ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ನವೆಂಬರ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಜಪಾನಿನ ಕಾರು ತಯಾರಕ ಕಂಪನಿಯು ತನ್ನ ವಾಹನಗಳ ಮೇಲೆ 63,000 ರೂ. ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ನವೆಂಬರ್ 30ರವರೆಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ. ಹೋಂಡಾ ಸಿಟಿ, ಅಮೇಜ್, WR-V ಮತ್ತು ಜಾಝ್ ಕಾರುಗಳ ಮೇಲೆ ನಿಮಗೆ ರಿಯಾಯಿತಿ ದೊರೆಯಲಿದೆ. ಹೋಂಡಾ ಸಿಟಿಯ ಹೈಬ್ರಿಡ್ ಮಾದರಿಯಲ್ಲಿ ಯಾವುದೇ ಕೊಡುಗೆ ಇಲ್ಲದಿದ್ದರೂ ಇವುಗಳೆಲ್ಲದರ ಮೇಲೆಯೂ ಆಫರ್‌ಗಳಿವೆ.
Honda WR-V
ಹೋಂಡಾ ತನ್ನ WR-V ಕ್ರಾಸ್‌ಒವರ್‌ನಲ್ಲಿ 30,000 ರೂ. ನಗದು ರಿಯಾಯಿತಿ ನೀಡುತ್ತಿದೆ. ಗ್ರಾಹಕರು ನಗದು ಆಫರ್ ಬೇಡವೆಂದರೆ 36,144 ರೂ.ಮೌಲ್ಯದ ಬಿಡಿಭಾಗಗಳನ್ನು ಉಚಿತವಾಗಿ ತೆಗೆದುಕೊಳ್ಳಬಹುದು. ಇದರ ಹೊರತಾಗಿ ಗ್ರಾಹಕರು ತಮ್ಮ ಬಳಸಿದ ಕಾರನ್ನು ವಿನಿಮಯ ಮಾಡಿಕೊಂಡರೆ 7,000 ರೂ.ಗಳ ವಿನಿಮಯ ಬೋನಸ್ ಜೊತೆಗೆ 10,000 ರೂ.ಗಳ ರಿಯಾಯಿತಿ ಪಡೆಯುತ್ತಾರೆ. 5 ಸಾವಿರ ರೂ. ಲಾಯಲ್ಟಿ ಬೋನಸ್ ಮತ್ತು 5 ಸಾವಿರ ರೂ. ಕಾರ್ಪೊರೇಟ್ ಕೊಡುಗೆಯನ್ನು ಸಹ ಕಂಪನಿಯು ನೀಡುತ್ತಿದೆ.
ಇದನ್ನೂ ಓದಿ: FD ಹಣಕ್ಕೆ ಶೇ.7 ಕ್ಕಿಂತ ಹೆಚ್ಚು ಬಡ್ಡಿ ಸಿಗಲಿದೆ, ಈ 4 ಸರ್ಕಾರಿ ಬ್ಯಾಂಕ್‌ಗಳಲ್ಲಿ!
New Honda City (5th Generation)
ಹೋಂಡಾ ಕಾರ್ ಇಂಡಿಯಾ ತನ್ನ ಅತ್ಯುತ್ತಮ ಸೇಲ್ಸ್ ಹೊಂದಿರುವ ಸೆಡಾನ್ ಸಿಟಿಯ ಮೇಲೆ 60 ಸಾವಿರ ರೂ.ವರೆಗಿನ ಕೊಡುಗೆಗಳನ್ನು ನೀಡುತ್ತಿದೆ. ಇದು 5 ಸಾವಿರ ರೂ. ಕಾರ್ಪೊರೇಟ್ ಬೋನಸ್ ಮತ್ತು 30 ಸಾವಿರ ರೂ.ವರೆಗಿನ ನಗದು ರಿಯಾಯಿತಿಯನ್ನು ಒಳಗೊಂಡಿದೆ. ಇದಲ್ಲದೇ ಹಳೆಯ ಕಾರನ್ನು ಬದಲಾಯಿಸಿದರೆ 10,000 ರೂ.ಗಳ ರಿಯಾಯಿತಿಯೊಂದಿಗೆ 7,000 ರೂ.ಗಳ ವಿನಿಮಯ ಬೋನಸ್ ಸಹ ಇರುತ್ತದೆ. ಇದರ ಮೇಲೆ 5,000 ರೂ. ಲಾಯಲ್ಟಿ ಬೋನಸ್ ಕೂಡ ಸಿಗುತ್ತದೆ.
Honda Amaze
ಹೋಂಡಾ ಅಮೇಜ್ ಸಬ್-ಕಾಂಪ್ಯಾಕ್ಟ್ ಸೆಡಾನ್ ಅನ್ನು 10 ಸಾವಿರ ರೂ. ನಗದು ರಿಯಾಯಿತಿ ಜೊತೆಗೆ 3 ಸಾವಿರ ರೂ. ಕಾರ್ಪೊರೇಟ್ ಬೋನಸ್ ಮತ್ತು 5 ಸಾವಿರ ರೂ. ಲಾಯಲ್ಟಿ ಬೋನಸ್‌ನೊಂದಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮೂರು ಅಗ್ಗದ ಸಿಎನ್ ಜಿ ಕಾರು ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
Honda Jazz
ಹೋಂಡಾ ತನ್ನ ಜಾಝ್ ಕಾರಿನ ಮೇಲೆ ಯಾವುದೇ ನೇರ ನಗದು ರಿಯಾಯಿತಿ ನೀಡುತ್ತಿಲ್ಲ. ಆದರೆ ಗ್ರಾಹಕರು ಬಳಸಿದ ಕಾರನ್ನು ಎಕ್ಸ್‍ಚೇಂಜ್ ಮಾಡಿಕೊಂಡರೆ 10 ಸಾವಿರ ರೂ.ಗಳ ರಿಯಾಯಿತಿ ಮತ್ತು 7 ಸಾವಿರ ರೂ.ಗಳ ವಿನಿಮಯ ಬೋನಸ್ ಪಡೆಯುತ್ತಾರೆ. 3 ಸಾವಿರ ರೂ. ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿ ಮತ್ತು 5 ಸಾವಿರ ರೂ. ಲಾಯಲ್ಟಿ ಬೋನಸ್ ಸಹ ಸಿಗುತ್ತದೆ.
Honda City (4th Generation)
4ನೇ ತಲೆಮಾರಿನ ಹೋಂಡಾ ಸಿಟಿಯ ಮೇಲೆ ಕೇವಲ 5 ಸಾವಿರ ರೂ. ಲಾಯಲ್ಟಿ ಬೋನಸ್‌ನೊಂದಿಗೆ ನೀಡಲಾಗುತ್ತಿದೆ. ಆದರೆ Honda City e: HEV Hybrid ಮೇಲೆ ಯಾವುದೇ ರಿಯಾಯಿತಿ ಕೊಡುಗೆ ನೀಡುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.