ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ .! ನಿಮ್ಮ ಫೋನ್ ಈ ರೀತಿ ಹ್ಯಾಕ್ ಆಗಿ ಬಿಡಬಹುದು.!

MediaTek ಚಿಪ್‌ಸೆಟ್‌ಗಳನ್ನು ಬಳಸುವ LG ಮತ್ತು Samsung ಫೋನ್‌ಗಳ ಮೇಲೆ ಇದು ದೊಡ್ಡ ಮಟ್ಟದ  ಪರಿಣಾಮ ಬೀರಲಿದೆ.  ಎಲ್ಲಾ ಆಂಡ್ರಾಯ್ಡ್ ಫೋನ್ ಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎನ್ನುವುದು ಸಮಾಧಾನಕರ ಸಂಗತಿ.   

Written by - Ranjitha R K | Last Updated : Dec 5, 2022, 03:37 PM IST
  • ಸ್ಮಾರ್ಟ್‌ಫೋನ್‌ಗಳ ಮೇಲೆ ಮಾಲ್‌ವೇರ್ ದಾಳಿಯ ಅಪಾಯ
  • ಆಂಡ್ರಾಯ್ಡ್ ಸರ್ಟಿಫಿಕೆಟ್ ಆನ್‌ಲೈನ್‌ನಲ್ಲಿ ಸೋರಿಕೆ
  • ಮಾಹಿತಿ ನೀಡಿರುವ ಗೂಗಲ್ ಉದ್ಯೋಗಿ
ಸ್ಮಾರ್ಟ್‌ಫೋನ್  ಬಳಕೆದಾರರೇ ಎಚ್ಚರ .! ನಿಮ್ಮ ಫೋನ್ ಈ ರೀತಿ ಹ್ಯಾಕ್ ಆಗಿ ಬಿಡಬಹುದು.!  title=

ಬೆಂಗಳೂರು : ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಸ್ಮಾರ್ಟ್‌ಫೋನ್‌ ಬಳಕೆದಾರರು  ಓದಲೇ ಬೇಕಾದ ಸುದ್ದಿ ಇದು. ಎರಡೂ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾಲ್‌ವೇರ್ ದಾಳಿಯ ಅಪಾಯ ಎದುರಾಗಿದೆ. ಆಂಡ್ರಾಯ್ಡ್  ಸರ್ಟಿಫಿಕೆಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎನ್ನುವ ಬಗ್ಗೆ ಇದೀಗ ವರದಿಯಾಗಿದೆ. ಇದರಿಂದ  ಲಕ್ಷಾಂತರ  ಫೋನ್ ಗಳ ಮೇಲೆ ಮಾಲ್‌ವೇರ್ ದಾಳಿಯ ಅಪಾಯವನ್ನು ತಳ್ಳಿಹಾಕುವಂತಿಲ್ಲ.  MediaTek ಚಿಪ್‌ಸೆಟ್‌ಗಳನ್ನು ಬಳಸುವ LG ಮತ್ತು Samsung ಫೋನ್‌ಗಳ ಮೇಲೆ ಇದು ದೊಡ್ಡ ಮಟ್ಟದ  ಪರಿಣಾಮ ಬೀರಲಿದೆ.  ಎಲ್ಲಾ ಆಂಡ್ರಾಯ್ಡ್ ಫೋನ್ ಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎನ್ನುವುದು ಸಮಾಧಾನಕರ ಸಂಗತಿ. 

ಮಾಹಿತಿ ನೀಡಿರುವ ಗೂಗಲ್ ಉದ್ಯೋಗಿ : 
ಹಲವಾರು ಆಂಡ್ರಾಯ್ಡ್ OEM ಗಳನ್ನು ಸಾರ್ವಜನಿಕವಾಗಿ ಪೋಸ್ಟ್ ಮಾಡಲಾಗಿದೆ ಎಂದು ಗೂಗಲ್ ಉದ್ಯೋಗಿ ಮತ್ತು ಮಾಲ್ವೇರ್ ರಿವರ್ಸ್ ಇಂಜಿನಿಯರ್ ಲುಕಾಸ್ಜ್ ಸೀವಿಯರ್ಸ್ಕಿ ತಿಳಿಸಿದ್ದಾರೆ. ಗ್ರಾಹಕರ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸಲು ವಂಚಕರು ಈ ಕೀಗಳನ್ನು ಬಳಸಬಹುದು. ಅಂದರೆ ಹ್ಯಾಕರ್‌ಗಳು  ಫೋನ್ ತಯಾರಕರು ಮತ್ತು ಅಪ್ಲಿಕೇಶನ್ ಡೆವಲಪರ್‌ನ ಹಿಂದಿನಿಂದ ಮಾಲ್‌ವೇರ್ ಅನ್ನು ಸೇರಿಸಬಹುದು. ನಂತರ ಥರ್ಡ್ ಪಾರ್ಟಿ ಆಪ್ ಇನ್ ಸ್ಟಾಲ್ ಮಾಡಿಕೊಂಡರೆ ಹ್ಯಾಕರ್ ತನ್ನ ಕೆಲಸವನ್ನು ಸರಾಗವಾಗಿ ಮಾಡಿ ಮುಗಿಸುತ್ತಾನೆ. 

ಇದನ್ನೂ ಓದಿ : ನಿಮ್ಮ ಬಳಿ ಈ ಡಿವೈಸ್ ಇದ್ದರೆ ಬಿಸಿಲಿನಿಂದಲೇ ಚಾರ್ಜ್ ಆಗುತ್ತದೆ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್

ಸಿಸ್ಟಮ್ ಇಮೇಜ್‌ಗಳಲ್ಲಿ Android ಅಪ್ಲಿಕೇಶನ್‌ಗಳಿಗೆ ಸಹಿ ಮಾಡಲು ಬಳಸಲಾಗುವ ಸೈನಿಂಗ್ ಸರ್ಟಿಫಿಕೆಟ್ ಅನ್ನು ಪ್ಲಾಟ್‌ಫಾರ್ಮ್  ಸರ್ಟಿಫಿಕೆಟ್ ಎಂದು ಕರೆಯಲಾಗುತ್ತದೆ. ಇನ್ನು ಈ ಸಮಸ್ಯೆಯ ಬಗ್ಗೆ ಈಗಾಗಲೇ ಮಾಹಿತಿ ಇರುವ ಸ್ಯಾಮ್ಸಂಗ್, ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ರೂಪಿಸಿರುವುದಾಗಿ ಹೇಳಿದೆ.  2016 ರಿಂದಲೇ ಈ ಸಮಸ್ಯೆಗೆ ಪರಿಹಾರ ಕಾರ್ಯಗಳನ್ನು ಕೈಗೊಂಡಿರುವುದಾಗಿ ಹೇಳಿದೆ. 

ಆದರೆ ಅಪ್ಲಿಕೇಶನ್  ಸೈನಿಂಗ್  ಆಕ್ಟ್  Android OS ಓದದಿರುವ ಹ್ಯಾಂಡ್‌ಸೆಟ್‌ಗಳನ್ನು ಹೇಗೆ ರಕ್ಷಿಸುತ್ತದೆ ಎನ್ನುವುದೇ ಇಲ್ಲಿ  ನಿರ್ಣಾಯಕ ಅಂಶವಾಗಿದೆ. ಗ್ರಾಹಕರ ಫೋನ್‌ಗಳನ್ನು ಡೆವಲಪರ್‌ಗಳು ಮಾತ್ರ ಪೂರೈಸುತ್ತಿದ್ದಾರೆ ಎನ್ನುವುದು ಈ ಪ್ರಕ್ರಿಯೆಯಿಂದ ಖಚಿತವಾಗುತ್ತದೆ. 

ಇದನ್ನೂ ಓದಿ : GPay ಮೂಲಕ ಯಾವುದೇ ಮಿತಿ ಇಲ್ಲದೆ ಹಣ ಪಾವತಿಸಿ, ರೂ.50 ರಿಂದ ರೂ.100 ಕ್ಯಾಶ್ ಬ್ಯಾಕ್ ಪಡೆಯಿರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News