Aries People's Personality : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ. ಅವರ ಈ ವ್ಯಕ್ತಿತ್ವವೇ ಅವರಿಗೆ ಅದೃಷ್ಟ ತಂದು ಕೊಡುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ. ಹಾಗಾಗಿಯೇ ಈ ರಾಶಿಯವರು ಧೈರ್ಯ, ಶಕ್ತಿಯಿಂದ ಮುನ್ನುಗ್ಗುತ್ತಾರೆ. ಈ ರಾಶಿಯವರದ್ದು ಮಗುವಿನಂಥಹ ಮನಸ್ಸು. ಈ ಕಾರಣಕ್ಕಾಗಿಯೇ ಅವರು ಜನರನ್ನು ತಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ.
ಸ್ವತಂತ್ರವಾಗಿ ಆಲೋಚಿಸುತ್ತಾರೆ ಈ ರಾಶಿಯವರು :
ಮೇಷ ರಾಶಿಯ ಜನರು ಸ್ವತಂತ್ರವಾಗಿ ಯೋಚಿಸುತ್ತಾರೆ. ಅವರು ಸ್ವಭಾವತಃ ತುಂಬಾ ಸ್ನೇಹಪರರು. ಯಾವುದೇ ರೀತಿಯ ಅಪಾಯಕ್ಕೆ ಹೆದರಿ ಹಿಡಿದ ಕೆಲಸದಿಂದ ಹಿಂದೆ ಸರಿಯುವುದಿಲ್ಲ. ಈ ರಾಶಿಯವರು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಾರೆ. ಬಹಳ ಬೇಗ ಬೇಸರಗೊಳ್ಳುತ್ತಾರೆ.
ಇದನ್ನೂ ಓದಿ : Bramha Muhurt:ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತಕ್ಕೆ ಏಕೆ ಪ್ರಾಧಾನ್ಯತೆ ನೀಡಲಾಗುತ್ತದೆ?
ಉತ್ತಮ ಸಂಗಾತಿಗಳಾಗಿ ಹೊರಹೊಮ್ಮುತ್ತಾರೆ :
ಮೇಷ ರಾಶಿಯವರು ಉತ್ತಮ ಜೀವನ ಸಂಗಾತಿಯಾಗಿರುತ್ತಾರೆ. ತನ್ನ ಜೀವನ ಸಂಗಾತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ತಮ್ಮ ಸಂಗಾತಿಯ ಮೇಲೆ ಅತ್ಯಂತ ನಂಬಿಕೆ, ವಿಶ್ವಾಸ ಇಟ್ಟು ಕೊಂಡಿರುತ್ತಾರೆ. ಈ ರಾಶಿಯವರು ತಮ್ಮದೇ ಆದ ಸ್ವಂತ ನಿಯಮಗಳನ್ನು ಅನುಸರಿಸಿಕೊಂಡು ಬದುಕುತ್ತಾರೆ.
36 ನೇ ವಯಸ್ಸಿನಲ್ಲಿ ಸಿಗುವುದು ಯಶಸ್ಸು :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ ತಮ್ಮ 36ನೇ ವಯಸ್ಸಿನಲ್ಲಿ ಯಶಸ್ಸು ಸಿಗುತ್ತದೆ. 16, 22, 28 ಮತ್ತು 32 ನೇ ವರ್ಷಗಳು ಕೂಡಾ ಇವರ ಜೀವದ ಪ್ರಮುಖ ಘಟ್ಟವಾಗಿರುತ್ತದೆ. ಈ ವಯಸ್ಸಿನಲ್ಲಿಯೂ ಇವರು ಮಾಡುವ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ. ಇವರ ಜೀವನದಲ್ಲಿ ಎಂದೂ ಹಣದ ಅಭಾವ ಕಾಣುವುದೇ ಇಲ್ಲ.
ಇದನ್ನೂ ಓದಿ : ಡಿಸೆಂಬರ್‌ನಲ್ಲಿ ರೂಪುಗೊಳ್ಳುವುದು ಧನರಾಜ ಯೋಗ.! 3 ರಾಶಿಯವರಿಗೆ ಧನ ವೃಷ್ಠಿ
ಮೇಷ ರಾಶಿಯವರಿಗೆ ಮಂತ್ರ :
ಓಂ ಗ್ರನ್ ಗ್ರೀನ್ ಗ್ರೌನ್ ಸ: ಗುರ್ವೇ ನಮಃ' ಅಥವಾ 'ಓಂ ಬೃಹಸ್ಪತಯೇ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳು ದೊರೆಯುತ್ತವೆ. ಇದರೊಂದಿಗೆ ಗುರುವಾರದಂದು ಬೇಳೆಕಾಳು, ಬಾಳೆಹಣ್ಣು, ಹಳದಿ ಬಟ್ಟೆ, ಹಳದಿ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಕೂಡಾ ಶುಭ ಫಲಿತಾಂಶಗಳು ಸಿಗುತ್ತವೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.