Apple iPhone 13: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸಿ

Apple iPhone 13 Price: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈ ಆಫರ್ ಬಗ್ಗೆ ತಿಳಿದ ತಕ್ಷಣವೇ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Dec 4, 2022, 12:53 PM IST
  • ಆ್ಯಪಲ್ ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ
  • ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
  • ರಿಯಾಯಿತಿ & ವಿನಿಮಯ ಬೋನಸ್‍ ಮೂಲಕ ಕಡಿಮೆ ಬೆಲೆಗೆ ಐಫೋನ್ ಖರೀದಿಸಿ
Apple iPhone 13: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ, ಇಂದೇ ಖರೀದಿಸಿ
ಆ್ಯಪಲ್ ಐಫೋನ್ 13

ನವದೆಹಲಿ: ಐಫೋನ್ 13 ಪ್ರಚಂಡ ಸ್ಮಾರ್ಟ್‌ಫೋನ್ ಆಗಿದ್ದು, ಇದು ಐಫೋನ್ 14ರ ಸರಣಿ ಸ್ಮಾರ್ಟ್‍ಫೋನ್ ಬಿಡುಗಡೆ ಬಳಿಕವೂ ಟ್ರೆಂಡಿಂಗ್‍ನಲ್ಲಿದೆ. ಬಹುತೇಕ ಐಫೋನ್ ಬಳಕೆದಾರರಿಗೆ ಈ ಸ್ಮಾರ್ಟ್‍ಫೋನ್‍ ತುಂಬಾ ಇಷ್ಟವಾಗಿದೆ. ಅತ್ಯುತ್ತಮ ವೈಶಿಷ್ಟ್ಯಗಳಿಂದ ಗಮನ ಸೆಳೆದಿದ್ದ ಐಫೋನ್ 13 ಇಂದಿಗೂ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ.

ಐಫೋನ್ 13 ಮಾದರಿಯು ನೀವು ಇಷ್ಟಪಡುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‍ಫೋನ್‍ ಕ್ಯಾಮೆರಾವು ತುಂಬಾ ಅದ್ಭುತವಾಗಿದೆ. ಇದು ನಿಮಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ನೀವೂ ಐಫೋನ್ 13 ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ಸುವರ್ಣಾವಕಾಶ. ಈ ಸ್ಮಾರ್ಟ್‍ಫೋನ್‍ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ನೀವೂ ಊಹಿಸಲು ಸಾಧ್ಯವಾಗದ ಬೆಲೆಯಲ್ಲಿ ಈ ಫೋನ್ ಲಭ್ಯವಿದೆ.

 ಡಿಸ್ಕೌಂಟ್ ಮತ್ತು ಆಫರ್ ಎಲ್ಲಿ ಲಭ್ಯ?

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಖರೀದಿಯ ಮೇಲೆ ಈ ಕೊಡುಗೆ ನೀಡಲಾಗುತ್ತಿದೆ. ಇದು ಕೆಲವೇ ದಿನ ಲಭ್ಯವಿರುವ ರಿಯಾಯಿತಿ. ಫ್ಲಿಪ್‌ಕಾರ್ಟ್‌ನಲ್ಲಿ iPhone 13ನ ಮೂಲ ಬೆಲೆ 69,900 ರೂ. ಆಗಿದೆ, ಆದರೆ ಈಗಾಗಲೇ ಇದರ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಭರ್ಜರಿ ಡಿಸ್ಕೌಂಟ್ ಆಫರ್ ಬಳಿಕ ಐಫೋನ್ 13 ಸ್ಮಾರ್ಟ್‍ಪೋನ್‍ ನಿಮಗೆ ಕೇವಲ 65,999 ರೂ.ಗೆ ಸಿಗಲಿದೆ. 

ಇದನ್ನೂ ಓದಿ: iPhone 14 Pro Max ಕೇವಲ ₹18,000 ಕ್ಕೆ ಲಭ್ಯ! ಈ ಬಂಪರ್‌ ಆಫರ್‌ ಮಿಸ್‌ ಮಾಡದಿರಿ

APPLE iPhone 13 Starlightನ 128 GB ಸ್ಟೋರೇಜ್ ಮಾದರಿಯ ಮೇಲೆ ಈ ಡಿಸ್ಕೌಂಟ್ ನಿಮಗೆ ಸಿಗುತ್ತಿದೆ. ನೀವು ಈಗಲೇ ಇದನ್ನು ಖರೀದಿಸಿದರೆ, ಇದು ನಿಮಗೆ ಉತ್ತಮವಾದ ಡೀಲ್ ಅಂತಾನೇ ಹೇಳಬಹುದು. ಇದರ ಜೊತೆಗೆ ನೀವು ಹಳೆಯ ಐಫೋನ್ ಮಾದರಿ ಫೋನ್ ಹೊಂದಿದ್ದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದು.

ಸೂಪರ್ Exchange Bonus  

APPLE iPhone 13 Starlightನ 128 GB ಮಾದರಿಯ ಮೇಲೆ ಗ್ರಾಹಕರಿಗೆ 22,500 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಇದು ವಾಸ್ತವವಾಗಿ ವಿನಿಮಯ ಬೋನಸ್ ಆಗಿದ್ದು, ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ Exchange ಮಾಡಿಕೊಂಡಾಗ ಲಭ್ಯವಾಗಲಿದೆ. ನಿಮ್ಮ ಹಳೆಯ ಐಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಅತ್ಯುತ್ತಮ ರಿಯಾಯಿತಿ ನಿಮಗೆ ದೊರೆಯಲಿದೆ. ಈ ಡಿಸ್ಕೌಂಟ್ ಪಡೆದ ಬಳಿಕ ನೀವು ಅತ್ಯಂತ ಕಡಿಮೆ ಬೆಲೆಗೆ ಐಫೋನ್ 13 ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಫ್ಲಿಪ್‌ಕಾರ್ಟ್‌ ವೆಬ್‍ಸೈಟ್‍ಗೆ ಭೇಟಿ ನೀಡಿ.

ಇದನ್ನೂ ಓದಿ: Mosquito ಕಾಟವೇ? ಸೊಳ್ಳೆ ಓಡಿಸಲು ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್‌ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News