Haripriya Nose piercing video : ಹರಿಪ್ರಿಯಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿಯೂ ತಮ್ಮ ನಟನೆಯ ಮೂಲಕ ಎಲ್ಲರ ಮನಸೆಳೆದವರು. ನಟಿ ಹರಿಪ್ರಿಯಾ ತಮ್ಮ ಲುಕ್ ಮೂಲಕವೇ ಅಭಿಮಾನಿಗಳ ದಿಲ್ ಕದ್ದವರು. ಕಳೆದೊಂದು ದಶಕದಿಂದ ಎಲ್ಲಾ ಸಿನಿಮಾಗಳಲ್ಲಿಯೂ ಸವಾಲು ಎನಿಸುವ ಪಾತ್ರಗಳನ್ನು ನೀರು ಕುಡಿದಷ್ಟು ಸಲೀಸಾಗಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳು ಕಳೆದಿವೆ. 31 ವಯಸ್ಸಿನ ಹರಿಪ್ರಿಯಾ ಈಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರ ತಲೆಯಲ್ಲೂ ಅನುಮಾನವೊಂದು ಕಾಡಲಾರಂಭಿಸಿದೆ.
ಇದನ್ನೂ ಓದಿ : ಒಂದು ಕಿಸ್ನಿಂದ ಶುರುವಾಗಿದ್ದಂತೆ ದೀಪಿಕಾ - ರಣವೀರ್ ಪ್ರೇಮ ಕಹಾನಿ
ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ಈ ವಿಡಿಯೋದಲ್ಲಿ ಹಿಂದೆ ಮಂತ್ರಘೋಷಗಳ ಸದ್ದು ಕೇಳುತ್ತದೆ. ಸೀರೆಯುಟ್ಟು ಟ್ರೆಡಿಷನಲ್ ಆಗಿ ರೆಡಿಯಾಗಿ ಕುಳಿತ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದಾರೆ. ದಪ್ಪ ಸೂಜಿಯಿಂದ ಮೂಗು ಚುಚ್ಚುವಾಗ ಆದ ನೋವನ್ನು ಸಹ ಈ ವಿಡಿಯೋದದಲ್ಲಿ ಕಾಣಬಹುದು. ಈ ನೋವು ಹರಿಪ್ರಿಯಾ ಮುಖದಲ್ಲಿ ಎದ್ದು ಕಾಣುತ್ತದೆ. ಕಂಗಳು ಹನಿಗೂಡಿವೆ. ಸೌಂದರ್ಯದ ಒಡತಿ ಹರಿಪ್ರಿಯಾ ಅವರ ಅಂದವನ್ನು ಮೂಗುತಿ ಮತ್ತಷ್ಟು ಹೆಚ್ಚಿಸಿದೆ. ಮೂಗುತಿಯ ವಿಡಿಯೋ ಜೊತೆ ಹರಿಪ್ರಿಯಾ, "ಬದುಕಲ್ಲಿ ಬದಲಾವಣೆ ಆಗ್ತಾನೆ ಇರುತ್ತೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೇನೆ. ಆದರೆ ಅದು ರೀಲ್. ಈಗ ಕಾಣುತ್ತಿರುವುದು ರಿಯಲ್. ನನಗೆ ಈ ಕ್ಷಣ ತುಂಬಾ ಖುಷಿ ಕೊಟ್ಟಿದೆ" ಎಂದು ಬರೆದುಕೊಂಡಿದ್ದಾರೆ.
ಮದುವೆಯ ಹೊತ್ತಿಗೆ ಮೂಗು ಚುಚ್ಚಿಸಿಕೊಳ್ಳುವ ಸಂಪ್ರದಾಯ ಅನೇಕ ಕಡೆಗಳಲ್ಲಿ ಇರುವ ಕಾರಣ ಹರಿಪ್ರಿಯಾ ಅವರ ಈ ವೀಡಿಯೋ ನೋಡಿದ ಅನೇಕರಿಗೆ ಮದುವೆ ಆಗ್ತಿದ್ದಾರೆಯೇ ಎಂಬ ಕುತೂಹಲ ಕಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ಗೆ ಕಡಲವರು ಹರಿಪ್ರಿಯಾ ಮದುವೆಗೋಸ್ಕರವೇ ಮೂಗು ಚುಚ್ಚಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಮದುವೆ ಬಗ್ಗೆ ಹರಿಪ್ರಿಯಾ ಮಾತ್ರ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ : ರಾಗಿಣಿ ದ್ವಿವೇದಿಯ ‘ಬಿಂಗೊ’ ಸಿನಿಮಾಗೆ ಸಚಿವ ವಿ.ಸೋಮಣ್ಣ ಕ್ಲಾಪ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.