Bollywood Actor Vikram Gokhale: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಿಮಗೆ ಹೆಸರಿನಿಂದ ಪರಿಚಯವಿಲ್ಲದಿದ್ದರೂ, ಮುಖದಿಂದ ಚೆನ್ನಾಗಿ ಪರಿಚಯವಿರುವ ಹಲವು ದಿಗ್ಗಜ ನಟರಿದ್ದಾರೆ. ಇಂತಹ ನಟರು ತಮ್ಮ ವಿಶಿಷ್ಟ ಮತ್ತು ಅತ್ಯದ್ಭುತ ನಟನಾ ಸಾಮರ್ಥ್ಯದ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದೇ ಇದರ ಹಿಂದಿನ ಕಾರಣ. ಅಂತಹ ಅದ್ಭುತ ಕಲಾವಿದರಲ್ಲಿ ವಿಕ್ರಮ್ ಗೋಖಲೆ ಕೂಡ ಒಬ್ಬರು.
ವಿಕ್ರಮ್ ಗೋಖಲೆ ಇನ್ನಿಲ್ಲ
ಮಾಧ್ಯಮ ವರದಿಗಳ ಪ್ರಕಾರ ವಿಕ್ರಮ್ ಗೋಖಲೆ ಅವರು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬಹು ಅಂಗಾಂಗ ವೈಫಲ್ಯದ ಅವರ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು . ಈ ದಿಗ್ಗಜ ಬಾಲಿವುಡ್ ನಟ ತಮ್ಮ ಪತ್ನಿಯೊಂದಿಗೆ ಪುಣೆಯಲ್ಲಿಯೇ ವಾಸಿಸುತ್ತಿದ್ದರು ಮತ್ತು ತನ್ನ 77ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಪುಣೆಯಲ್ಲಿ ನಿಧನ
ವಿಕ್ರಮ್ ಗೋಖಲೆ ಪುಣೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಕ್ರಮ್ ಗೋಖಲೆ ಅವರ ನಿಧನ ಅವರ ಕುಟುಂಬ ಸದಸ್ಯರು ಸೇರಿದಂತೆ ಇಡೀ ಬಾಲಿವುಡ್ ಗೆ ದೊಡ್ಡ ಆಘಾತ ಉಂಟಾಗಿದೆ. ವಿಕ್ರಮ್ ಗೋಖಲೆ ಹಲವು ದೊಡ್ಡ ಬಾಲಿವುಡ್ ಚಿತ್ರಗಳಲ್ಲಿ ಪ್ರಮುಖ ಮತ್ತು ಅವಿಸ್ಮರಣೀಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಮ್ ದಿಲ್ ದೇ ಚುಕೆ ಸನಮ್, ಭೂಲ್ ಭುಲೈಯಾ ಹಿಡಿದು ದೇ ದನಾದನ್ ವರೆಗೆ, ವಿಕ್ರಮ್ ಗೋಖಲೆ ತಮ್ಮ ಅಭಿನಯದ ಕಾರಣ ಅಭಿಮಾನಿಗಳ ಮನಸ್ಸಿನಲ್ಲಿ ತನ್ನದೇ ಆದ ಮುದ್ರೆಯೋತ್ತಿದ್ದರು.
ಇದನ್ನೂ ಓದಿ-SSMB 28 : ಮಹೇಶ್ ಬಾಬು ಜೊತೆ ಕನ್ನಡತಿ ಶ್ರೀಲೀಲಾ ನಟನೆ..!
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು
ವಿಕ್ರಮ್ ಗೋಖಲೆ ಕಳೆದ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಕಳೆದ 15 ದಿನಗಳಿಗೂ ಹೆಚ್ಚು ಕಾಲ ಅವರು ಜೀವನ್ಮರಣದ ಹೋರಾಟ ನಡೆಸಿ ಕೊನೆಗೆ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ವಿಕ್ರಮ್ ಗೋಖಲೆ ಅವರು ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ಮರಾಠಿ ಚಿತ್ರರಂಗದಲ್ಲೂ ತಮ್ಮ ನಟನೆಯಿಂದ ಜನರ ಹೃದಯದಲ್ಲಿ ಆಳವಾದ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ-Niveditha Gowda : ತುಂಡುಡುಗೆಯಲ್ಲಿ ಮಿಂಚಿದ ಗ್ಲಾಮರ್ ಗೊಂಬೆ ನಿವೇದಿತಾಗೌಡ
ಸಂಕ್ಷಿಪ್ತ ಪರಿಚಯ
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಸಕ್ರೀಯರಾಗಿದ್ದ ವಿಕ್ರಮ್ ಗೋಖಲೆ ಸುಮಾರು 98 ಕ್ಕೂ ಅಧಿಕ ಚಿತ್ರಗಳು ಮತ್ತು ನಾಟಕಗಳಲ್ಲಿ ನಟಿಸಿದ್ದರು. 1960 ರಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ್ದ ಚಂದ್ರಕಾಂತ್ ಗೋಖಲೆ ಅವರ ಪುತ್ರ ವಿಕ್ರಮ್, ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ಬಳಿಕ 1971 ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಮರಾಠಿಯಲ್ಲಿ ಮೂಡಿಬಂದ 'ಅನುಮತಿ' ಚಿತ್ರದಲ್ಲಿನ ಅವರ ಮನೋಜ್ಞ ಅಭಿನಯಕ್ಕಾಗಿ ವಿಕ್ರಮ್ ಗೋಖಲೆ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನೊಂದೆಡೆ ರಂಗಭೂಮಿ ಕಲಾವಿದರಿಗೆಂದೇ ಸಮರ್ಪಿತವಾದ ಸರ್ವಶ್ರೇಷ್ಠ ಪ್ರಶಸ್ತಿಯಾಗಿರುವ 'ಸಂಗೀತ ನಾಟಕ್ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಗೆದ್ದು ವಿಕ್ರಮ್ ಬೀಗಿದ್ದರು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.