ನವದೆಹಲಿ: ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರ ಹೊಸ 8 ಡಾಲರ್ ನ ಟ್ವಿಟ್ಟರ್ ಚಂದಾದಾರಿಕೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಬಿರುಗಾಳಿಯನ್ನೇ ಸೃಷ್ಟಿಸಿದೆ. ಹೌದು ಈಗ ಇದರಿಂದಾಗಿಯೇ ಹಲವಾರು ನಕಲಿ ಖಾತೆಗಳಿಗೂ ಅಧಿಕೃತ ಮುದ್ರೆ ಬಿದ್ದ ನಂತರ ಹಲವಾರು ಕಂಪನಿಗಳು ತೀವ್ರ ನಷ್ಟವನ್ನು ಅನುಭವಿಸಿವೆ.
Did Twitter Blue tweet just cost Eli Lilly $LLY billions?
Yes. pic.twitter.com/w4RtJwgCVK
— Rafael Shimunov is on Mastodon (@rafaelshimunov) November 11, 2022
ಅಮೇರಿಕನ್ ಔಷಧೀಯ ದೈತ್ಯ ಎಲಿ ಲಿಲ್ಲಿ (LLY) ಹೆಸರಿನಲ್ಲಿ ನಕಲಿ ಖಾತೆಯ ಮೂಲಕ ಇನ್ಸುಲಿನ್ ಇನ್ನೂ ಮುಂದೆ ಉಚಿತ ಎಂದು ಟ್ವೀಟ್ ಮಾಡಲಾಯಿತು. ಈ ಟ್ವೀಟ್ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ದಿ ಸ್ಟಾರ್ ಪ್ರಕಾರ, ಕಂಪನಿಯ ಷೇರುಗಳು ಶುಕ್ರವಾರದಂದು ಶೇಕಡಾ 4.37 ರಷ್ಟು ಕುಸಿದವು. ಅಂದರೆ ಮಾರುಕಟ್ಟೆಯಲ್ಲಿ ಸುಮಾರು 15 ಬಿಲಿಯನ್ ಡಾಲರ್ ನನ್ನು ಕಳೆದುಕೊಂಡಿದೆ. ಇದಾದ ನಂತರ ಎಲಿ ಲಿಲ್ಲಿ ತನ್ನ ನೈಜ ಖಾತೆಯಿಂದ ಸ್ಪಷ್ಟನೆ ನೀಡಿತು.
ಎಲೋನ್ ಮಸ್ಕ್ ಟ್ವಿಟರ್ ಬ್ಲೂಗಾಗಿ ತನ್ನ ಹೊಸ ಚಂದಾದಾರಿಕೆ ಮಾರ್ಗಸೂಚಿಗಳನ್ನು ಘೋಷಿಸಿದಾಗಿನಿಂದ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿ ತೀವ್ರಗೊಂಡಿದೆ.ಇದನ್ನು ತಪ್ಪಿಸಲು ಈಗ ಅದು ಬೂದು ಬಣ್ಣದ OFFICAL ಮುದ್ರೆಯನ್ನು ಪ್ರಮುಖ ವ್ಯಕ್ತಿ ಹಾಗೂ ಕಂಪನಿಗಳ ಖಾತೆಗೆ ನೀಡುತ್ತಿದೆ.
We apologize to those who have been served a misleading message from a fake Lilly account. Our official Twitter account is @LillyPad.
— Eli Lilly and Company (@LillyPad) November 10, 2022
ಎಲೋನ್ ಮಸ್ಕ್ ಟ್ವಿಟ್ಟರ್ ಸ್ವಾಧಿನಪಡಿಸಿಕೊಳ್ಳುವ ಮೊದಲು ಬ್ಲೂ ಟಿಕ್ ರಾಜಕಾರಣಿಗಳು, ಪ್ರಸಿದ್ಧ ವ್ಯಕ್ತಿಗಳು, ಪತ್ರಕರ್ತರು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಕಂಪನಿಗಳಿಗೆ ಮಾತ್ರ ಲಭ್ಯವಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.