Drug Case : ಬೆಂಗಳೂರಿನಲ್ಲಿ NCB ಅಧಿಕಾರಿಗಳ ದಾಳಿ, ಮೂವರು ಯುವತಿಯರು ವಶಕ್ಕೆ

NCB officers Raid in Bangalore : ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ವಾಸಿಸ್ತಿದ್ದ ಕೆಲ ಯುವತಿಯರು ಡ್ರಗ್ ಸೇವನೆ ಮಾಡ್ತಿದ್ದ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ದಾಳಿ ಮಾಡಿದ್ದರು. 

Written by - Chetana Devarmani | Last Updated : Dec 1, 2022, 11:25 AM IST
  • ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳ ದಾಳಿ
  • ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಮೇಲೆ ರೇಡ್‌
  • ಮೂವರು ಯುವತಿಯರನ್ನು ವಶಕ್ಕೆ ಪಡೆದ ಅಧಿಕಾರಿಗಳು
Drug Case : ಬೆಂಗಳೂರಿನಲ್ಲಿ NCB ಅಧಿಕಾರಿಗಳ ದಾಳಿ, ಮೂವರು ಯುವತಿಯರು ವಶಕ್ಕೆ  title=
ಎನ್‌ಸಿಬಿ ಅಧಿಕಾರಿಗಳ ದಾಳಿ 

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಡ್ರಗ್‌ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಅನೇಕ ಆರೋಪಗಳು ಕೇಳಿಬಂದಿವೆ. ಶಾಲಾ ಮಕ್ಕಳು, ಯುವಕ, ಯುವತಿಯರು ಈ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಅದರಲ್ಲೂ ಡಾರ್ಕ್‌ ವೆಬ್‌ ಮೂಲಕ ಈ ಡ್ರಗ್‌ ದಂಧೆ ನಡೆಯುತ್ತಿದ್ದು, ಕಡಿವಾಣ ಹಾಕುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗುವಂತಾಗಿದೆ. ಇದೀಗ ಈ ಎಲ್ಲ ಆರೋಪಗಳಿಗೆ ಪುರಾವೆ ಎಂಬಂತೆ ಇದೆ ಈ ಪ್ರಕರಣ. ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಡಿವಾಳ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ವಾಸಿಸ್ತಿದ್ದ ಕೆಲ ಯುವತಿಯರು ಡ್ರಗ್ ಸೇವನೆ ಮಾಡ್ತಿದ್ದ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ದಾಳಿ ಮಾಡಿದ್ದರು. 

ಇದನ್ನೂ ಓದಿ : ಕೊಲೆ ಮಾಡುವ ಪ್ಲಾನ್ ಮಾಡಿಯೇ ಪತ್ನಿಯ ಹೆಸರಿನಲ್ಲಿ ವಿಮೆ: ವಿಮೆಯ 1.90 ಕೋಟಿ ರೂ.ಗಾಗಿ ಘನಘೋರ ಕೃತ್ಯ

ಪಕ್ಕಾ ಮಾಹಿತಿ‌ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಈ ದಾಳಿ ಮಾಡಿದ್ದರು. ದಾಳಿ ವೇಳೆ ಮೂವರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಉತ್ತರಭಾರತ ಮೂಲದ ಮೂವರು ಯುವತಿಯರನ್ನ ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂವರಲ್ಲಿ ಓರ್ವ ಯುವತಿಗೆ ಡಾರ್ಕ್ ವೆಬ್‌ ಜೊತೆ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಡಾರ್ಕ್ ವೆಬ್ ಮೂಲಕ ಈ ಯುವತಿ ಡ್ರಗ್ ತರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

MBA ಮುಗಿಸಿ ಖಾಸಗಿ ಕಂಪನಿಯಲ್ಲಿ ಈ ಯುವತಿ ಕೆಲಸ ಮಾಡುತ್ತಿದ್ದರು. ಅಪಾರ್ಟ್ಮೆಂಟ್ ನಲ್ಲಿ ಯುವತಿಯರು ಡ್ರಗ್ ಸೇವನೆ ಮಾಡುತ್ತಿದ್ದಾರೆ ಎಂಬ ನಿಖರ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದರು. ಒಂದು ಇನೋವಾ, ಎರಡು ಬುಲೆರೋ ವಾಹನಗಳಲ್ಲಿ ಬಂದು ದಾಳಿ ಮಾಡಿದ್ದು, ಸದ್ಯ ಮೂವರು ಯುವತಿಯರನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. 

ಇದನ್ನೂ ಓದಿ : "ನಾವು ನೀವೆಲ್ಲ ಶಿಕ್ಷಿತರಾಗಬೇಕಾದರೆ, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ಕಾರಣ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News