Astro Tips: ಈ ರಾಶಿಯವರು ಎಂದಿಗೂ ಕೆಂಪು ದಾರವನ್ನು ಧರಿಸಬಾರದು..!

ಹಿಂದೂ ನಂಬಿಕೆಗಳ ಪ್ರಕಾರ ಕೆಂಪು ದಾರವನ್ನು ಕೈಯಲ್ಲಿ ಧರಿಸುವುದರಿಂದ, ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ ಮತ್ತು ಬಜರಂಗ ಬಲಿಯ ಕೃಪೆಯೂ ದೊರೆಯುತ್ತದೆ. ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಜಾತಕದಲ್ಲಿ ಮಂಗಳ ಗ್ರಹವೂ ಬಲಗೊಳ್ಳುತ್ತದೆ ಮತ್ತು ಆರ್ಥಿಕ ಲಾಭದ ಸಾಧ್ಯತೆಯೂ ಇರುತ್ತದೆ.

Written by - Puttaraj K Alur | Last Updated : Nov 5, 2022, 07:11 AM IST
  • ಹಿಂದೂ ನಂಬಿಕೆ ಪ್ರಕಾರ ಕೈಯಲ್ಲಿ ಕೆಂಪು ದಾರ ಧರಿಸುವುದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳೆ
  • ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳುವುದರಿಂದ ಜಾತಕದಲ್ಲಿ ಮಂಗಳ ಗ್ರಹವೂ ಬಲಗೊಳ್ಳುತ್ತದೆ
  • ಕುಂಭ ಮತ್ತು ಮೀನ ರಾಶಿಯವರು ಕೆಂಪು ದಾರದ ಬದಲು ನೀಲಿ ದಾರವನ್ನು ಕಟ್ಟಿಕೊಳ್ಳಬೇಕು
Astro Tips: ಈ ರಾಶಿಯವರು ಎಂದಿಗೂ ಕೆಂಪು ದಾರವನ್ನು ಧರಿಸಬಾರದು..! title=
ಯಾರು ಕೆಂಪು ದಾರ ಧರಿಸಬಾರದು?

ನವದೆಹಲಿ: ಅನೇಕ ಜನರು ತಮ್ಮ ಕೈಯಲ್ಲಿ ಕೆಂಪು ಬಣ್ಣದ ದಾರವನ್ನು ಧರಿಸುತ್ತಾರೆ. ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಕೆಂಪು ದಾರವನ್ನು ಕಟ್ಟುವುದು ವಾಡಿಕೆ. ನಂಬಿಕೆಯ ಪ್ರಕಾರ ಕೆಂಪು ದಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಂಪು ದಾರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಆದರೆ ಯಾವ ರಾಶಿಯ ಜನರು ಕೆಂಪು ದಾರವನ್ನು ಧರಿಸಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.  

ಕೆಂಪು ದಾರದ ಅನುಕೂಲಗಳು

ಹಿಂದೂ ನಂಬಿಕೆಗಳ ಪ್ರಕಾರ ಕೆಂಪು ದಾರವನ್ನು ಕೈಯಲ್ಲಿ ಧರಿಸುವುದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳಂತೆ. ಇದಲ್ಲದೆ ಬಜರಂಗ ಬಲಿಯ ಅನುಗ್ರಹ ಸಹ ಸಿಗುತ್ತದೆ ಎಂದು ಹೇಳಲಾಗಿದೆ. ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಜಾತಕದಲ್ಲಿ ಮಂಗಳ ಗ್ರಹವೂ ಬಲಗೊಳ್ಳುತ್ತದೆ ಮತ್ತು ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ನಂಬಿಕೆಗಳ ಪ್ರಕಾರ ಕೆಂಪು ದಾರವನ್ನು ಧರಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಹರಿವು ಇರುತ್ತದೆ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: November Born People: ನವೆಂಬರ್‌ನಲ್ಲಿ ಜನಿಸಿದವರ ಗುಣ, ಸ್ವಭಾವಗಳು ಹೀಗಿರುತ್ತವೆ!

ಯಾರು ಕೆಂಪು ದಾರ ಧರಿಸಬಾರದು?

ಕೆಂಪು ದಾರವನ್ನು ಯಾರು ಧರಿಸಬಾರದು ಅನ್ನೋದರ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಶನಿದೇವನಿಗೆ ಕೆಂಪು ದಾರ ಇಷ್ಟವಿಲ್ಲವೆಂದು ನಂಬಲಾಗಿದೆ. ಈ ಕಾರಣಕ್ಕಾಗಿ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಲಾಗುತ್ತದೆ. ಶನಿ ಮಹಾರಾಜನು ಕುಂಭ ಮತ್ತು ಮೀನ ರಾಶಿಯ ಅಧಿಪತಿ. ಹೀಗಾಗಿ ಈ ಎರಡೂ ರಾಶಿಯ ಜನರು ತಮ್ಮ ಕೈಯಲ್ಲಿ ಕೆಂಪು ಬಣ್ಣದ ದಾರ ಧರಿಸಬಾರದು. ಈ ಜನರು ನೀಲಿ ದಾರವನ್ನು ಕಟ್ಟಬೇಕು.

ಯಾರು ಕೆಂಪು ದಾರ ಧರಿಸಬೇಕು?

ವೃಶ್ಚಿಕ, ಸಿಂಹ ಮತ್ತು ಮೇಷ ರಾಶಿಯ ಜನರು ಕೆಂಪು ದಾರವನ್ನು ಕಟ್ಟಿಕೊಳ್ಳಬಹುದು. ಈ ರಾಶಿಯವರಿಗೆ ಕೆಂಪು ದಾರವನ್ನು ಕಟ್ಟುವುದರಿಂದ ಹನುಮಂತನ ಆಶೀರ್ವಾದ ಸಿಗುತ್ತದೆ.

ಇದನ್ನೂ ಓದಿ: Love Horoscope 2023 : 2023 ರ ಹೊಸ ವರ್ಷದಲ್ಲಿ ಈ 5 ರಾಶಿಯವರ ಲವ್, ಮದುವೆ ಪಕ್ಕಾ!

ವೈಜ್ಞಾನಿಕ ಕಾರಣಗಳೇನು?

ಮಣಿಕಟ್ಟಿನಲ್ಲಿ ಕೆಂಪು ದಾರ ಕಟ್ಟಲು ವೈಜ್ಞಾನಿಕ ಕಾರಣಗಳನ್ನೂ ನೀಡಲಾಗಿದೆ. ಇದು ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News