Warm Water For Glowing Skin: ಚಳಿಗಾಲದಲ್ಲಿ ಹೆಚ್ಚಿನ ಜನರು ಉಗುರು ಬೆಚ್ಚನೆಯ ನೀರು ಸೇವಿಸಲು ಬಯಸುತ್ತಾರೆ. ಬಿಸಿನೀರನ್ನು ಸ್ನಾನಕ್ಕೂ ಕೂಡ ಬಳಸುತ್ತಾರೆ. ಚಳಿಗಾಲದಲ್ಲಿ ಉಗುರುಬೆಚ್ಚಗಿನ ನೀರು ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಬರುವ ಅಪಾಯ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರೊಂದಿಗೆ, ಇದು ಬ್ಯಾಕ್ಟೀರಿಯಾದ ದಾಳಿಯಿಂದಲೂ ಕೂಡ ಗಂಟಲನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಕಾರಣದಿಂದಾಗಿ, ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ ಮತ್ತು ಇತರ ಅನೇಕ ಪ್ರಯೋಜನಗಳು ಇದರಿಂದಾಗುತ್ತವೆ.
ಬಿಸಿನೀರಿನ ಪ್ರಯೋಜನಗಳು
1. ಉಗುರು ಬೆಚ್ಚನೆಯ ನೀರನ್ನು ಕುಡಿಯುವುದರಿಂದ, ದೇಹದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ. ಇದಲ್ಲದೆ ಬಿಸಿ ನೀರು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ನೋಡ ವೇಗವಾಗಿ ಸುಡುತ್ತದೆ. ಬಿಸಿನೀರು ಕುಡಿಯುವುದರಿಂದ ವೇಗವಾಗಿ ತೂಕ ಕೂಡ ಇಳಿಕೆಯಾಗುತ್ತದೆ. ಬಿಸಿನೀರು ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನೂ ಕೂಡ ನಿವಾರಿಸುತ್ತದೆ.
2. ದಿನನಿತ್ಯ ಬಿಸಿನೀರು ಕುಡಿದರೆ ತ್ವಚೆಯ ಶುಷ್ಕತೆ ಕಡಿಮೆಯಾಗಿ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಮತ್ತು ಮಂಕಾಗುತ್ತಿರುವ ತ್ವಚೆಯು ಮತ್ತೆ ಯೌವನಭರಿತವಾಗಿ ಕಾಣಲಾರಂಭಿಸುತ್ತದೆ. ಇದು ದೇಹದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಿಸಿನೀರು ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯಿಂದಲೂ ಕೂಡ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ-Costliest Spice: ಚಿನ್ನ-ಬೆಳ್ಳಿಗಿಂತಲೂ ದುಬಾರಿ ಈ ಮಸಾಲೆ..!
3. ನೀವು ಪ್ರತಿದಿನ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ, ದೇಹದ ರಕ್ತ ಪರಿಚಲನೆಯು ಉತ್ತಮವಾಗಿ ಉಳಿಯುತ್ತದೆ ಮತ್ತು ದೇಹದಲ್ಲಿ ಹಾರ್ಮೋನ್ ಸಮತೋಲನ ಸರಿಯಾಗಿರುತ್ತದೆ. ಇದರೊಂದಿಗೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಬಿಸಿನೀರು ಕೂದಲಿನ ಬೆಳವಣಿಗೆಗೂ ಕೂಡ ಸಹಾಯ ಮಾಡುತ್ತದೆ ಮತ್ತು ಕೂದಲಿಗೆ ಹೊಳಪನ್ನು ತರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ-Side Effects of Guava: ಈ ಜನರೂ ಮರೆತೂ ಕೂಡ ಸೀಬೆ ಹಣ್ಣನ್ನು ಸೇವಿಸಬಾರದು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.