ಟ್ವೀಟರ್ ಬ್ಲೂ ಟಿಕ್ ಬೇಕಾದ್ರೆ ತಿಂಗಳಿಗೆ 8 ಡಾಲರ್ ಪಾವತಿಸಿ! ಮುಂದಿನ ತಿಂಗಳು ಭಾರತದಲ್ಲಿಯೂ ರೂಲ್ಸ್ ಜಾರಿ

ಟ್ವಿಟರ್ ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆಯನ್ನು ಭಾನುವಾರದಿಂದ ಆರಂಭಿಸಿದೆ. ಮುಂದಿನ ತಿಂಗಳು ಭಾರತದಲ್ಲಿಯೂ ಈ ಹೊಸ ರೂಲ್ಸ್ ಜಾರಿಯಾಗಲಿದೆ.

Written by - Puttaraj K Alur | Last Updated : Nov 6, 2022, 12:01 PM IST
  • ಟ್ವಿಟರ್ ಬಳಕೆದಾರರು ಶೀಘ್ರವೇ ಬ್ಲೂ ಟಿಕ್ ಮತ್ತು ವೈಟ್ ಟಿಕ್‍ಗೆ ಹಣ ಪಾವತಿಸಬೇಕು
  • ಮುಂದಿನ ತಿಂಗಳು ಭಾರತದಲ್ಲಿಯೂ ಹೊಸ ರೂಲ್ಸ್ ಜಾರಿಯಾಗಲಿದೆ ಎಂದ ಎಲಾನ್ ಮಸ್ಕ್
  • ಬ್ಲೂ ಟಿಕ್ ಬೇಕಾದರೆ ಬಳಕೆದಾರರು ಪ್ರತಿ ತಿಂಗಳು 8 ಡಾಲರ್ ಪಾವತಿಸಬೇಕಾಗುತ್ತದೆ
ಟ್ವೀಟರ್ ಬ್ಲೂ ಟಿಕ್ ಬೇಕಾದ್ರೆ ತಿಂಗಳಿಗೆ 8 ಡಾಲರ್ ಪಾವತಿಸಿ! ಮುಂದಿನ ತಿಂಗಳು ಭಾರತದಲ್ಲಿಯೂ ರೂಲ್ಸ್ ಜಾರಿ title=
ಮುಂದಿನ ತಿಂಗಳು ಭಾರತದಲ್ಲಿಯೂ ಹೊಸ ರೂಲ್ಸ್ !

ನವದೆಹಲಿ: ಟ್ವೀಟರ್ ಬ್ಲೂ ಟಿಕ್ ಬೇಕಾದ್ರೆ ಇನ್ಮುಂದೆ ನೀವು ಪ್ರತಿ ತಿಂಗಳು 8 ಡಾಲರ್ ಪಾವತಿಸಬೇಕಾಗುತ್ತದೆ. ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆಯನ್ನು ಭಾನುವಾರ(ನ.6)ದಿಂದ ಟ್ವಿಟರ್ ಆರಂಭಿಸಿದೆ. ಮುಂದಿನ ತಿಂಗಳು ಭಾರತದಲ್ಲಿಯೂ ಈ ಹೊಸ ರೂಲ್ಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟ್ವಿಟರ್ ಖರೀದಿಸಿದ ಬೆನ್ನಲ್ಲಿಯೇ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವೀಟ್ ಮಾಡಿ, ಬ್ಲೂ ಟಿಕ್ ಪಡೆಯಲು ಇನ್ಮುಂದೆ ಹಣ ಪಾವತಿಸಬೇಕಾಗುತ್ತದೆ’ ಎಂದು ಘೋಷಿಸಿದ್ದರು. ಆ ನಿಯಮವನ್ನು ಇಂದಿನಿಂದಲೇ ಟ್ವಿಟರ್ ಜಾರಿಗೆ ತರುತ್ತಿದೆ. ಸದ್ಯಕ್ಕೆ ಕೆಲವು ವಯಲಗಳಲ್ಲಿ ಮಾತ್ರ ಈ ಸೇವೆ ಐಫೋನ್‍ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂದಿನಿಂದ ಅಧಿಕೃತವಾಗಿ Twitter ಬ್ಲೂ ಸೇವೆಗೆ ಚಾಲನೆ ನೀಡಿದ ಟ್ವಿಟ್ಟರ್

ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ಗಳಲ್ಲಿ ಈ ಸೇವೆ ಲಭ್ಯವಿರಲಿದೆ. IOS ಆಪರೇಟಿಂಗ್ ಸಿಸ್ಟಮ್‍ಗಳಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್, ‘ಇಂದಿನಿಂದ ನಾವು ಟ್ವಿಟರ್ ಬ್ಲೂ ಟಿಕ್‍ಗೆ ಹೊಸ ಫೀಚರ್‍ಗಳನ್ನು ಸೇರಿಸುತ್ತಿದ್ದೇವೆ. ಶೀಘ್ರವೇ ಬಳಕೆದಾರರಿಗೆ ಹೊಸ ಮತ್ತು ಹೆಚ್ಚಿನ ಫೀಚರ್‍ಗಳನ್ನು ಪಡೆಯಲಿದ್ದಾರೆ. ಸದ್ಯಕ್ಕೆ ನೀವು ಸೈನ್‍ಅಪ್‍ ಮಾಡಿದರೆ ತಿಂಗಳಿಗೆ 7.99 ಡಾಲರ್ ನೀಡಿ ಟ್ವಿಟರ್ ಬ್ಲೂ ಟಿಕ್ ಪಡೆಯಬಹುದು’ ಎಂದು ಹೇಳಿದೆ.

ಟ್ವಿಟರ್ ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆ ಭಾರತದಲ್ಲಿ ಯಾವಾಗ ಜಾರಿಗೆ ಬರಲಿದೆ ಎಂಬ ಬಳಕೆದಾರರಿಗೆ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಮಸ್ಕ್, ‘ಮುಂದಿನ ಒಂದು ತಿಂಗಳೊಳಗೆ ನಾವು ಈ ಸೇವೆಯನ್ನು ಭಾರತದಲ್ಲಿಯೂ ಜಾರಿಗೆ ತರಲಿದ್ದೇವೆ’ ಎಂದು ಹೇಳಿದ್ದಾರೆ. ಆದರೆ ಬ್ಲೂ ಟಿಕ್ ಪಡೆಯಲು ಭಾರತೀಯ ಟ್ವಿಟರ್ ಬಳಕೆದಾರರು ಎಷ್ಟು ಹಣ ಪಾವತಿಸಬೇಕು ಅನ್ನೋ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.  

ಇದನ್ನೂ ಓದಿ: ನೀವು WhatsApp ಬಳಸುತ್ತೀರಾ? ಆಗಿದ್ರೆ ಈ ಸೆಟ್ಟಿಂಗ್‌ಗಳನ್ನು ಈಗಲೇ ಬದಲಾಯಿಸಿ..!

ಟ್ವಿಟರ್ ಹಲವು ಹೊಸ ಫೀಚರ್ಸ್‍ಗಳನ್ನು ಪರಿಚಯಿಸಲಿದ್ದು, ಇವು ಗ್ರಾಹಕಸ್ನೇಹಿಯಾಗಿ ಇರಲಿವೆ ಎಂದು ಹೇಳಿದೆ. ಫೋಟೋ, ವಿಡಿಯೋ ಸೇರಿದಂತೆ ಮಾಹಿತಿ ಹಂಚಿಕೊಳ್ಳುವ ಪೋಸ್ಟ್‍ಗಳಲ್ಲಿ ನಾವು ಹಲವಾರು ಸುಧಾರಣೆ ಮಾಡಿದ್ದೇವೆಂದು ಟ್ವಿಟರ್ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News