ಕೇವಲ 3,999 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಬೈಕ್-ಸ್ಕೂಟರ್ , ಜೊತೆಗೆ ಸಿಗಲಿದೆ 5000 ರೂ. ಕ್ಯಾಶ್‌ಬ್ಯಾಕ್

Honda November 2022 Offer:ಈ ಆಫರ್ ಅಡಿಯಲ್ಲಿ ಕೇವಲ 3999 ರೂಪಾಯಿ ಪಾವತಿಸಿ ಹೋಂಡಾ ಬೈಕ್ ಅಥವಾ ಸ್ಕೂಟರ್ ಅನ್ನು ಖರೀದಿಸಬಹುದು. ಅಂದರೆ, ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು.    

Written by - Ranjitha R K | Last Updated : Nov 21, 2022, 01:27 PM IST
  • ಹೋಂಡಾ ಉತ್ತಮ ಆಫರ್ ಘೋಷಿಸಿದೆ.
  • ಕೇವಲ 3999 ರೂಪಾಯಿ ಪಾವತಿಸಿ ಹೋಂಡಾ ಬೈಕ್ ಖರೀದಿಸಿ
  • ಹೊಂಡಾ ನೀಡುತ್ತಿರುವ ಆಫರ್ ಯಾವುದು ?
ಕೇವಲ  3,999 ರೂಪಾಯಿಗೆ  ಮನೆಗೆ ತನ್ನಿ ಹೋಂಡಾ ಬೈಕ್-ಸ್ಕೂಟರ್ , ಜೊತೆಗೆ ಸಿಗಲಿದೆ  5000 ರೂ. ಕ್ಯಾಶ್‌ಬ್ಯಾಕ್  title=
Honda Bike and Scooter

Honda November 2022 Offer :  Hero MotoCorp ದೇಶದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿದೆ. ಜಪಾನ್‌ನ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್‌ಗಳು ಹಿರೋ  ಮೋಟೋ  ಕಾರ್ಪ್ ಗೆ ಭಾರೀ ಸ್ಪರ್ಧೆ ನೀಡುತ್ತದೆ.  ಇದೀಗ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹೋಂಡಾ  ಉತ್ತಮ ಆಫರ್  ಘೋಷಿಸಿದೆ. ಈ ಆಫರ್ ಅಡಿಯಲ್ಲಿ ಕೇವಲ 3999 ರೂಪಾಯಿ ಪಾವತಿಸಿ ಹೋಂಡಾ ಬೈಕ್ ಅಥವಾ ಸ್ಕೂಟರ್ ಅನ್ನು ಖರೀದಿಸಬಹುದು. ಅಂದರೆ, ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು.  

ಹೊಂಡಾ ನೀಡುತ್ತಿರುವ ಆಫರ್ ಯಾವುದು ? : 
ಕಂಪನಿಯು ತನ್ನ ದ್ವಿಚಕ್ರ ವಾಹನಗಳನ್ನು ಸುಲಭ ಕಂತುಗಳಲ್ಲಿ ಮತ್ತು ಡೌನ್ ಪೇಮೆಂಟ್‌ನಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶವನ್ನು ನೀಡುತ್ತಿದೆ. ಆಫರ್ ಅಡಿಯಲ್ಲಿ,  ಕೇವಲ 3,999  ರೂಪಾಯಿ ಡೌನ್‌ಪೇಮೆಂಟ್ ಪಾವತಿಸುವ ಮೂಲಕ ದ್ವಿಚಕ್ರ ವಾಹನಗಳನ್ನು  ಖರೀದಿಸಬಹುದು. ಇದರೊಂದಿಗೆ ಕಂಪನಿಯು 7.99% ಆರಂಭಿಕ ಬಡ್ಡಿ ಮತ್ತು ಕ್ಯಾಶ್‌ಬ್ಯಾಕ್ ಸೌಲಭ್ಯವನ್ನು ಸಹ ನೀಡುತ್ತಿದೆ. 

ಇದನ್ನೂ ಓದಿ : ಹೋಳಿ ಹಬ್ಬದ ಹಿನ್ನೆಲೆಯಲ್ಲಿ 2 ಉಚಿತ ಗ್ಯಾಸ್ ಸಿಲಿಂಡರ್ ವಿತರಣೆಗೆ ಸರ್ಕಾರ ನಿರ್ಧಾರ .!

ಈ ಆಫರ್ ಅಡಿಯಲ್ಲಿ ನೀಡಲಾಗುವ ಕ್ಯಾಶ್‌ಬ್ಯಾಕ್ ಪಡೆಯಲು, ಕನಿಷ್ಟ 30,000 ರೂಪಾಯಿ ವಹಿವಾಟು ಮಾಡಬೇಕು. ಇದಕ್ಕಾಗಿ ಕಂಪನಿಯು ಸ್ಟಾಂಡರ್ಡ್ ಚಾರ್ಟರ್ಡ್, ಫೆಡರಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಒನ್ ಕಾರ್ಡ್ ಮುಂತಾದ ಕಂಪನಿಗಳೊಂದಿಗೆ  ಪಾರ್ಟ್ನರ್ ಶಿಪ್ ಮಾಡಿಕೊಂಡಿದೆ. ಆಯ್ದ ಡೀಲರ್‌ಶಿಪ್‌ಗಳಲ್ಲಿ ಈ ಕೊಡುಗೆಗಳು ಲಭ್ಯವಿರುತ್ತವೆ. ಆದರೆ ನೆನಪಿರಲಿ, ಈ ಆಫರ್ ನ ಲಾಭವನ್ನು  ನವೆಂಬರ್ 30 ರವರೆಗೆ ಮಾತ್ರ ತೆಗೆದುಕೊಳ್ಳಬಹುದು. 

ಅಕ್ಟೋಬರ್‌ನಲ್ಲಿ ಎಷ್ಟು ವಾಹನಗಳ ಮಾರಾಟ :
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಅಕ್ಟೋಬರ್ 2022 ರಲ್ಲಿ 4,49,391 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಮಾರಾಟದಲ್ಲಿ 3.9 ರಷ್ಟು ಹೆಚ್ಚಳವಾಗಿದೆ. ಕಂಪನಿಯ ಹೋಂಡಾ ಆಕ್ಟಿವಾ ದೇಶದಲ್ಲೇ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. 

ಇದನ್ನೂ ಓದಿ : 2023ರಲ್ಲಿ ಸರ್ಕಾರಿ ನೌಕರರಿಗೆ ಬಂಪರ್ ! 3 ಪ್ರಮುಖ ಬೇಡಿಕೆಗಳಿಗೆ ಬೀಳಲಿದೆ ಮುದ್ರೆ .! ವೇತನವಾಗುವುದು ಡಬಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News