ಬೆಂಗಳೂರು : ಮುಂಬರುವ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ಕಾರು ತಯಾರಕರು ಭಾರತದಲ್ಲಿ ಡೀಸೆಲ್ ಎಂಜಿನ್ ಮಾದರಿಗಳನ್ನು ಸ್ಥಗಿತಗೊಳಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಜಪಾನಿನ ಕಾರು ತಯಾರಕ ಹೋಂಡಾ, ಮುಂದಿನ ವರ್ಷದ ಆರಂಭದಿಂದ ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಸೆಡಾನ್‌ಗಳ ಡೀಸೆಲ್ ಎಂಜಿನ್ ಆಯ್ಕೆಯನ್ನು ಹಂತಹಂತವಾಗಿ ನಿಲ್ಲಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
RDE ಮಾನದಂಡಗಳನ್ನು ಪೂರೈಸಲು ಸಾಧ್ಯವಿಲ್ಲ :
ಮುಂಬರುವ ಆರ್‌ಡಿಇ ಮಾನದಂಡಗಳನ್ನು ಡೀಸೆಲ್ ಎಂಜಿನ್‌ಗಳು ಪೂರೈಸುವುದು ಸಾಧ್ಯವಾಗದೆ ಹೋಗಬಹುದು ಎಂದು ಹೋಂಡಾ ಕಾರ್ ಸ್ ಇಂಡಿಯಾದ ಸಿಇಒ ಟಕುಯಾ ತ್ಸುಮುರಾ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಹೋಂಡಾ ಸಿಟಿ, ಅಮೇಜ್ ಮತ್ತು WR-Vನೊಂದಿಗೆ ಬರುವ ತನ್ನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂಡಾ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇದಲ್ಲದೆ, ಹೋಂಡಾ WR-V,ಜಾಝ್ ಮತ್ತು ಅಮೇಜ್‌ನ ಆಯ್ದ ಡೀಸೆಲ್ ವೆರಿಯೇಂಟ್ ಗಳ ಆರ್ಡರ್ ತೆಗೆದುಕೊಳ್ಳುವುದನ್ನು ಕೂಡಾ ನಿಲ್ಲಿಸಿದೆ.
ಇದನ್ನೂ ಓದಿ : Xiaomi ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಸ್ಟೈಲಿಶ್ ವಿನ್ಯಾಸದ Waterproof Smartphone
ಜಾಗತಿಕ ಮಟ್ಟದಲ್ಲಿ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸಿರುವ ಕಂಪನಿಗಳು :
ಜಾಗತಿಕವಾಗಿಯೂ ಅನೇಕ ಬ್ರ್ಯಾಂಡ್‌ಗಳು ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸಿವೆ. ಭಾರತೀಯ ಕಾರು ತಯಾರಕ ಮಾರುತಿ ಸುಜುಕಿ ಈಗಾಗಲೇ ಡೀಸೆಲ್ ಎಂಜಿನ್‌ಗಳನ್ನು ನಿಲ್ಲಿಸಿದೆ. ಮಾರುತಿ ಕೇವಲ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ನೀಡುತ್ತಿದೆ. ಆದರೂ ಮೈಲೇಜ್ ಮತ್ತು ಚಾಲನೆಯ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಮತ್ತು ಹೈಬ್ರಿಡ್ ತಂತ್ರಜ್ಞಾನವನ್ನು ಮಾರುತಿ ಸುಜುಕಿ ನೀಡುತ್ತಿದೆ.
CNG ಮತ್ತು ಹೈಬ್ರಿಡ್ ತಂತ್ರಜ್ಞಾನವನ್ನು ನೀಡುತ್ತಿದೆ ಮಾರುತಿ :
ಇತ್ತೀಚೆಗೆ ಬಿಡುಗಡೆಯಾದ ಗ್ರಾಂಡ್ ವಿಟಾರಾದಲ್ಲಿ ಟೊಯೋಟಾದಿಂದ ತೆಗೆದುಕೊಂಡ ಪ್ರಬಲ ಹೈಬ್ರಿಡ್ ತಂತ್ರಜ್ಞಾನವನ್ನು ಮಾರುತಿ ಬಳಸಿದೆ. ಇನ್ನು ಕಂಪನಿಯು ಸಿಎನ್‌ಜಿ ಕಾರುಗಳ ದೊಡ್ಡ ಪೋರ್ಟ್‌ಫೋಲಿಯೊವನ್ನು ಸಹ ಹೊಂದಿದೆ.
ಇದನ್ನೂ ಓದಿ : Instagram-Facebookಗೆ ಟಕ್ಕರ್ ನೀಡಲು ಸಜ್ಜಾಗಿದೆ ಜಿಯೋ .! 10 ಸೆಕೆಂಡುಗಳ ವೀಡಿಯೊಗೆ ಸಿಗುವುದು ಬಂಪರ್ ಹಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.