರ ಜುಲೈ ತಿಂಗಳಿಂದ ನಿಮಗೆ ಏಕರೂಪದ ಡಿಎಲ್,ಆರ್‌ಸಿ ಲಭ್ಯ!

2019 ರ ಜುಲೈನಿಂದ ದೇಶವ್ಯಾಪ್ತಿ ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ. ಅಲ್ಲದೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಈ ಪ್ರಮಾಣಪತ್ರಗಳ ನೋಟ, ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ ಎಂದು ತಿಳಿದು ಬಂದಿದೆ

Last Updated : Oct 14, 2018, 11:09 AM IST
2019ರ ಜುಲೈ ತಿಂಗಳಿಂದ ನಿಮಗೆ ಏಕರೂಪದ ಡಿಎಲ್,ಆರ್‌ಸಿ ಲಭ್ಯ! title=

ನವದೆಹಲಿ: 2019 ರ ಜುಲೈನಿಂದ ದೇಶವ್ಯಾಪ್ತಿ ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ. ಅಲ್ಲದೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಈ ಪ್ರಮಾಣಪತ್ರಗಳ ನೋಟ, ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ ಎಂದು ತಿಳಿದು ಬಂದಿದೆ

ಇನ್ನು ಮುಂದೆ ಸ್ಮಾರ್ಟ್‌ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳಲ್ಲಿ ಕ್ಯೂಆರ್‌ ಕೋಡ್‌ಗಳನ್ನೂ ಒಳಗೊಂಡಿರುತ್ತವೆ. ಆ ಮೂಲಕ ಅವುಗಳನ್ನು ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದು ಎನ್ನಲಾಗಿದೆ.ಇದರಿಂದ ಟ್ರಾಫಿಕ್ ಪೊಲೀಸರು ಕೂಡ ಇವುಗಳನ್ನು ಸ್ಕಾನ್ ಮಾಡುವುದರ ಮೂಲಕ ಎಲ್ಲ ವಿವರಗಳನ್ನು ಪಡೆಯಬಹುದಾಗಿದೆ.

ಈಗ ದೇಶಾದ್ಯಂತ ಪ್ರತಿದಿನ ಸುಮಾರು 32,000 ಡಿಎಲ್‌ಗಳ ವಿತರಣೆ/ ನವೀಕರಣ ಮತ್ತು  43,000 ವಾಹನಗಳ ನೋಂದಣಿ ನಡೆಯುತ್ತದೆ. ಇವುಗಳೆಲ್ಲವನ್ನು ಕೂಡ ಈಗ ಹೊಸ ರೂಪಕ್ಕೆ ನವಕರಣಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಈಗ ಹೊಸದಾಗಿ ಬಂದಿರುವ ಈ ನವೀಕರಣ ಕಾರ್ಯಕ್ಕೆ ಹೆಚ್ಚೆಂದರೆ 15 ರಿಂದ 20 ರೂಪಾಯಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.
 

Trending News