ಬೆಂಗಳೂರು: ಮೆಡಿಕಲ್ ಮಾಫಿಯಾ ಸುತ್ತ ನಡೆಯುವ ಕಥಾಹಂದರ ಹೊಂದಿರುವ "DR56" ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿ ಅವರು, ‘ಚಿತ್ರದ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದರು.
ಚತುರ್ಭಾಷಾ ಕಲಾವಿದೆ ಪ್ರಿಯಾಮಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ರೆಡ್ಡಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿ 4 ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಮಾತನಾಡಿ, ‘ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಈ ಚಿತ್ರ ಖಂಡಿತ ಶತದಿನೋತ್ಸವ ಆಚರಿಸಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ʼದಾಸʼನ ದರ್ಬಾರ್ಗೆ 19 ವರ್ಷ : DBoss ರಕ್ತಸಿಕ್ತ ಚರಿತ್ರೆ ಇಂದಿಗೂ ಫೇಮಸ್ ..!
ನಿರ್ದೇಶಕ ರಾಜೇಶ್ ಆನಂದ್ ಲೀಲಾ ಮಾತನಾಡಿ, ‘ನಿರ್ಮಾಪಕ ಪ್ರವೀಣ್ ರೆಡ್ಡಿ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು ಚಿನ್ನದ ಕಳಸವಿದ್ದಂತೆ, ಮೆಡಿಕಲ್ ಮಾಫಿಯಾದ ಸುತ್ತ ಸಾಗುವ ಸೈನ್ಸ್ ಫಿಕ್ಷನ್ ಕತೆ ಇದಾಗಿದೆ. ಈವರೆಗೂ ಇದನ್ನು ಯಾರೂ ತೆರೆಮೇಲೆ ತರುವ ಪ್ರಯತ್ನ ಮಾಡಿಲ್ಲ. ಇದನ್ನು ನೋಡಿ ವೀಕ್ಷಕರಿಗೂ ಆಶ್ಚರ್ಯವಾಗುತ್ತದೆ’ ಎಂದು ಹೇಳಿದರು.
ನಟಿ ಪ್ರಿಯಾಮಣಿ ಮಾತನಾಡಿ, ‘ನಾನು ಮೊದಲು ಕಥೆ ಕೇಳಿದಾಗ ನೀವು ಹೇಳಿದ ಹಾಗೆ ಸಿನಿಮಾ ಮಾಡಿದ್ರೆ ಹಿಟ್ ಆಗಲಿದೆ ಎಂದು ಹೇಳಿದ್ದೆ. ಚಿತ್ರದ ಮೂಲಕ ಒಂದೊಳ್ಳೆ ಸಂದೇಶವನ್ನು ಹೇಳಲಾಗಿದೆ. ಕಥೆಯೇ ಪವರ್ ಹೌಸ್ ಹೊರತು ನಾನಲ್ಲ’ ಎಂದು ಹೇಳಿದರು.
ನಟ, ನಿರ್ಮಾಪಕ ಪ್ರವೀಣ್ ರೆಡ್ಡಿ ಮಾತನಾಡಿ, ‘DR56 ಕಥೆ ಸಿದ್ಧಪಡಿಸಿ ಸಿನಿಮಾ ಮಾಡಲು ಮುಂದಾದೆವು. ಪ್ರಿಯಾಮಣಿ ಅವರು ಕಥೆ ಕೇಳಿ ಸುಮ್ಮನೆ ಇದ್ದರು. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅಂತಾ ನನಗೆ ಅನ್ನಿಸಿತ್ತು. ನಂತರ ಒಪ್ಪಿದರು. ಅವರಿಲ್ಲದಿದ್ದರೆ, ಈ ಸಿನಿಮಾವನ್ನು ಎಲ್ಲಾ ಕಡೆ ತಲುಪಿಸಲು ಆಗುತ್ತಿರಲಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಜಾಕ್ ಮಂಜು ಸಜ್ಜು! ಇರಲಿದೆ ಹಾಲಿವುಡ್ ತಾರಾಗಣ?
ನಟ ರೂಪೇಶ್ ಕುಮಾರ್ ಮಾತನಾಡಿ, ‘ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ. ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದರು. ಸಂಚಿತ್ ಫಿಲಂಸ್ ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು, 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗೆಯಾಗಲಿದೆ ಎಂದು ಮಾಹಿತಿ ನೀಡಿದರು. ಛಾಯಾಗ್ರಾಹಕ ರಾಕೇಶ್ ಸಿ.ತಿಲಕ್, ಸಂಕಲನಕಾರ ವಿಶ್ವ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.