Superstar Krishna Passes Away: ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ವಿಧಿವಶ

Legendary actor Superstar Krishna passes away: ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಬೆಳಗಿನ ಜಾವ ಎರಡು ಗಂಟೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಕೃಷ್ಣ ಅವರ ಆರೋಗ್ಯ ಚಿಂತಾಜನಕವಾಗಿದ್ದು, 48 ಗಂಟೆಗಳವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.

Written by - Yashaswini V | Last Updated : Nov 16, 2022, 06:17 PM IST
  • ಮೇ 31, 1942 ರಂದು ಜನಿಸಿದ ಕೃಷ್ಣ ಅವರು 1965 ರಲ್ಲಿ 'ತೇನೆ ಮನಸುಲು' ಚಿತ್ರದ ಮೂಲಕ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು.
  • ಅವರು ಪೌರಾಣಿಕ, ನಾಟಕ, ಪಾಶ್ಚಾತ್ಯ, ಫ್ಯಾಂಟಸಿ, ಆಕ್ಷನ್, ಪತ್ತೇದಾರಿ ಮತ್ತು ಐತಿಹಾಸಿಕ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
  • ಒಟ್ಟಾರೆಯಾಗಿ, ಐದು ದಶಕಗಳ ವೃತ್ತಿಜೀವನದಲ್ಲಿ, ಕೃಷ್ಣ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Superstar Krishna Passes Away: ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ವಿಧಿವಶ  title=
Telugu actor krishna death

Super Star Krishna Passed Away: ಖ್ಯಾತ ಟಾಲಿವುಡ್  ಸೂಪರ್ ಸ್ಟಾರ್ ಕೃಷ್ಣ ಮಂಗಳವಾರ ಬೆಳಗ್ಗೆ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಹೃದಯಾಘಾತದಿಂದ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ವೈದ್ಯರು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು.  ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಕಾಂಟಿನೆಂಟಲ್ ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಿಸಿದೆ. 

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಬೆಳಗಿನ ಜಾವ ಎರಡು ಗಂಟೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಕೃಷ್ಣ ಅವರ ಆರೋಗ್ಯ ಚಿಂತಾಜನಕವಾಗಿದ್ದು, 48 ಗಂಟೆಗಳವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.  ಇದೀಗ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ  ಕೃಷ್ಣ ಅವರು ಮಂಗಳವಾರ ನಸುಕಿನ ಜಾವದಲ್ಲಿ ಕೊನೆಯುಸಿರೆಳೆದಿದ್ದಾರೆ. 79 ವರ್ಷ ವಯಸ್ಸಿನವರಾಗಿದ್ದ ಕೃಷ್ಣ ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರ ಮಗ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು .

ನಟ ಮಹೇಶ್‌ ಬಾಬು ತಂದೆ ಆಸ್ಪತ್ರೆಗೆ ದಾಖಲು : ಆರೋಗ್ಯ ಸ್ಥಿತಿ ಚಿಂತಾಜನಕ...!

ಇದನ್ನೂ ಓದಿ- ನಟ ಮಹೇಶ್‌ ಬಾಬು ತಂದೆ ಆಸ್ಪತ್ರೆಗೆ ದಾಖಲು : ಆರೋಗ್ಯ ಸ್ಥಿತಿ ಚಿಂತಾಜನಕ...!​

ಮೇ 31, 1942 ರಂದು ಜನಿಸಿದ ಕೃಷ್ಣ ಅವರು 1965 ರಲ್ಲಿ 'ತೇನೆ ಮನಸುಲು' ಚಿತ್ರದ ಮೂಲಕ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಅವರು ಪೌರಾಣಿಕ, ನಾಟಕ, ಪಾಶ್ಚಾತ್ಯ, ಫ್ಯಾಂಟಸಿ, ಆಕ್ಷನ್, ಪತ್ತೇದಾರಿ ಮತ್ತು ಐತಿಹಾಸಿಕ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಒಟ್ಟಾರೆಯಾಗಿ, ಐದು ದಶಕಗಳ ವೃತ್ತಿಜೀವನದಲ್ಲಿ, ಕೃಷ್ಣ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. 2009 ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ- ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ತಡೆಹಿಡಿದ ಪೊಲೀಸರು...!

ಈ ವರ್ಷ ಸೂಪರ್‌ಸ್ಟಾರ್ ಕೃಷ್ಣ ಅವರ ಕುಟುಂಬದಲ್ಲಿ ಇದು ಮೂರನೇ ಸಾವು, ಅವರ ಹಿರಿಯ ಮಗ ರಮೇಶ್ ಬಾಬು ಜನವರಿ 2022 ರಲ್ಲಿ ನಿಧನರಾದರು ಮತ್ತು ಕೃಷ್ಣ ಅವರ ಮೊದಲ ಪತ್ನಿ ಇಂದಿರಾ ದೇವಿ ಸೆಪ್ಟೆಂಬರ್ 28 ರಂದು ನಿಧನರಾದರು. ಕೃಷ್ಣ ಅವರು ನವೆಂಬರ್ 15 ರಂದು ಮುಂಜಾನೆ 4 ಗಂಟೆಗೆ ನಿಧನರಾದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News