ಮನೆಯಲ್ಲಿರುವ ಈ ಕೊರತೆಗಳನ್ನು ಇಂದೇ ಸರಿಮಾಡಿಕೊಳ್ಳಿ.! ಇಲ್ಲವಾದರೆ ಕಾಡುವುದು ವಾಸ್ತು ದೋಷ


ವಾಸ್ತು ದೋಷಗಳನ್ನು ಸಮಯಕ್ಕೆ  ಸರಿಯಾಗಿ ಸರಿ ಮಾಡುವುದು ಸೂಕ್ತ.  

Vastu Tips : ಮನೆಯಲ್ಲಿ ವಾಸ್ತು ದೋಷವಿದ್ದರೆ ಎಷ್ಟೇ ಕಷ್ಟಪಟ್ಟರೂ ಐಶ್ವರ್ಯ ಬರುವುದಿಲ್ಲ. ಎಷ್ಟೇ ದುಸಿದರು ಕೈಯಲ್ಲಿ ಹಣ ಉಳಿಯುವುದಿಲ್ಲ. ಮನೆಯಲ್ಲಿ ಯಾವುದಾದರೊಂದು ಕಾರಣಕ್ಕೆ ಜಗಳ, ಕದನ ಮನಸ್ತಾಪ ನಡೆಯುತ್ತಲೇ ಇರುತ್ತದೆ. ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈ ವಾಸ್ತು ದೋಷಗಳನ್ನು ಸಮಯಕ್ಕೆ  ಸರಿಯಾಗಿ ಸರಿ ಮಾಡುವುದು ಸೂಕ್ತ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜೇನುನೊಣಗಳು ಸಾಮಾನ್ಯವಾಗಿ ಮನೆಗಳಲ್ಲಿ ಜೇನುಗೂಡುಗಳನ್ನು  ಕಟ್ಟುತ್ತವೆ. ಅನೇಕರು ಅವುಗಳನ್ನು ತೆಗೆದುಹಾಕುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಜೇನುಗೂಡು ಇರುವುದು ಮಂಗಳಕರವಲ್ಲ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಅದೇ ರೀತಿ ಬಾವಲಿಗಳು ಮನೆಯೊಳಗೆ ಬರುವುದು ಕೂಡಾ ಅಶುಭ.   

2 /5

ಮನೆಯ ಗೋಡೆಗಳ ಮೇಲೆ ಚಿತ್ರ ಮತ್ತು ವಿಗ್ರಹಗಳನ್ನು ಅಂಟಿಸಬಾರದು. ಇದು ಭಯಾನಕ ವಾಸ್ತು ದೋಷವನ್ನು ತರುತ್ತದೆ ಎನ್ನಲಾಗಿದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಇನ್ನು ದೇವರ ದೊಡ್ಡ ಪ್ರತಿಮೆಯನ್ನು ಮನೆಯಲ್ಲಿ ಇಡಬಾರದು. 

3 /5

ಮನೆಯಲ್ಲಿ ಅಡುಗೆ ಮನೆಯಲ್ಲಿ ಇಟ್ಟಿರುವ ಒಲೆ ಮುಖ್ಯ ಬಾಗಿಲಿಗೆ ಕಾಣಿಸದ ರೀತಿಯಲ್ಲಿ  ಇರಬೇಕು. ಇಲ್ಲವಾದರೆ ಮನೆಯ ಶ್ರೇಯಸ್ಸು ದೂರವಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಆಹಾರವನ್ನು ತಯಾರಿಸುವಾಗ, ಗೃಹಿಣಿಯು ಪೂರ್ವಕ್ಕೆ ಮುಖ ಮಾಡಬೇಕು. ರಾತ್ರಿಯಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಹಾಗೆಯೇ ಬಿಡಬೇಡಿ.

4 /5

ಮನೆಯ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಬಾರದು. ಈ ಸ್ಥಳದಲ್ಲಿ ಶೌಚಾಲಯವಿದ್ದರೆ ಹಣ ನಷ್ಟವಾಗುತ್ತದೆ. ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಿದ ಕೊಠಡಿಯನ್ನು ಬಾಡಿಗೆಗೆ ನೀಡಬಾರದು. 

5 /5

ಮನೆಯ ಕಿಟಕಿಗಳು ಒಳಮುಖವಾಗಿ ತೆರೆಯಬೇಕು. ಹೊರಕ್ಕೆ ತೆರೆದುಕೊಳ್ಳುವ ಕಿಟಕಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಮನೆಯ ಯಾವುದೇ ಬಾಗಿಲು ಸದ್ದು ಮಾಡಿದರೆ, ತಕ್ಷಣ ಅದನ್ನು ಸರಿಪಡಿಸಿ.   ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)