IPL 2022 Final: ಗಿನ್ನಿಸ್ ರೆಕಾರ್ಡ್ ಪುಟ ಸೇರಿದ IPL 2022 ಫೈನಲ್ ಪಂದ್ಯ: ಏನಿದರ ವಿಶೇಷತೆ?

IPL 2022 Final: ಐಪಿಎಲ್ 15ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಬಳಿಕ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

Written by - Bhavishya Shetty | Last Updated : Nov 28, 2022, 11:53 AM IST
    • ಐಪಿಎಲ್ 2022ರ ಫೈನಲ್ ಪಂದ್ಯಕ್ಕೆ ಅಪರೂಪದ ಗೌರವ
    • ಈ ಪಂದ್ಯವನ್ನು ವೀಕ್ಷಿಸಲೆಂದು ಸುಮಾರು 1,01,566 ಮಂದಿ ಆಗಮಿಸಿದ್ದರು
    • ಅತಿ ಹೆಚ್ಚು ಲೈವ್ ಪಂದ್ಯವಾಗಿ ವೀಕ್ಷಿಸಲ್ಪಟ್ಟ ಆಟ ಎಂಬ ಗಿನ್ನೆಸ್ ದಾಖಲೆ
IPL 2022 Final: ಗಿನ್ನಿಸ್ ರೆಕಾರ್ಡ್ ಪುಟ ಸೇರಿದ IPL 2022 ಫೈನಲ್ ಪಂದ್ಯ: ಏನಿದರ ವಿಶೇಷತೆ? title=
IPL Guinness Record

IPL 2022 Final: ಈ ವರ್ಷ ನಡೆದ ಐಪಿಎಲ್ 2022ರ ಫೈನಲ್ ಪಂದ್ಯಕ್ಕೆ ಅಪರೂಪದ ಗೌರವ ಸಿಕ್ಕಿದೆ. ಕಳೆದ ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ವೀಕ್ಷಿಸಲೆಂದು ಸುಮಾರು 1,01,566 ಮಂದಿ ಆಗಮಿಸಿದ್ದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಲೈವ್ ಪಂದ್ಯವಾಗಿ ವೀಕ್ಷಿಸಲ್ಪಟ್ಟ ಆಟ ಎಂಬ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಭಾನುವಾರ ಟ್ವಿಟರ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಈ ಸಾಧನೆಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: FIFA World Cupನಲ್ಲಿ ಸೋತ ಬೆಲ್ಜಿಯಂ: ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿ, ವಾಹನಗಳಿಗೆ ಬೆಂಕಿ

ಐಪಿಎಲ್ 15ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಬಳಿಕ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮೊದಲ ಸೀಸನ್ ನಲ್ಲಿಯೇ ಗುಜರಾತ್ ಪ್ರಶಸ್ತಿ ಗೆದ್ದಿದ್ದು, ಜೊತೆಗೆ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಇದನ್ನೂ ಓದಿ: IND vs NZ: ಸಂಜು ಸ್ಯಾಮ್ಸನ್ ರನ್ನು ಪ್ಲೇಯಿಂಗ್ XI ನಿಂದ ಕೈಬಿಟ್ಟಿದಕ್ಕೆ ಆಕ್ರೋಶ: ತಂಡದ ನಿರ್ವಹಣೆ ಬಗ್ಗೆ ಪ್ರಶ್ನಿಸಿದ ಸ್ಟಾರ್ ಆಟಗಾರ

ಇದಕ್ಕೂ ಮುನ್ನ ಈ ದಾಖಲೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಹೆಸರಿನಲ್ಲಿತ್ತು. ಆದರೆ ಇದೀಗ ಭಾರತ ಈ ದಾಖಲೆಯನ್ನು ಮುರಿದಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಸಾಮರ್ಥ್ಯ 1,00,024 ಆಗಿದ್ದರೆ, ನರೇಂದ್ರ ಮೋದಿ ಕ್ರೀಡಾಂಗಣದ ಸಾಮರ್ಥ್ಯ ಸುಮಾರು 1,10,000 ಆಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕಿಂತ ಸುಮಾರು 10,000 ಹೆಚ್ಚು ಜನರು ಈ ಸ್ಟೇಡಿಯಂನಲ್ಲಿ ಸೇರಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News